ಆನೆಗೊಂದಿ ಉತ್ಸವ : ಕಿಷ್ಕಿಂದ ಪಾರಂಪರಿಕ ಸೈಕಲ್ ಜಾಥಕ್ಕೆ ಜಾಲನೆ


ಕೊಪ್ಪಳ ಜ.: ಕೊಪ್ಪಳ ಜಿಲ್ಲೆಯ ಐತಿಹಾಸಿಕ ಕ್ಷೇತ್ರವಾದ ಗಂಗಾವತಿ ತಾಲ್ಲೂಕಿನ ಆನೆಗೊಂದಿ ಉತ್ಸವದ ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿಕ ಇಲಾಖೆ ಮತ್ತು ಪ್ರವಾಸೋದ್ಯಮ ಇಲಾಖೆ ಬೆಂಗಳೂರು ಹಾಗೂ ಕೊಪ್ಪಳ ಜಿಲ್ಲಾಡಳಿತದ ವತಿಯಿಂದ ಆನೆಗೊಂದಿಯಲ್ಲಿ ಇಂದು (ಜ.6) ಹಮ್ಮಿಕೊಳ್ಳಲಾದ “ಕಿಷ್ಕಿಂದ ಪಾರಂಪರಿಕ ಸೈಕಲ್ ಜಾಥ”ಕ್ಕೆ ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ಅವರು ರಿಬ್ಬನ್ ಕತ್ತರಿಸುವುದರ ಮೂಲಕ ಚಾಲನೆ ನೀಡಿದರು.
ಜಿಲ್ಲಾ ಪಂಚಾಯತ್ ಅಧ್ಯಕ್ಷ ಎಚ್. ವಿಸ್ವನಾಥರೆಡ್ಡಿ ಹಾಗೂ ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ಅವರು ತಾವು ಸಹ ಈ ಜಾಥದಲ್ಲಿ ಭಾಗಿಯಾಗಿದ್ದು, ವಿಶೇಷವಾಗಿತ್ತು.  ಉಪವಿಭಾಗಾಧಿಕಾರಿ ಸಿ.ಡಿ ಗೀತಾ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಆನೆಗೊಂದಿ ಉತ್ಸವ ಕ್ರೀಡಾ ಸಮಿತಿ ಅಧ್ಯಕ್ಷ ಆರ್.ಜಿ ನಾಡಗೀರ, ಜಿಲ್ಲೆಯ ದೈಹಿಕ ಶಿಕ್ಷಣಾಧಿಕಾರಿ ಬಸವರಾಜ, ಗಂಗಾವತಿ ತಹಶಿಲ್ದಾರ ಚಂದ್ರಶೇಖರ ಮಾಲಗಿತ್ತಿ, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಎಲ್.ಡಿ ಚಂದ್ರಕಾAತ, ತಾಲ್ಲೂಕು ದೈಹಿಕ ಶಿಕ್ಷಣಾಧಿಕಾರಿ ಚಂದ್ರಶೇಖರ ರಾಥೋಡ್, ಬಿ.ಇ.ಓ ಸೋಮಶೇಖರ್ ಗೌಡ, ಆನೆಗೊಂದಿ ಗ್ರಾ.ಪಂ. ಅಧ್ಯಕ್ಷೆ ಅಂಜನಾದೇವಿ ಸೇರಿದಂತೆ ಪೋಲಿಸ್ ಸಿಬ್ಬಂದಿ, ಸಾರ್ವಜನಿಕರು ಇದೇ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಸೈಕಲ್ ಜಾಥಾ;
ಈ ಪಾರಂಪರಿಕ ಸೈಕಲ್ ಜಾಥದಲ್ಲಿ ಒಟ್ಟು 500 ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಹಿರಿಯರು, ಸರ್ಕಾರಿ ಅಧಿಕಾರಿಗಳು, ಪೋಲಿಸ್ ಸಿಬ್ಬಂದಿ ಸೇರಿದಂತೆ ಹಲವರು ಜಾಥದಲ್ಲಿ ಪಾಲ್ಗೊಂಡಿದ್ದರು.  ಸೈಕಲ್ ಜಾಥವು ಆನೆಗೊಂದಿಯ ರಂಗನಾಥ ದೇವಸ್ಥಾನದಿಂದ ಆರಂಭವಾಗಿ ಗಗನ್ ಮಹಲ್, ಕೃಷ್ಣದೇವರಾಯ ವೃತ್ತ, ದುರ್ಗಾ ದೇವಸ್ಥಾನದಿಂದ ಚಿಕ್ಕರಾಂಪೂರ ಮಾರ್ಗವಾಗಿ ಪಂಪ ಸರೋವರ, ಅಂಜಿನಾದ್ರಿ ಪರ್ವತದಿಂದ ಹನುಮನಹಳ್ಳಿ ಮಾರ್ಗವಾಗಿ ಋಷಿಮುಖ ಪರ್ವತದಿಂದ ಸೇತುವೆ ಬಳಿಯ ಕಿಷ್ಕಿಂದ ರಸ್ತೆಯ ಬಳಿಗೆ ಸೇರಿ, ಅಲ್ಲಿಂದ ಮತ್ತೆ ವಾಪಸಾಗಿ ಅಂಜನಾದ್ರಿ ಪರ್ವತದ ಬಳಿ ಎಲ್ಲ ವಿದ್ಯಾರ್ಥಿಗಳಿಗೆ ಗುಲ್ಕೋಸ್ ಪೌಡರ್ ನೀಡಲಾಯಿತು.
