fbpx

ಆನೆಗೊಂದಿ ಉತ್ಸವ ಜನೆವರಿ 03 ರಿಂದ ವಿವಿಧ ಕ್ರೀಡೆಗಳು : ಪಿ.ಸುನೀಲ್ ಕುಮಾರ್


ಕೊಪ್ಪಳ ಡಿ. 27  : ಪ್ರಸಕ್ತ ಸಾಲಿನ ಆನೆಗೊಂದಿ ಉತ್ಸವ ಆಚರಣೆ ಅಂಗವಾರಿ 2020ರ ಜನವರಿ 03 ರಿಂದ ವಿವಿಧ ಕ್ರೀಡೆಗಳು ಜರುಗಲಿವೆ ಎಂದು ಕೊಪ್ಪಳ ಜಿಲ್ಲಾಧಿಕಾರಿ ಹಾಗೂ ಆನೆಗೊಂದಿ ಉತ್ಸವ ಸಮಿತಿ ಅಧ್ಯಕ್ಷ ಪಿ.ಸುನೀಲ್ ಕುಮಾರ್ ತಿಳಿಸಿದ್ದಾರೆ.
ಪುರಾತನ ಇತಿಹಾಸವುಳ್ಳ ಆನೆಗೊಂದಿಯ ಉತ್ಸವವನ್ನು ಕರ್ನಾಟಕ ಸರ್ಕಾರ ಹಾಗೂ ಕೊಪ್ಪಳ ಜಿಲ್ಲಾಡಳಿತದ ವತಿಯಿಂದ 2020ರ ಜನವರಿ. 09 ಮತ್ತು 10 ರಂದು ಜಿಲ್ಲೆಯ ಗಂಗಾವತಿ ತಾಲೂಕಿನ ಆನೆಗೊಂದಿಯಲ್ಲಿ ವಿಜೃಂಭಣೆಯಿAದ ಆಚರಿಸಲಾಗುತ್ತಿದೆ.  ಈ ಉತ್ಸವದಲ್ಲಿ ಗ್ರಾಮೀಣ ಕ್ರೀಡೆಗಳಿಗೆ ಹೆಚ್ಚಿನ ಉತ್ತೇಜನ ನೀಡಲು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಯೋಗದಲ್ಲಿ ಕ್ರೀಡಾಕೂಟವನ್ನು ಹಮ್ಮಿಕೊಳ್ಳಲಾಗಿದೆ.  ಆನೆಗೊಂದಿ ಉತ್ಸವದ ಅಂಗವಾಗಿ ಜನವರಿ. 03 ರಿಂದ 09 ರವರೆಗೆ ವಿವಿಧ ಕ್ರೀಡಾ, ಸಾಂಪ್ರದಾಯಿಕ ಸಾಹಸ ಕ್ರೀಡೆಗಳನ್ನು ಏರ್ಪಡಿಸಲಾಗಿದ್ದು, ವಿಜೇತರಿಗೆ ಆಕರ್ಷಕ ನಗದು ಬಹುಮಾನ ನೀಡಲಾಗುವುದು.  ಗ್ರಾಮೀಣ ಕ್ರೀಡೆ ಆಕರ್ಷಣೆಯಾದ ಕುಸ್ತಿ ಸ್ಪರ್ಧೆಯಲ್ಲಿ ಪುರುಷರಿಗೆ ಆನೆಗೊಂದಿ ಕುಮಾರ, ಆನೆಗೊಂದಿ ಕೇಸರಿ ಹಾಗೂ ಮಹಿಳೆಯರಿಗೆ ಆನೆಗೊಂದಿ ಕುಮಾರಿ, ಆನೆಗೊಂದಿ ಕಿಶೋರಿ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ.
