ಆಲಮಟ್ಟಿಯಿಂದ ಚಿತ್ರದುರ್ಗದವರೆಗೆ ಹೊಸ ರೈಲು ಮಾರ್ಗ ಮಂಜೂರಾತಿ

ಕೆಂದ್ರ ಸರ್ಕಾರವು ದಿನಾಂಕಃ- ೭-೩-೨೦೧೮ ರಂದು ಈಗಾಗಲೇ ಬೇಡಿಕೆ ಸಲ್ಲಿಸಿದಂತೆ ಆಲಮಟ್ಟಿಯಿಂದ ಚಿತ್ರದುರ್ಗಾದವರೆಗೆ ಹೊಸ ರೈಲು ಮಾರ್ಗವನ್ನು ಮಂಜೂರಾತಿ ನೀಡಿ ಸರ್ವೇ ಕಾರ್ಯಕ್ಕಾಗಿ ರೂ.೧.೩೨ ಕೋಟಿಗಳನ್ನು ಮಂಜೂರು ಮಾಡಿರುತ್ತಾರೆ. ಇದರಿಂದಾಗಿ ಸೋಲ್ಲಾಪುರ, ವಿಜಯಪುರ,ಬಾಗಲಕೋಟ, ಕೊಪ್ಪಳ, ಹೊಸಪೇಟೆ ಜನತೆಗೆ ತುಂಬಾ ಅನುಕೂಲವಾಗುವದು. ಅಲ್ಲದೇ ವಾಣಿಜ್ಯ, ಕೈಗಾರಿಕೆ ಮತ್ತು ಪ್ರವಾಸೋದ್ಯಮ ಅಭಿವೃದ್ದಿಗೆ ಪೂರಕವಾಗಲಿದೆ. ಈಗಿರುವ  ಅಂದರೆ ವಾಯಾ ಗುಂಟಕಲ್ ಮತ್ತು ಹುಬ್ಬಳ್ಳಿ ಮೂಲಕ ಇರುವ ಮಾರ್ಗಕ್ಕಿಂತ ೧೭೦ ಕಿಮಿ ಅಂತರ ಕಡಿಮೆಯಾಗಿ ಹಾಗು ಸುಮಾರು ೨.೩೦ ಗಂಟೆಗಳ ಕಾಲ ಪ್ರವಾಸದ ಅವದಿಯೂ ಕಡಿಮೆಯಾಗಿ ಜನರಿಗೆ ಅನುಕೂಲವಾಗಲಿದೆ. ಈ ಹೊಸ ರೈಲು ಮಾರ್ಗ ಕೂಡಲಸಂಗಮ, ಹುನಗುಂದಾ, ಇಲಕಲ್, ಕುಷ್ಟಗಿ, ಕುಕನಪಳ್ಳಿ, ಗಿಣಿಗೇರಿ/ಹಿಟ್ನಾಳ, ಟಿ.ಬಿ.ಡ್ಯಾಂ ಮತ್ತು ಕೂಡ್ಲಿಗಿ ಒಳಗೊಂಡಿರುತ್ತದೆ.

ಇಂತಹ ಮಹತ್ವದ ಯೋಜನೆಯನ್ನು ಮಂಜೂರು ಮಾಡಿದ ಮಾನ್ಯ ಪ್ರಧಾನ ಮಂತ್ರಿಗಳು, ರೈಲ್ವೆ ಮಂತ್ರಿಗಳು, ರೈಲ್ವೆ ಮಂಡಳಿಯ ಅಧಿಕಾರಿಗಳು ಮತ್ತು ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಮಾನ್ಯ ಸಂಸದರು ಅಭಿನಂದನೆ ಸಲ್ಲಿಸಿರುತ್ತಾರೆ.