ಆನೆಗೊಂದಿ ಉತ್ಸವಕ್ಕೆ ಜಿಲ್ಲಾಡಳಿತ ಸಕಲ ರೀತಿಯಲ್ಲಿ ಸಜ್ಜು : ಪಿ.ಸುನೀಲ್ ಕುಮಾರ್

ಕೊಪ್ಪಳ ಜ. : ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಆನೆಗೊಂದಿ ಉತ್ಸವಕ್ಕೆ ಜಿಲ್ಲಾಡಳಿತವು ಸಕಲ ರೀತಿಯಲ್ಲಿ ಸಜ್ಜಾಗಿದೆ ಎಂದು ಪಿ.ಸುನೀಲ್ ಕುಮಾರ್ ಅವರು ತಿಳಿಸಿದರು.

ಆನೆಗೊಂದಿ ಉತ್ಸವ ನಿಮಿತ್ತ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದು (ಜ.2) ಹಮ್ಮಿಕೊಂಡ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.
ಕರ್ನಾಟಕ ಸರ್ಕಾರದ ಉಪ ಮುಖ್ಯಮಂತ್ರಿಗಳು, ಸಾರಿಗೆ ಮತ್ತು ಕೃಷಿ ಸಚಿವರು ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷö್ಮಣ ಸಂಗಪ್ಪ ಸವದಿ ಅವರ ಅಧ್ಯಕ್ಷತೆಯಲ್ಲಿ (ಅಕ್ಟೋಬರ್.21) ನಡೆದ ಜಿಲ್ಲಾ ತ್ರೆöÊಮಾಸಿಕ ಕೆ.ಡಿ.ಪಿ ಸಭೆಯಲ್ಲಿ ಆನೆಗೊಂದಿ ಉತ್ಸವ ಬಗ್ಗೆ ಚರ್ಚಿಸಲಾಯಿತು. ಹಾಗೂ ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ ಹಾಗೂ ಸಕ್ಕರೆ ಸಚಿವರಾದ ಸಿ.ಟಿ. ರವಿ ಅವರ ಅಧ್ಯಕ್ಷತೆಯಲ್ಲಿ (ನವೆಂಬರ್.13) ಬೆಂಗಳೂರಿನ ಕನ್ನಡ ಭವನದಲ್ಲಿ ನಡೆದ ಸಭೆಯಲ್ಲಿ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಆನೆಗೊಂದಿ ಉತ್ಸವ ಆಚರಣೆ ಮಾಡುವ ಕುರಿತು ಚರ್ಚಿಸಿ, 2019-20ನೇ ಸಾಲಿನ ಆನೆಗೊಂದಿ ಉತ್ಸವವನ್ನು 2020ರ ಜನವರಿ. 09. ಮತ್ತು 10 ರಂದು ಎರಡು ದಿನಗಳವರೆಗೆ ಆಚರಿಸಲು ಸಲಹೆ ನೀಡಿದ್ದು, ಸಚಿವರ ಸಲಹೆ ಮೇರೆಗೆ ಈ ಉತ್ಸವದ ರೂಪರೇಷೆಗಳ ಕುರಿತು ಜಿಲ್ಲೆಯ ಜಿಲ್ಲಾ ಪಂಚಾಯತ್ ಅಧ್ಯಕ್ಷರು, ಸಂಸದರು, ಶಾಸಕರುಗಳು ಇವರೊಂದಿಗೆ ಚರ್ಚಿಸಲಾಗಿದೆ.  ಈ ಉತ್ಸವವು ವಿಜಯನಗರ ಸಾಮ್ರಾಜ್ಯದ ರಾಜಧಾನಿ ಪ್ರದೇಶಗಳಾದ ಹಂಪಿ, ಆನೆಗೊಂದಿ ಐತಿಹಾಸಿಕ ಹಿನ್ನೆಲೆಯಲ್ಲಿ ಹಂಪಿ ಉತ್ಸವದ ಜೊತೆಗೆ ಆಚರಿಸುವುದು ಔಚಿತ್ಯ ಪೂರ್ಣವಾಗಿರುತ್ತದೆ.  ಇವರುಗಳ ಸಲಹೆಗಳ ಮೇರೆಗೆ ಉತ್ಸವವನ್ನು ಅರ್ಥಪೂರ್ಣವಾಗಿ ಆಚರಿಸುವ ಸಲುವಾಗಿ ಜಿಲ್ಲೆಯ ಸಾಹಿತಿಗÀಳು, ಕಲಾಸಕ್ತರು, ಸಾರ್ವಜನಿಕರು, ಜನಪ್ರತಿನಿಧಿಗಳು, ಆನೆಗೊಂದಿ ಐತಿಹಾಸಿಕ ಮುಖಂಡರನ್ನೊಳಗೊAಡAತೆ ಚರ್ಚಿಸಿ, ಅಂತಿಮವಾಗಿ ಜನವರಿ. 09 ಮತ್ತು 10 ರಂದು ಎರಡು ದಿನಗಳವರೆಗೆ ಆಚರಿಸಲು ತಿರ್ಮಾನಿಸಲಾಗಿರುತ್ತದೆ ಎಂದರು.  