ಆನೆಗೊಂದಿ ಉತ್ಸವದ ಪ್ರಚಾರಾಂದೋಲನ ಪ್ರಾರಂಭೋತ್ಸವ (ಅuಡಿಣಚಿiಟಿ ಖಚಿiseಡಿ) ಅಂಗವಾಗಿ ಬೈಕ್ ಸ್ಟಂಟ್ ಹಾಗೂ ಗಾಳಿಪಟ ಉತ್ಸವ ನೊಪಾಸನಾ ತಂಡದಿAದ ಗಂಗಾವತಿಯ ಶ್ರೀ ಚನ್ನಬಸವೇಶ್ವರ ತಾಲೂಕು ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿದೆ.  ಅದೇ ದಿನ ಶಿಲ್ಪಕಲಾ ಸ್ಪರ್ಧೆ ಫೋಟೋಗ್ರಫಿ ಸ್ಪರ್ಧೆ ಆನೆಗೊಂದಿಯಲ್ಲಿ ಪ್ರಾರಂಭವಾಗಲಿದೆ.  ವಿಶೇಷ ಆಕರ್ಷಣೆಯಾಗಿ ಪುರುಷರಿಗೆ ಮತ್ತು ಮಹಿಳೆಯರಿಗೆ ಆನೆಗೊಂದಿ ಕುಮಾರ/ಕುಮಾರಿ ಹಾಗೂ ಆನೆಗೊಂದಿ ಕೇಸರಿ/ ಕಿಶೋರಿ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ.  ಸ್ಪರ್ಧೆಗಳ ವಿವರ ಈ ಕೆಳಗಿನಂತಿದೆ.
ಗ್ರಾಮೀಣ ಕ್ರೀಡೋತ್ಸವ;
ಗ್ರಾಮೀಣ ಕ್ರೀಡೋತ್ಸವದಲ್ಲಿ ಪುರುಷ ಹಾಗೂ ಮಹಿಳೆಯರಿಗೆ ಕೆಸರು ಗದ್ದೆ ಹಗ್ಗ ಜಗ್ಗಾಟ, ಕೆಸರು ಗದ್ದೆ ಓಟ, ಮಲ್ಲಕಂಬ ಪ್ರದರ್ಶನ, ಕುಸ್ತಿ (ಆನೆಗೊಂದಿ ಕುಮಾರ/ ಕುಮಾರಿ/ ಕಿಶೋರಿ/ ಕೇಸರಿ ಸ್ಪರ್ಧೆ), ಪುರಷರಿಗೆ ಕಬಡ್ಡಿ, ಮಹಿಳೆಯರಿಗೆ ವಾಲಿಬಾಲ್, ಅಲ್ಲದೇ ಸ್ಲೋ ಸೈಕಲ್ ರೇಸ್, ಕಲ್ಲುಗುಂಡು ಎತ್ತುವುದು, ಸಂಗ್ರಾಣಿ ಕಲ್ಲು ಎತ್ತುವುದು ಮತ್ತು ಬಾಲ್ ಬ್ಯಾಡ್ಮಿಂಟನ್ ಸ್ಪರ್ಧೆ ನಡೆಯಲಿದೆ.
ಸಂಪ್ರದಾಯಿಕ ಸ್ಪರ್ಧೆಗಳು;
ಸಾಂಪ್ರದಾಯಿಕ ಸ್ಪರ್ಧೆಗಳಲ್ಲಿ ಶಿಲ್ಪಕಲೆ, ರಂಗೋಲಿ (ಮಹಿಳೆ), ತಳಿರುತೋರಣ ಅಲಂಕಾರ                      (ಆನೆಗೊಂದಿ ವಾರ್ಡವಾರು), ಚಿತ್ರಕಲಾ, ಫೋಟೋಗ್ರಫಿ, ಪಗಡೆಯಾಟ, ಅಡಿಗೆ ರಾಣಿ ಕಾರ್ಯಕ್ರಮದಡಿ ವಿಜಯನಗರ ಕಾಲದ ಪಾರಂಪರಿಕ ಅಡುಗೆ ಹಾಗೂ ಸ್ಥಳೀಯ ಪದ್ಧತಿ ಅಡುಗೆ, ಎರಡು ಪ್ರಕಾರಗಳಲ್ಲಿ ಅಡುಗೆ ಸ್ಪರ್ಧೆ ಜರುಗಲಿದೆ.
