ಆನೆಗೊಂದಿ ಉತ್ಸವ : ವಿವಿಧ ಸ್ಪರ್ಧೆ ಹಾಗೂ ಕಾರ್ಯಕ್ರಮಗಳ ವೇಳಾ ಪಟ್ಟಿ 


ಕೊಪ್ಪಳ ಡಿ. 30 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯ ಐತಿಹಾಸಿಕ ಕ್ಷೇತ್ರವಾದ ಗಂಗಾವತಿ ತಾಲ್ಲೂಕಿನ ಆನೆಗೊಂದಿ ಉತ್ಸವವು 2020ರ ಜನವರಿ 09 ಮತ್ತು 10 ರಂದು ನಡೆಯಲಿದ್ದು, ಉತ್ಸವದ ಅಂಗವಾಗಿ ಜರುಗಲಿರುವ ವಿವಿಧ ಸ್ಪರ್ಧೆ ಹಾಗೂ ಕಾರ್ಯಕ್ರಮಗಳ ವೇಳಾ ಪಟ್ಟಿಯನ್ನು ಪ್ರಕಟಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಆನೆಗೊಂದಿ ಉತ್ಸವ ಆಚರಣೆ ಸಮಿತಿ ಅಧ್ಯಕ್ಷರಾದ ಪಿ.ಸುನೀಲ್ ಕುಮಾರ್ ಅವರು ತಿಳಿಸಿದ್ದಾರೆ.  

ಉತ್ಸವದ ಅಂಗವಾಗಿ ಈಗಾಗಲೇ ಉತ್ಸವದ ಲಾಂಛನ ಮತ್ತು ಶೀರ್ಷಿಕೆ, ಪ್ರೋಮೋ ಬಿಡುಗಡೆ ಮಾಡಲಾಗಿದೆ.  ಅಲ್ಲದೇ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಪ್ರಬಂಧ ಸ್ಪರ್ಧೆ ಜರುಗಿಸಲಾಗಿದೆ.  ಜನವರಿ. 02 ರಿಂದ ನಡೆಯಲಿರುವ ವಿವಿಧ ಕಾರ್ಯಕ್ರಮಗಳ ವಿವರ ಇಂತಿದೆ.    
ಸ್ಪರ್ಧೆ ಹಾಗೂ ವಿವಿಧ ಕಾರ್ಯಕ್ರಮಗಳ ವಿವರ;
  ಪದವಿ ಪೂರ್ವ ಹಾಗೂ ಪದವಿ ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆಯನ್ನು ಜನವರಿ. 02 ರಂದು ಬೆಳಿಗ್ಗೆ 10 ಗಂಟೆಗೆ ಕೊಪ್ಪಳ ನಗರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದೆ.  ಜ. 03 ರಂದು ಬೆಳಿಗ್ಗೆ 09 ಗಂಟೆಗೆ ಗಂಗಾವತಿ ತಾಲ್ಲೂಕು ಕ್ರೀಡಾಂಗಣದಲ್ಲಿ ಗಾಳಿಪಟ ಉತ್ಸವ ಮತ್ತು ಬೈಕ್ ಸ್ಟಂಟ್, ಬೆಳಿಗ್ಗೆ 10 ಕ್ಕೆ ಆನೆಗೊಂದಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಶಿಲ್ಪಕಲಾ ಕೆತ್ತನೆ ಮತ್ತು ಛಾಯಾಚಿತ್ರ ಸ್ಪರ್ಧೆ, ಜ. 04 ರಂದು ಬೆಳಿಗ್ಗೆ 10 ಗಂಟೆಗೆ ಶ್ರೀ ಕೃಷ್ಣದೇವರಾಯ ವೇದಿಕೆಯ ಹತ್ತಿರ ಪುರುಷ ಮತ್ತು ಮಹಿಳೆಯರಿಗೆ ಬಾಲ್ ಬ್ಯಾಡ್ಮಿಂಟನ್ ಸ್ಪರ್ಧೆ, ಜ. 05 ರಂದು ಬೆಳಿಗ್ಗೆ 07 ಗಂಟೆಗೆ ಅಂಜನಾದ್ರಿ ಪರ್ವತದಿಂದ ಚಿಂತಾಮಣಿ ಮಠದಿಂದ ನದಿ ತೀರದವರೆಗೆ ಪಾರಂಪರಿಕ ನಡಿಗೆ ಸ್ಪರ್ಧೆ, ಬೆಳಿಗ್ಗೆ 09 ಕ್ಕೆ ಆನೆಗೊಂದಿ ಸರ್ಕಾರಿ ಪ್ರೌಢಶಾಲೆಯಲ್ಲಿ ಮಹಿಳೆಯರಿಗೆ “ಅಡುಗೆ ರಾಣಿ” ಸ್ಪರ್ಧೆ, ಜ. 06 ರಂದು ಬೆಳಿಗ್ಗೆ 07 ಗಂಟೆಗೆ ಶ್ರೀ ರಂಗನಾಥ ದೇವಸ್ಥಾನದಿಂದ ಹುಚ್ಚಪ್ಪಯ್ಯನ ಮಠದವರೆಗೆ ಸೈಕಲ್ ಜಾಥಾ ಸ್ಪರ್ಧೆ, ಬೆಳಿಗ್ಗೆ 09ಕ್ಕೆ ಶ್ರೀ ಕೃಷ್ಣದೇವರಾಯ ವೇದಿಕೆ ಹತ್ತಿರ ಪುರುಷ ಹಾಗೂ ವಿಶೇಷ ಚೇತನರಿಗೆ ಕಬಡ್ಡಿ ಸ್ಪರ್ಧೆ, ಬೆಳಿಗ್ಗೆ 10 ಗಂಟೆಗೆ ಸರ್ಕಾರಿ ಪ್ರೌಢಶಾಲೆಯಲ್ಲಿ ಪುರುಷ ಮತ್ತು ಮಹಿಳೆಯರಿಗೆ ಬಾಲಿಬಾಲ್ ಸ್ಪರ್ಧೆ, ಜ. 07 ರಂದು ಬೆಳಿಗ್ಗೆ 09 ಗಂಟೆಗೆ ಆನೆಗೊಂದಿ ಗ್ರಾಮದಲ್ಲಿ ತಳಿರು ತೋರಣ ಅಲಂಕಾರ ಸ್ಪರ್ಧೆ, ಶ್ರೀ ಕೃಷ್ಣದೇವರಾಯ ವೇದಿಕೆ ಹತ್ತಿರ ಸ್ಲೋಸೈಕಲ್ ಸ್ಪರ್ಧೆ, ಕಲ್ಲು ಗುಂಡು ಎತ್ತುವ ಸ್ಪರ್ಧೆ, ಸಂಗ್ರಾಣಿ ಕಲ್ಲು ಎತ್ತುವ ಸ್ಪರ್ಧೆ, ಮಲ್ಲಕಂಬ ಪ್ರದರ್ಶನ, ವಿಶೇಷ ಚೇತನರಿಗೆ ವೀಲ್‌ಚೇರ್ ಸ್ಪರ್ಧೆ, ಶ್ರೀ ಕೃಷ್ಣದೇವರಾಯ ಪುತ್ಥಳಿ ಹತ್ತಿರ ಕೆಸರುಗದ್ದೆ ಓಟ, ಕೆಸರುಗದ್ದೆ ಹಗ್ಗ ಜಗ್ಗಾಟ, ಶ್ರೀ ರಂಗನಾಥ ದೇವಸ್ಥಾನದ ಆವರಣದಲ್ಲಿ ರಂಗೋಲಿ ಸ್ಪರ್ಧೆ, ಪಗಡೆ ಆಟ, ಸರ್ಕಾರಿ ಪ್ರೌಢಶಾಲೆಯಲ್ಲಿ ಚಿತ್ರಕಲಾ ಸ್ಪರ್ಧೆ, ಜ. 08 ರಂದು ಬೆಳಿಗ್ಗೆ 09 ಗಂಟೆಗೆ ಶ್ರೀ ಕೃಷ್ಣದೇವರಾಯ ವೇದಿಕೆ ಹತ್ತಿರ ಪುರುಷ ಹಾಗೂ ಮಹಿಳೆಯರಿಗೆ ಪ್ರತ್ಯೇಕ ಕುಸ್ತಿ, ಸಂಜೆ 05 ಕ್ಕೆ ಶ್ರೀ ವಿದ್ಯಾರಣ್ಯ ವೇದಿಕೆಯಲ್ಲಿ ಪ್ರಶಸ್ತಿ ವಿತರಣೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.  
ಜ. 09 ರಂದು ಬೆಳಿಗ್ಗೆ 07 ಗಂಟೆಗೆ ಗಂಗಾವತಿ ಬಸ್ ನಿಲ್ದಾಣದಿಂದ ಆನೆಗೊಂದಿಯ ಶ್ರೀ ಕೃಷ್ಣದೇವರಾಯ ವೇದಿಕೆಯವರೆಗೆ ಪುರುಷರ ಮ್ಯಾರಾಥಾನ್ ಮತ್ತು ಗಂಗಾವತಿ ಬಸ್ ನಿಲ್ದಾಣದಿಂದ ಸಂಗಾಪುರ ಗ್ರಾಮದವರೆಗೆ ಮಹಿಳೆಯರ ಮ್ಯಾರಾಥಾನ್, ಬೆಳಿಗ್ಗೆ 09ಕ್ಕೆ ಆನೆಗೊಂದಿಯ ದುರ್ಗಾದೇವಿ ದೇವಸ್ಥಾನದಿಂದ ಆನೆಗೊಂದಿ ಉತ್ಸವಕ್ಕೆ ಚಾಲನೆ.  ಬೆಳಿಗ್ಗೆ 11 ಗಂಟೆಗೆ ಆನೆಗೊಂದಿಯ ಗಗನ ಮಹಲ್ ಹತ್ತಿರ ಫಲ-ಪುಷ್ಪ ಪ್ರದರ್ಶನ, ಶ್ರೀ ವಿದ್ಯಾರಣ್ಯ ವೇದಿಕೆಯಲ್ಲಿ ಕವಿಗೋಷ್ಠಿ, 11-15ಕ್ಕೆ ಶ್ರೀ ಕೃಷ್ಣದೇವರಾಯ ವೇದಿಕೆ ಹತ್ತಿರ ಕೃಷಿ, ಶಿಲ್ಪಕಲಾ, ಚಿತ್ರಕಲಾ, ಛಾಯಾಚಿತ್ರ ಮತ್ತು ಕರಕುಶಲ ವಸ್ತು ಪ್ರದರ್ಶನ, ಜ. 09 ರಿಂದ 11ರವರೆಗೆ ಬೆಳಿಗ್ಗೆ 11-30 ಗಂಟೆಗೆ ಸಾಣಾಪುರ ಕೆರೆಯಲ್ಲಿ ಜಲ ಸಾಹಸ ಕ್ರೀಡೆಗಳು, ಆನೆಗೊಂದಿಯ ಋಷಿಮುಖ ಪರ್ವತದಲ್ಲಿ ರಾಕ್ ಕ್ಲೆöÊಬಿಂಗ್ ಜರುಗಲಿದೆ.  