ಉತ್ಸವವನ್ನು ಅತ್ಯಂತ ವಿಜೃಂಭಣೆಯಿAದ ಆಚರಿಸಲು ಹಾಗೂ ಶಿಸ್ತು ಬದ್ಧವಾಗಿ ನಡೆಸಲು ಜಿಲ್ಲಾಡಳಿತದ ವತಿಯಿಂದ 21 ಸಮಿತಿಗಳನ್ನು ರಚನೆ ಮಾಡಲಾಗಿದೆ.  ಉತ್ಸವದ ಆಚರಣೆಗಾಗಿ ಈ ಹಿಂದೆ ಸರ್ಕಾರದಿಂದ ರೂ. 70 ಲಕ್ಷಗಳು ಬಿಡುಗಡೆಯಾಗಿದ್ದು, ಪ್ರಸ್ತುತ ಸಾಲಿನಲ್ಲಿ ಕನ್ನಡ  ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರುರವರಿAದ ರೂ. 30.00 ಲಕ್ಷ ಗಳು ಬಿಡುಗಡೆಯಾಗಿರುತ್ತದೆ.  ಒಟ್ಟಾರೆಯಾಗಿ ಸರ್ಕಾರದಿಂದ ರೂ 1.00 ಕೋಟಿ ಬಿಡುಗಡೆಯಾಗಿದ್ದು, ವಿವಿಧ ಇಲಾಖೆಗಳು, ಕಂಪನಿಗಳು ಹಾಗೂ ಸಂಘ, ಸಂಸ್ಥೆಗಳಿAದ ದೇಣಿಗೆ ರೂಪದಲ್ಲಿ ಅಂದಾಜು ರೂ. 80.00 ಲಕ್ಷಗಳು ಸ್ವೀಕೃತಿಯಾಗಿರುತ್ತದೆ.  ಉತ್ಸವದ ಆಚರಣೆಗಾಗಿ ರೂ. 1.80 ಕೋಟಿಗಳ ಅನುದಾನ ಸಂಗ್ರಹಣೆಯಾಗಿರುತ್ತದೆ.  ಉತ್ಸವದ ನಿಮಿತ್ಯವಾಗಿ ಸಾಂಸ್ಕೃತಿಕ, ಕ್ರೀಡಾ, ಸಾಹಸ, ಪ್ರಬಂಧ ಹಾಗೂ ಮುಂತಾದ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಡಿಸೆಂಬರ್. 02 ರಂದು ಗಂಗಾವತಿ ಶಾಸಕ ಪರಣ್ಣ ಈಶ್ವರಪ್ಪ ಮುನವಳ್ಳಿ ಅವರಿಂದ ಉತ್ಸವದ ಲಾಂಛನ ಮತ್ತು ಶೀರ್ಷಿಕೆಯನ್ನು ಶ್ರೀ ರಂಗನಾಥಸ್ವಾಮಿ ದೇವಸ್ಥಾನದಲ್ಲಿ ಬಿಡುಗಡೆ ಮಾಡಲಾಗಿದೆ.  ಡಿ. 21 ರಂದು ಉತ್ಸವದ ಪ್ರೋಮೋ (ವಿಡಿಯೋ)ವನ್ನು ಗಂಗಾವತಿ ಶಾಸಕರಿಂದ ಬಿಡುಗಡೆ ಮಾಡಿಸಲಾಗಿದೆ.  ಈ ಪ್ರೋಮೋವನ್ನು ವ್ಯಾಟ್ಸ್ಪ್, ಫೇಸ್‌ಬುಕ್, ಇನ್‌ಸ್ಟಾ-ಗ್ರಾಂ ಇತ್ಯಾದಿ ಸಾಮಾಜಿಕ ಜಾಲತಾಣಗಳ ಮುಖಾಂತರ ಸಾರ್ವಜನಿಕರಿಗೆ ತಲುಪುವಂತೆ ಕ್ರಮ ಕೈಗೊಳ್ಳಲಾಗಿದೆ.  ಡಿ. 