ಭೂ ಸಾಹಸ ಕ್ರೀಡೆ;
ಭೂ ಸಾಹಸ ಕ್ರೀಡೆಯಲ್ಲಿ ಟ್ರೆಕ್ಕಿಂಗ್, ರಾಕ್ ಕ್ಲೆöÊಂಬಿAಗ್, ಲ್ಯಾಡರ್ ಕ್ಲೆöÊಂಬಿAಗ್, ಟಾರ್ಗೆಟ್ ಶೂಟಿಂಗ್, ಝಿಪ್‌ಲೈನ್, ಅಬ್‌ಸ್ಟಾö್ಯಕಲ್ಸ್, ರ‍್ಯಾಪೆಲಿಂಗ್, ಸ್ಪೋಟ್ಸ್ ಕ್ಲೆöÊಂಬಿAಗ್, ರೋಪ್ ಕ್ಲೆöÊಂಬಿAಗ್, ಅಲ್ಪೆöÊನ್ ನೆಟ್ ಕ್ರೀಡೆ ನಡೆಯಲಿವೆ.
ಜಲ ಸಾಹಸ ಕ್ರೀಡೆಗಳು;
ಜಲ ಸಾಹಸ ಕ್ರೀಡೆಗಳಲ್ಲಿ ಬೋಟಿಂಗ್, ಸರ್ಫ ಮಾಡ್ಯೂಲ್, ಕಯಾಕಿಂಗ್, ವಾಟರ್ ಸರ್ಫಿಂಗ್, ರೋಯಿಂಗ್, ಕೆನೊಯಿಂಗ್, ಮೋಟಾರ್ ಬೋಟ್ ರೈಡ್, ಬನಾನ ರೈಡ್ ಹಾಗೂ ವಾಟರ್ ಸ್ಕೂಟರ್ ಸ್ಪರ್ಧೆ ಜರುಗಲಿದೆ.
ಮ್ಯಾರಾಥಾನ;
ಪುರುಷರಿಗೆ 12 ಕಿ.ಮೀ ಹಾಗೂ ಮಹಿಳೆಯರಿಗೆ 6 ಕಿ.ಮೀ. ಮ್ಯಾರಾಥಾನ್, ವಿಶೇಷ ಚೇತನರಿಗೆ ಪುರುಷರಿಗೆ ಹಾಗೂ ಮಹಿಳೆಯರಿಗೆ ಪ್ರತ್ಯೇಕ ವ್ಹೀಲ್ ಚೇರ್ ಸ್ಪರ್ಧೆ ಮತ್ತು ವಿಶೇಷ ಕ್ರೀಡೆಗಳಲ್ಲಿ ಬೈಕ್ ಸ್ಟಂಟ್, ಹೆರಿಟೇಜ್ ವಾಕ್, ಸೈಕಲ್ ಜಾಥಾ ಹಾಗೂ ಗಾಳಿಪಟ ಪ್ರದರ್ಶನ ನಡೆಯಲಿದೆ.