ಜ. 09 ರಂದು ಮಧ್ಯಾಹ್ನ 02-30ಕ್ಕೆ ಶ್ರೀ ವಿದ್ಯಾರಣ್ಯ ವೇದಿಕೆಯಲ್ಲಿ ವಿಚಾರ ಸಂಕಿರಣ, ಸಂಜೆ 05 ಗಂಟೆಗೆ ಶ್ರೀ ಕೃಷ್ಣದೇವರಾಯ ವೇದಿಕೆ ಹಾಗೂ ಶ್ರೀ ವಿದ್ಯಾರಣ್ಯ ವೇದಿಕೆಯಲ್ಲಿ (ಎರಡು ವೇದಿಕೆಗಳಲ್ಲಿ) ಉತ್ಸವದ ಉದ್ಘಾಟನಾ ಸಮಾರಂಭ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.  ಶ್ರೀ ಕೃಷ್ಣದೇವರಾಯ ವೇದಿಕೆಯಲ್ಲಿ ಸಂಜೆ 06 ಗಂಟೆಗೆ ಪ್ರಾಣೇಶ ಗಂಗಾವತಿಯವರಿAದ ಹಾಸ್ಯೋತ್ಸವ ಕಾರ್ಯಕ್ರಮ, ರಾತ್ರಿ 07-30ಕ್ಕೆ ಅರ್ಜುನ ಇಟಗಿಯವರಿಂದ ರಸಮಂಜರಿ ಕಾರ್ಯಕ್ರಮ, ರಾತ್ರಿ 08 ಗಂಟೆಗೆ ಮೂಡಬಿದರಿಯ ನುಡಿಸಿರಿ ವಿರಾಸತ್ ಆಳ್ವಾಸ್ ತಂಡದಿAದ ಸಾಂಸ್ಕೃತಿಕ ಕಾರ್ಯಕ್ರಮ, ರಾತ್ರಿ 10 ಗಂಟೆಗೆ ಖ್ಯಾತ ಹಿನ್ನೆಲೆ ಗಾಯಕ ವಿಜಯ ಪ್ರಕಾಶ ಹಾಗೂ ಸಂಗಡಿಗರಿAದ ರಸಮಂಜರಿ ಕಾರ್ಯಕ್ರಮ ನಡೆಯಲಿವೆ.  
ಜ. 10 ರಂದು ಶ್ರೀ ವಿದ್ಯಾರಣ್ಯ ವೇದಿಕೆಯಲ್ಲಿ ಬೆಳಿಗ್ಗೆ 10 ಗಂಟೆಗೆ ಮಹಿಳಾ ಗೋಷ್ಠಿ, ಮಧ್ಯಾಹ್ನ 02-30ಕ್ಕೆ ಯುವ ಗೋಷ್ಠಿ ನಡೆಯಲಿದೆ.  ಸಂಜೆ 05 ಗಂಟೆಗೆ ಶ್ರೀ ಕೃಷ್ಣದೇವರಾಯ ಹಾಗೂ ಶ್ರೀ ವಿದ್ಯಾರಣ್ಯ ವೇದಿಕೆಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳ ವೈಭವ, ಶ್ರೀ ಕೃಷ್ಣದೇವರಾಯ ವೇದಿಕೆಯಲ್ಲಿ ಸಂಜೆ 06 ಗಂಟೆಗೆ ಸಮಾರೋಪ ಸಮಾರಂಭ ಹಾಗೂ ಸಾಂಸ್ಕೃತಿ ಕಾರ್ಯಕ್ರಮಗಳು ಮುಂದುವರೆಯಲಿವೆ.  ರಾತ್ರಿ 07 ಗಂಟೆಗೆ ಗಾಯಕಿ ಗಂಗಮ್ಮ ಅವರಿಂದ ಯುಗಳ ಗೀತೆ ಕಾರ್ಯಕ್ರಮ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.                

Please follow and like us:
error