23 ರಂದು ಆನೆಗೊಂದಿಯಲ್ಲಿ ಸುಮಾರು 450 ಸ್ವಯಂ ಸೇವಕರಿಂದ ಸಹಾಯಕ ಆಯುಕ್ತರ ನೇತೃತ್ವದಲ್ಲಿ ಆನೆಗೊಂದಿಯ ಸ್ಮಾರಕಗಳ, ದೇವಸ್ಥಾನಗಳ ಹಾಗೂ ರಸ್ತೆಗಳನ್ನು ಸ್ವಚ್ಛಗೊಳಿಸಲಾಯಿತು.  ಈ ಬಾರಿ ಆನೆಗೊಂದಿ ಉತ್ಸವದಲ್ಲಿ ಶೇಕಡಾ 80% ರಷ್ಟು ಸ್ಥಳೀಯ ಕಲಾವಿಧರಿಗೆ ಅವಕಾಶ ನೀಡುವ ಉದ್ದೇಶದಿಂದಾಗಿ ಡಿ. 11 ರಿಂದ 14 ರವರೆಗೆ ಕೊಪ್ಪಳದ ಸಾಹಿತ್ಯ ಭವನದಲ್ಲಿ ಸುಮಾರು ನಾಲ್ಕು ದಿನಗಳ ಕಾಲ ವಿವಿಧ ಕಲಾ ತಂಡಗಳಿಗೆ ಆಯ್ಕೆ ಪ್ರಕ್ರಿಯೆನ್ನು ನಡೆಸಲಾಗಿರುತ್ತದೆ.  ಆಯ್ಕೆಯಾದವರಿಗೆ ಉತ್ಸವದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ತಪ್ಪದೇ ನೀಡುವಂತೆ ಪತ್ರದ ಮೂಲಕ ತಿಳಿಸಲಾಗುತ್ತದೆ.  ಉತ್ಸವದ ಸಲುವಾಗಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಕ್ರೀಡಾ ಸ್ಪರ್ಧೆಗಳನ್ನು ವೇಳಾಪಟ್ಟಿಯಂತೆ ನಡೆಸಲಾಗುತ್ತಿದ್ದು,ವಿವರ ಇಂತಿದೆ.
ಸ್ಪರ್ಧೆ ಹಾಗೂ ವಿವಿಧ ಕಾರ್ಯಕ್ರಮಗಳ ವಿವರ;
  ಪದವಿ ಪೂರ್ವ ಹಾಗೂ ಪದವಿ ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆಯನ್ನು ಜನವರಿ. 02 ರಂದು ಬೆಳಿಗ್ಗೆ 10 ಗಂಟೆಗೆ ಕೊಪ್ಪಳ ನಗರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದೆ.  ಜ. 03 ರಂದು ಬೆಳಿಗ್ಗೆ 09 ಗಂಟೆಗೆ ಗಂಗಾವತಿ ತಾಲ್ಲೂಕು ಕ್ರೀಡಾಂಗಣದಲ್ಲಿ ಗಾಳಿಪಟ ಉತ್ಸವ ಮತ್ತು ಬೈಕ್ ಸ್ಟಂಟ್, ಬೆಳಿಗ್ಗೆ 10 ಕ್ಕೆ ಆನೆಗೊಂದಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಶಿಲ್ಪಕಲಾ ಕೆತ್ತನೆ ಮತ್ತು ಛಾಯಾಚಿತ್ರ ಸ್ಪರ್ಧೆ, ಜ. 04 ರಂದು ಬೆಳಿಗ್ಗೆ 10 ಗಂಟೆಗೆ ಶ್ರೀ ಕೃಷ್ಣದೇವರಾಯ ವೇದಿಕೆಯ ಹತ್ತಿರ ಪುರುಷ ಮತ್ತು ಮಹಿಳೆಯರಿಗೆ ಬಾಲ್ ಬ್ಯಾಡ್ಮಿಂಟನ್ ಸ್ಪರ್ಧೆ, ಜ. 05 ರಂದು ಬೆಳಿಗ್ಗೆ 07 ಗಂಟೆಗೆ ಅಂಜನಾದ್ರಿ ಪರ್ವತದಿಂದ ಚಿಂತಾಮಣಿ ಮಠದಿಂದ ನದಿ ತೀರದವರೆಗೆ ಪಾರಂಪರಿಕ ನಡಿಗೆ ಸ್ಪರ್ಧೆ, ಬೆಳಿಗ್ಗೆ 09 ಕ್ಕೆ ಆನೆಗೊಂದಿ ಸರ್ಕಾರಿ ಪ್ರೌಢಶಾಲೆಯಲ್ಲಿ ಮಹಿಳೆಯರಿಗೆ “ಅಡುಗೆ ರಾಣಿ” ಸ್ಪರ್ಧೆ, ಜ. 06 ರಂದು ಬೆಳಿಗ್ಗೆ 07 ಗಂಟೆಗೆ ಶ್ರೀ ರಂಗನಾಥ ದೇವಸ್ಥಾನದಿಂದ ಹುಚ್ಚಪ್ಪಯ್ಯನ ಮಠದವರೆಗೆ ಸೈಕಲ್ ಜಾಥಾ ಸ್ಪರ್ಧೆ, ಬೆಳಿಗ್ಗೆ 09ಕ್ಕೆ ಶ್ರೀ ಕೃಷ್ಣದೇವರಾಯ ವೇದಿಕೆ ಹತ್ತಿರ ಪುರುಷ ಹಾಗೂ ವಿಶೇಷ ಚೇತನರಿಗೆ ಕಬಡ್ಡಿ ಸ್ಪರ್ಧೆ, ಬೆಳಿಗ್ಗೆ 10 ಗಂಟೆಗೆ ಸರ್ಕಾರಿ ಪ್ರೌಢಶಾಲೆಯಲ್ಲಿ ಪುರುಷ ಮತ್ತು ಮಹಿಳೆಯರಿಗೆ ಬಾಲಿಬಾಲ್ ಸ್ಪರ್ಧೆ, ಜ. 07 ರಂದು ಬೆಳಿಗ್ಗೆ 09 ಗಂಟೆಗೆ ಆನೆಗೊಂದಿ ಗ್ರಾಮದಲ್ಲಿ ತಳಿರು ತೋರಣ ಅಲಂಕಾರ ಸ್ಪರ್ಧೆ, ಶ್ರೀ ಕೃಷ್ಣದೇವರಾಯ ವೇದಿಕೆ ಹತ್ತಿರ ಸ್ಲೋಸೈಕಲ್ ಸ್ಪರ್ಧೆ, ಕಲ್ಲು ಗುಂಡು ಎತ್ತುವ ಸ್ಪರ್ಧೆ, ಸಂಗ್ರಾಣಿ ಕಲ್ಲು ಎತ್ತುವ ಸ್ಪರ್ಧೆ, ಮಲ್ಲಕಂಬ ಪ್ರದರ್ಶನ, ವಿಶೇಷ ಚೇತನರಿಗೆ ವೀಲ್‌ಚೇರ್ ಸ್ಪರ್ಧೆ, ಶ್ರೀ ಕೃಷ್ಣದೇವರಾಯ ಪುತ್ಥಳಿ ಹತ್ತಿರ ಕೆಸರುಗದ್ದೆ ಓಟ, ಕೆಸರುಗದ್ದೆ ಹಗ್ಗ ಜಗ್ಗಾಟ, ಶ್ರೀ ರಂಗನಾಥ ದೇವಸ್ಥಾನದ ಆವರಣದಲ್ಲಿ ರಂಗೋಲಿ ಸ್ಪರ್ಧೆ, ಪಗಡೆ ಆಟ, ಸರ್ಕಾರಿ ಪ್ರೌಢಶಾಲೆಯಲ್ಲಿ ಚಿತ್ರಕಲಾ ಸ್ಪರ್ಧೆ, ಜ. 08 ರಂದು ಬೆಳಿಗ್ಗೆ 09 ಗಂಟೆಗೆ ಶ್ರೀ ಕೃಷ್ಣದೇವರಾಯ ವೇದಿಕೆ ಹತ್ತಿರ ಪುರುಷ ಹಾಗೂ ಮಹಿಳೆಯರಿಗೆ ಪ್ರತ್ಯೇಕ ಕುಸ್ತಿ, ಸಂಜೆ 05 ಕ್ಕೆ ಶ್ರೀ ವಿದ್ಯಾರಣ್ಯ ವೇದಿಕೆಯಲ್ಲಿ ಪ್ರಶಸ್ತಿ ವಿತರಣೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.   
ಜ. 09 ರಂದು ಬೆಳಿಗ್ಗೆ 07 ಗಂಟೆಗೆ ಗಂಗಾವತಿ ಬಸ್ ನಿಲ್ದಾಣದಿಂದ ಆನೆಗೊಂದಿಯ ಶ್ರೀ ಕೃಷ್ಣದೇವರಾಯ ವೇದಿಕೆಯವರೆಗೆ ಪುರುಷರ ಮ್ಯಾರಾಥಾನ್ ಮತ್ತು ಗಂಗಾವತಿ ಬಸ್ ನಿಲ್ದಾಣದಿಂದ ಸಂಗಾಪುರ ಗ್ರಾಮದವರೆಗೆ ಮಹಿಳೆಯರ ಮ್ಯಾರಾಥಾನ್, ಬೆಳಿಗ್ಗೆ 09ಕ್ಕೆ ಆನೆಗೊಂದಿಯ ದುರ್ಗಾದೇವಿ ದೇವಸ್ಥಾನದಿಂದ ಆನೆಗೊಂದಿ ಉತ್ಸವಕ್ಕೆ ಚಾಲನೆ.  ಬೆಳಿಗ್ಗೆ 11 ಗಂಟೆಗೆ ಆನೆಗೊಂದಿಯ ಗಗನ ಮಹಲ್ ಹತ್ತಿರ ಫಲ-ಪುಷ್ಪ ಪ್ರದರ್ಶನ, ಶ್ರೀ ವಿದ್ಯಾರಣ್ಯ ವೇದಿಕೆಯಲ್ಲಿ ಕವಿಗೋಷ್ಠಿ, 11-15ಕ್ಕೆ ಶ್ರೀ ಕೃಷ್ಣದೇವರಾಯ ವೇದಿಕೆ ಹತ್ತಿರ ಕೃಷಿ, ಶಿಲ್ಪಕಲಾ, ಚಿತ್ರಕಲಾ, ಛಾಯಾಚಿತ್ರ ಮತ್ತು ಕರಕುಶಲ ವಸ್ತು ಪ್ರದರ್ಶನ, ಜ. 09 ರಿಂದ 11ರವರೆಗೆ ಬೆಳಿಗ್ಗೆ 11-30 ಗಂಟೆಗೆ ಸಾಣಾಪುರ ಕೆರೆಯಲ್ಲಿ ಜಲ ಸಾಹಸ ಕ್ರೀಡೆಗಳು, ಆನೆಗೊಂದಿಯ ಋಷಿಮುಖ ಪರ್ವತದಲ್ಲಿ ರಾಕ್ ಕ್ಲೆöÊಬಿಂಗ್ ಜರುಗಲಿದೆ ಎಂದರು.