ಆನೆಗೊಂದಿ ಉತ್ಸವದ ನಿಮಿತ್ತ ನಡೆಯಲಿರುವ ವಿವಿಧ ಸ್ಪರ್ಧೆಗಳು ಹಾಗೂ ಕ್ರೀಡೆಗಳಲ್ಲಿ ಜಿಲ್ಲೆಯ ಕ್ರೀಡಾ ಆಸಕ್ತರು, ಸ್ಪರ್ಧಾಳುಗಳು ಹಾಗೂ ಅರ್ಹರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ.  ಈ ಕುರಿತಾದ ಮಾಹಿತಿಗಾಗಿ  ಗ್ರಾಮೀಣ ಕ್ರೀಡೋತ್ಸವ ಹಾಗೂ ಮ್ಯಾರಾಥಾನಗೆ ಸಂಬAಧಿಸಿದAತೆ ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಅಧ್ಯಕ್ಷರು ಕ್ರೀಡಾ ಸಮಿತಿ ಆನೆಗೊಂದಿ ಉತ್ಸವ ಮೊ.ಸಂ. 8197058425, ಜಿಲ್ಲಾ ದೈಹಿಕ ಶಿಕ್ಷಣ ಪರಿವೀಕ್ಷಕರು ಮೊ.ಸಂ. 6360541175, ತಾಲೂಕ ಕ್ರೀಡಾಧಿಕಾರಿಗಳು ಗಂಗಾವತಿ ಮೊ.ಸಂ. 7411755523, ಕೊಪ್ಪಳ ಮೊ.ಸಂ. 9036773070, ಯಲಬುರ್ಗಾ ಮೊ.ಸಂ. 8970288857, ಕುಷ್ಟಗಿ ಮೊ.ಸಂ. 9945501033 ಹಾಗೂ ಗಂಗಾವತಿ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಮೊ.ಸಂ. 9945300713, ಇವರನ್ನು ಸಂಪರ್ಕಿಸಬಹುದು.   ಸಾಂಪ್ರದಾಯಿಕ ಸ್ಪರ್ಧೆ ಹಾಗೂ ವಿಶೇಷ ಚೇತನರ ಸ್ಪರ್ಧೆಗಳಿಗೆ ಸಂಬAಧಿಸಿದAತೆ ಉಪನಿರ್ದೇಶಕರು, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಕೊಪ್ಪಳ ಮೊ.ಸಂ. 8722420781, ಸಹಾಯಕ ನಿರ್ದೇಶಕರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮೊ.ಸಂ. 9481715941, ಗಂಗಾವತಿ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಮೊ.ಸಂ. 9538373948, ಕೊಪ್ಪಳ ಕ್ಷೇತ್ರ ಶಿಕ್ಷಣಾಧಿಕಾರಿ, ವಿಶೇಷ ಚೇತನ ಇಲಾಖೆ ಸಹಾಯಕ ನಿರ್ದೇಶಕ ಮೊ.ಸಂ. 9900124253 ಕ್ಕೆ ಹಾಗೂ ಜಲಸಾಹಸ, ಭೂಸಾಹಸ ಹಾಗೂ ವಿಶೇಷ ಕ್ರೀಡೆಗಳಿಗೆ ಸಂಬAಧಿಸಿದAತೆ ಪೊಲೀಸ್ ಇಲಾಖೆಯ ಜಿಲ್ಲಾ ಉಪಾಧೀಕ್ಷಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರು ಮೊ.ಸಂ. 8197058425, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಮೊ.ಸಂ. 9731042063, ಅಲ್ಪಸಂಖ್ಯಾತ  ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಮೊ.ಸಂ. 9686397868, ಗಂಗಾವತಿ ತಾಲೂಕ ಕ್ರೀಡಾಧಿಕಾರಿ ಮೊ.ಸಂ. 7411755523 ಹಾಗೂ ನೊಪಾಸನಾ ತಂಡ ಮೊ.ಸಂ. 9845145046 ಮತ್ತು ಯುವ ಸ್ಪಂದನಾ ತಂಡ ಮೊ.ಸಂ. 9535993848 ಕ್ಕೆ ಸಂಪರ್ಕಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಅಧ್ಯಕ್ಷರು ಕ್ರೀಡಾ ಸಮಿತಿ ಆನೆಗೊಂದಿ ಉತ್ಸವ, ಇವರಿಗೆ ಅಥವಾ ಮೊ.ಸಂ. 8197058425, ಮೂಲಕ ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿಗಳು ಹಾಗೂ ಆನೆಗೊಂದಿ ಉತ್ಸವ ಸಮಿತಿಯ ಅಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Please follow and like us:
error
error: Content is protected !!