ಆರ್. ಶಂಕರ ಕೊಪ್ಪಳ ಜಿಲ್ಲೆಯ ಪಿಕ್ನಿಕ್ ಮಂತ್ರಿ  : ಸಿ ವಿ ಚಂದ್ರಶೇಖರ ಲೇವಡಿ

Koppal News ಕೊಪ್ಪಳ ಜಿಲ್ಲೆಗೆ ಉಸ್ತುವಾರಿ ಮಂತ್ರಿಗಳಾದ ಆರ್ ಶಂಕರ್ ಅವರು ಒಂದು ದಿನದ ಮಟ್ಟಿಗೆ ಬಂದು ಹೊಗುವದರಿಂದ ಏನೂ ಲಾಭವಿಲ್ಲ ,ಜಿಲ್ಲೆಗೆ ಒಂದು ದಿನದ ಪಿಕ್ನಿಕ್ ಮಂತ್ರಿಯನ್ನು ಸಮ್ಮಿಶ್ರ ಸರಕಾರ ನಿಡಿದೆ ಎಂದು ಬಿಜೆಪಿ ರಾಷ್ಟ್ರೀಯ ಪರಿಷ್ ಸದಸ್ಯರಾದ  ಸಿ ವಿ ಚಂದ್ರಶೇಖರ ಅವರು ವಾಗ್ದಾಳಿ ನಡೆಸಿದ್ದಾರೆ

ಜಿಲ್ಲೆಯಲ್ಲ ಭೀಕರ ಬರಗಾಲ ಆವರಿಸಿದ್ದು ಸರಕಾರ ಕೊಪ್ಪಳ, ಕುಷ್ಟಗಿ, ಗಂಗಾವತಿ, ಹಾಗೂ ಯಲಬುರ್ಗಾ ತಾಲೂಕಗಳನ್ನು ಬರಪಿಡಿತ ತಾಲ್ಲೂಕು ಎಂದು ಘೊಷಣೆ ಮಾಡಿದ್ದು ಕೇವಲ ನಾಮಕಾವಸ್ಥೆ ಎಂಬಂತಾಗಿದೆ ಇದುವರೆಗೂ ಯಾವುದೇ ರೀತಿಯ ಕ್ರಮಗಳನ್ನು ಕೈಗೊಂಡಿಲ್ಲ, ಜಿಲ್ಲಾ ಉಸ್ತುವಾರಿ ಸಚಿವರು ಆಗೊಮ್ಮೆ ಇಗೊಮ್ಮೆ ಬಂದು ಅಧಿಕಾರಿಗಳ ಸಭೆ ಮಾಡಿ ಹೊಗಿದ್ದಾರೆ. ಆದರೆ ಆಡಳಿತ ವರ್ಗ ಚುರುಕುಗೊಂಡಿಲ್ಲ, ಮುಂಗಾರು ಹಂಗಾಮು ಸಂಪೂರ್ಣ ವಿಫಲವಾಗಿದ್ದು, ಹಿಂಗಾರು ಸಹಿತ ಮಳೆ ಬಾರದೆ ರೈತರು ಬರಗಾಲ ಎದುರಿಸುವ ಪರಿಸ್ಥಿತಿ ಎದುರಾಗಿದೆ ಅಧಿಕಾರಿಗಳು ರೈತರ ಹೊಲಗಳಿಗೆ ಹೊಗದೆ ಸಮರ್ಪಕವಾಗಿ ಸಮೀಕ್ಷೆ ಮಾಡದೆ ಇರುವುದು ಜಿಲ್ಲಾಡಳಿತದ ನಿಷ್ಕ್ರಿಯತೆಯನ್ನು ತೊರಿಸುತ್ತದೆ. ಸಮಗ್ರ ಸಮೀಕ್ಷೆ ಮಾಡಿ ಪ್ರತಿಯೊಬ್ಬ ರೈತನಿಗೂ ಪರಿಹಾರವನ್ನು ನೀಡಬೆಕು ಎಂದು ಸಿ ವಿ ಚಂದ್ರಶೇಖರ ಸರಕಾರವನ್ನು ಆಗ್ರಹಿಸಿದರು 

ಗೋ ಶಾಲೆ ತೆರೆಯಬೆಕು: ಜಿಲ್ಲೆಯಲ್ಲಿ ಭಿಕರ ಬರಗಾಲ ಆವರಿಸಿರುವದರಿಂದ ದನ- ಕರುಗಳಿಗೆ ಕುಡಿಯಲು ನೀರು ಹಾಗೂ ಮೇವಿನ ಕೊರತೆಯಿಂದ ರೈತಾಗಿ ವರ್ಗ ತೊಂದರೆಯಲ್ಲಿದ್ದು ಪ್ರತಿ ಹೊಬಳಿಗೆ ಐದು ಗೊಶಾಲೆಗಳನ್ನೆ ತೆರೆಯುವ ಮುಲಕ ಜಾನುವಾರುಗಳ ರಕ್ಷಣೆಗೆ ಮುಂದಾಗಬೆಕು ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಯಲ್ಲಿಯೇ ಠಿಕಾಣಿ ಹೂಡಬೇಕು ಆ ಮೂಲಕ ಜಿಲ್ಲೆಯ ಅಭಿವೃದ್ಧಿಯ ಕಡೆ ಗಮನ ಹರಿಸಬೆಕು ಇಲ್ಲವಾದರೆ ನಮ್ಮ ಜಿಲ್ಲೆಯವರನ್ನೆ ಅಥವಾ ಅಕ್ಕ- ಪಕ್ಕದ ಜಿಲ್ಲೆಯವರನ್ನು ಉಸ್ತುವಾರಿ ಸಚಿವರನ್ನಾಗಿ ನೇಮಿಸಬೆಕೆಂದು ಸಿ ವಿ ಚಂದ್ರಶೇಖರ ಅವರು ಸರಕಾರವನ್ನು ಒತ್ತಾಯಿಸಿದರು

Please follow and like us:
error