ಜ. 09 ರಂದು ಮಧ್ಯಾಹ್ನ 02-30ಕ್ಕೆ ಶ್ರೀ ವಿದ್ಯಾರಣ್ಯ ವೇದಿಕೆಯಲ್ಲಿ ವಿಚಾರ ಸಂಕಿರಣ, ಸಂಜೆ 05 ಗಂಟೆಗೆ ಶ್ರೀ ಕೃಷ್ಣದೇವರಾಯ ವೇದಿಕೆ ಹಾಗೂ ಶ್ರೀ ವಿದ್ಯಾರಣ್ಯ ವೇದಿಕೆಯಲ್ಲಿ (ಎರಡು ವೇದಿಕೆಗಳಲ್ಲಿ) ಉತ್ಸವದ ಉದ್ಘಾಟನಾ ಸಮಾರಂಭ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.  ಶ್ರೀ ಕೃಷ್ಣದೇವರಾಯ ವೇದಿಕೆಯಲ್ಲಿ ಸಂಜೆ 06 ಗಂಟೆಗೆ ಪ್ರಾಣೇಶ ಗಂಗಾವತಿಯವರಿAದ ಹಾಸ್ಯೋತ್ಸವ ಕಾರ್ಯಕ್ರಮ, ರಾತ್ರಿ 07-30ಕ್ಕೆ ಅರ್ಜುನ ಇಟಗಿಯವರಿಂದ ರಸಮಂಜರಿ ಕಾರ್ಯಕ್ರಮ, ರಾತ್ರಿ 08 ಗಂಟೆಗೆ ಮೂಡಬಿದರಿಯ ನುಡಿಸಿರಿ ವಿರಾಸತ್ ಆಳ್ವಾಸ್ ತಂಡದಿAದ ಸಾಂಸ್ಕೃತಿಕ ಕಾರ್ಯಕ್ರಮ, ರಾತ್ರಿ 10 ಗಂಟೆಗೆ ಖ್ಯಾತ ಹಿನ್ನೆಲೆ ಗಾಯಕ ವಿಜಯ ಪ್ರಕಾಶ ಹಾಗೂ ಸಂಗಡಿಗರಿAದ ರಸಮಂಜರಿ ಕಾರ್ಯಕ್ರಮ ನಡೆಯಲಿವೆ. 
ಜ. 10 ರಂದು ಶ್ರೀ ವಿದ್ಯಾರಣ್ಯ ವೇದಿಕೆಯಲ್ಲಿ ಬೆಳಿಗ್ಗೆ 10 ಗಂಟೆಗೆ ಮಹಿಳಾ ಗೋಷ್ಠಿ, ಮಧ್ಯಾಹ್ನ 02-30ಕ್ಕೆ ಯುವ ಗೋಷ್ಠಿ ನಡೆಯಲಿದೆ.  ಸಂಜೆ 05 ಗಂಟೆಗೆ ಶ್ರೀ ಕೃಷ್ಣದೇವರಾಯ ಹಾಗೂ ಶ್ರೀ ವಿದ್ಯಾರಣ್ಯ ವೇದಿಕೆಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳ ವೈಭವ, ಶ್ರೀ ಕೃಷ್ಣದೇವರಾಯ ವೇದಿಕೆಯಲ್ಲಿ ಸಂಜೆ 06 ಗಂಟೆಗೆ ಸಮಾರೋಪ ಸಮಾರಂಭ ಹಾಗೂ ಸಾಂಸ್ಕೃತಿ ಕಾರ್ಯಕ್ರಮಗಳು ಮುಂದುವರೆಯಲಿವೆ.  ರಾತ್ರಿ 07 ಗಂಟೆಗೆ ಗಾಯಕಿ ಗಂಗಮ್ಮ ಅವರಿಂದ ಯುಗಳ ಗೀತೆ ಕಾರ್ಯಕ್ರಮ ನಡೆಯಲಿದೆ.  
ಆನೆಗೊಂದಿಯ ದುರ್ಗಾದೇವಿ ದೇವಸ್ಥಾನದಿಂದ ಸುಮಾರು 40 ಕಲಾ ತಂಡಗಳೊAದಿಗೆ ಆನೆಗೊಂದಿ ಉತ್ಸವದ ಮೆರವಣಿಗೆಗೆ ಜನವರಿ. 09 ರಂದು ಬೆಳಿಗ್ಗೆ 09-00 ಗಂಟೆಗೆ ಗಂಗಾವತಿ ಶಾಸಕ ಪರಣ್ಣ ಈಶ್ವರಪ್ಪ ಮುನವಳ್ಳಿ ಅವರು ಚಾಲನೆ ನೀಡಲಿದ್ದಾರೆ.  