ನಂತರ ಅಲ್ಲಿಂದ ಹಿಂತಿರುಗಿ ಹುಚ್ಚಪಯ್ಯನ ಮಠದ ಬಳಿ ಸೈಕಲ್ ಜಾಥಾ ಕಾರ್ಯಕ್ರಮವನ್ನು ಸಮಾರೋಪವಾಯಿತು.  ಎಲ್ಲ ವಿದ್ಯಾರ್ಥಿಗಳಿಗೆ, ಅಧಿಕಾರಿಗಳಿಗೆ ಅಲ್ಪ ಉಪಹಾರದ ವ್ಯವಸ್ಥೆ ಮಾಡಲಾಗಿತ್ತು.
ಜಾಥದ ಸಂದರ್ಭದಲ್ಲಿ ಕಾಡು ಬೆಳಸಿ, ನಾಡು ಉಳಿಸಿ, ಸ್ವಚ್ಚ ಭಾರತ ಶ್ರೇಷ್ಠ ಭಾರತ, ಹಸಿರೆ ಉಸಿರು, ಕಡಿದರೆ ಮರ ಬರುವುದು ಬರ, ಜಲವೆಂದರೆ ಕೇವಲ ನೀರಲ್ಲ ಅದು ಪಾವನ ತಿರ್ಥ ಎಂಬ ನಾಮಫಲಕಗಳನ್ನು ಹಾಕಿಕೊಂಡು ಜಾಗೃತಿ ಮೂಡಿಸಿಲಾಯಿತು.  ಜಾಥದ ಮಾರ್ಗದಲ್ಲಿ ಬೊಲೋ ಭಾರತ್ ಮಾತಾಕಿ, 2020 ನೇ ಆನೆಗೊಂದಿ ಉತ್ಸವಕ್ಕೆ ಜಯವಾಗಲಿ ಎಂಬ ಘೋಷಣೆಗಳನ್ನು ಕೂಗಿದರು.
ಜಾಥದಲ್ಲಿ ಗಂಗಾವತಿಯ ಲಿಟೀಲ್ ಹಾರ್ಟ್ಸ್ ಸ್ಕೂಲ್, ಗಂಗಾವತಿಯ ಬೇಥಲ್ ಸ್ಕೂಲ್, ಹೊಸಪೇಟೆಯ ಗೋ-ಗ್ರೀನ್ ತಂಡ, ಗಂಗಾವತಿಯ ಗೋ-ಗ್ರೀನ್ ತಂಡ, ಸಂಗಾಪೂರ ಗ್ರಾಮದ ಶಾಲೆಯ ವಿದ್ಯಾರ್ಥಿಗಳು, ಆನೆಗೊಂದಿ ಪ್ರೌಢಶಾಲೆಯ ಬಾಲಕ ಮತ್ತು ಬಾಲಕಿಯರು, ಅಧಿಕಾರಿ, ಸಿಬ್ಬಂದಿ, ಜನಪ್ರತಿನಿದಿಗಳು, ಪೊಲೀಸರು ಹಾಗೂ ಸಾರ್ವಜನಿಕರು ಸೈಕಲ್ ಜಾಥದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿದರು.

Please follow and like us:
error