ಆನೆಗೊಂದಿ ಉತ್ಸವ ಕ್ರೀಡಾಕೂಟ

ಮಹಿಳಾ ಬಾಲ್ ಬ್ಯಾಡ್ಮಿಂಟನ್ ಪಂದ್ಯಾವಳಿ ಯಶಸ್ವಿ
ಕೊಪ್ಪಳ ಜ. : ಆನೆಗೊಂದಿ ಉತ್ಸವದ ಅಂಗವಾಗಿ ಜನವರಿ 04 ರಂದು ಆನೆಗೊಂದಿ ಮುಖ್ಯವೇದಿಕೆಯ ಮುಂಭಾಗದಲ್ಲಿ (ಕ್ರಿಡಾಂಗಣದಲ್ಲಿ) ಪುರುಷ ಮತ್ತು ಮಹಿಳಾ ಬಾಲ್ ಬ್ಯಾಡ್ಮಿಂಟನ್ ಪಂದ್ಯಾವಳಿಗಳು ನಡೆದವು. ಬಾಲ್ ಬ್ಯಾಡ್ಮಿಂಟನ್ ಪಂದ್ಯಾವಳಿಗಳಲ್ಲಿ 5 ಮಹಿಳಾ ತಂಡಗಳು, 18 ಪುರುಷರ ತಂಡಗಳು ಭಾಗವಹಿಸಿದ್ದವು.
ಮಹಿಳೆಯರ ಬ್ಯಾಡ್ಮಿಂಟನ್ ಫೈನಲ್ ಪಂದ್ಯಾವಳಿಯಲ್ಲಿ ನಿವೇದಿತ ಪ್ರಗತಿ ನಗರ ತಂಡದ ವಿರುದ್ದ ಭೂಮಿಕಾ ನೇತೃತ್ವದ ಸರಕಾರಿ ಪ್ರೌಢಶಾಲೆ ಆಲಬೂರು ( ಬಳ್ಳಾರಿ) ತಂಡ 35 ರಿಂದ 23, 35 ರಿಂದ 22 ಪಾಯಿಂಟ್‌ಗಳ ಅಂತರದಿAದ ಗೆಲುವು ದಾಖಲಿಸಿ ಪ್ರಥಮ ಸ್ಥಾನ ಪಡೆಯಿತು. ನಿವೇದಿತ ಪ್ರಗತಿ ನಗರ ತಂಡವು ದ್ವಿತೀಯ ಸ್ಥಾನ ಪಡೆಯಿತು. ಸಿ.ಬಿ.ಎಸ್. ಕ್ಲಬ್ ಗಂಗಾವತಿ ವಿರುದ್ಧ ಎಚ್. ಆರ್. ಎಸ್. ಸರೋಜಮ್ಮ ಗಂಗಾವತಿ ತಂಡ ಮೂರನೇ ಸ್ಥಾನ ಪಡೆದಿದೆ.
ಪುರುಷರ ಬಾಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ 18 ತಂಡಗಳು ಭಾಗವಹಿಸಿದ್ದು, ಕ್ವಾರ್ಟರ್ ಫೈನಲ್‌ಗೆ 8 ತಂಡಗಳು ಆಗಮಿಸಿವೆ. ಬೆಂಗಳೂರು, ಹಾಸನ, ಕೊಪ್ಪಳ ಸೇರಿದಂತೆ ಗಂಗಾವತಿಯಿAದ ಬ್ಯಾಡ್ಮಿಂಟನ್ ಸ್ಪರ್ಧೆಗೆ ತಂಡಗಳು ಆಗಮಿಸಿವೆ. ಸ್ಪರ್ಧೆಗಳು ಇನ್ನೂ ನಡೆಯುತ್ತಿದ್ದು, ಈ ತಂಡಗಳ ಫಲಿತಾಂಶ ನಾಳೆ ತಿಳಿಯಲಿದೆ ಎಂದು ಆನೆಗೊಂದಿ ಉತ್ಸವ ಕ್ರೀಡಾ ಸಮಿತಿ  ಪ್ರಕಟಣೆಯಲ್ಲಿ ತಿಳಿಸಿದೆ.

Please follow and like us:
error