ಆನೆಗೊಂದಿ ಉತ್ಸವದ ನಿಮಿತ್ಯ ಕ್ರೀಡೆ/ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಆಗಮಿಸುವ ತಂಡದ ಸದಸ್ಯರಿಗೆ ಕೊಪ್ಪಳ ಹಾಗೂ ಗಂಗಾವತಿ ನಗರಗಳಲ್ಲಿರುವ ಹೋಟೇಲ್‌ಗಳಲ್ಲಿ, ನಿರೀಕ್ಷಣಾ ಮಂದಿರಗಳಲ್ಲಿ ಹಾಗೂ ವಿವಿಧ ವಸತಿ ನಿಲಯಗಳಲ್ಲಿ ವ್ಯವಸ್ಥೆ ಮಾಡಲಾಗಿರುತ್ತದೆ ಹಾಗೂ ಸದರಿಯವರಿಗೆ ಊಟದ ವ್ಯವಸ್ಥೆಯನ್ನು ಕೂಡಾ ಆಯಾ ವಸತಿ ನಿಲಯಗಳಲ್ಲಿ ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಲಾಗುವುದು.  ಉತ್ಸವದ ಅಂಗವಾಗಿ ಗಗನ ಮಹಲ್ ಹತ್ತಿರ ಫಲಪುಷ್ಪ ಪ್ರದರ್ಶನವನ್ನು ಏರ್ಪಡಿಸಲಾಗಿದೆ ಹಾಗೂ ಶ್ರೀ ಕೃಷ್ಣದೇವರಾಯ ವೇದಿಕೆಯ ಹತ್ತಿರ ಕೃಷಿ, ಮೀನುಗಾರಿಕೆ, ಪಶುಪಾಲನಾ ಇಲಾಖೆ, ರೇಷ್ಮೆ ಇಲಾಖೆÀ, ಶಿಲ್ಪಕಲಾ,  ಚಿತ್ರಕಲಾ, ಛಾಯಾಚಿತ್ರ ಪ್ರದರ್ಶನ ಕರಕುಶಲ ವಸ್ತುಗಳ ಪ್ರದರ್ಶನ, ವಾರ್ತಾ ಇಲಾಖೆಯಿಂದ ಸರ್ಕಾರದ ಯೋಜನೆಗಳ ಕುರಿತು ವಸ್ತು ಪ್ರದರ್ಶನದ ಮಳಿಗೆÀ ಹಾಗೂ 30 ಖಾಸಗಿಯವರಿಗೆ ಮಳಿಗೆಗಳ ವ್ಯವಸ್ಥೆಯನ್ನು ಕೂಡಾ ಮಾಡಲಾಗಿದ್ದು ಆಸಕ್ತರು ವಾಣಿಜ್ಯ ಮಳಿಗೆಗಳನ್ನು ಕಡಿಮೆ ದರದಲ್ಲಿ ಪಡೆಯಬಹುದಾಗಿದೆ ಎಂದು ಹೇಳಿದರು.  
ಎರಡು ದಿನಗಳ ಕಾಲ ಶ್ರೀ ಕೃಷ್ಣದೇವರಾಯ ವೇದಿಕೆ ಹಾಗೂ ವಿದ್ಯಾರಣ್ಯ ವೇದಿಕೆಗಳಲ್ಲಿ ಆನೆಗೊಂದಿಯ ಸ್ಮರಣ ಸಂಚಿಕೆಯನ್ನು ಹಾಗೂ ಔಷದಿ ಗಿಡಮೂಲಿಕೆಗಳ ವಿವರವುಳ್ಳ ಪುಸ್ತಕವನ್ನು ಹೊರತರಲಾಗುತ್ತಿದೆ. ಸುಮಾರು 98 ಕಲಾ ತಂಡದವರಿAದ ವಿವಿಧ ಬಗೆಯ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಕವಿಗೋಷ್ಠಿ, ಮಹಿಳಾ ಗೋಷ್ಠಿ, ಯುವ ಗೋಷ್ಠಿ, ವಿಚಾರ ಸಂಕಿರಣ ಜರುಗಲಿವೆ.  ವಿಶೇಷವಾಗಿ ಉತ್ಸವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನೀಡಲು ಆಗಮಿಸುತ್ತಿರುವ ಆಳ್ವಾಸ ವಿರಾಸತ್ ನುಡಿಸಿರಿ ಮೂಡಬಿದರಿ ಇವರಿಗೆ ಪ್ರವಾಸೋದ್ಯಮ ಇಲಾಖೆ, ಬೆಂಗಳೂರು ರವರು ಪ್ರಾಯೋಜನೆ ಮಾಡಿರುತ್ತಾರೆ ಎಂದರು. 
ಆನೆಗೊಂದಿ ಉತ್ಸವವು ಸುಗಮವಾಗಿ ಹಾಗೂ ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಮಾಡುವಂತೆ ಪೊಲೀಸ್ ಇಲಾಖೆಗೆ ಸೂಚನೆಗಳನ್ನು ನೀಡಲಾಗಿರುತ್ತದೆ. ಹಾಗೂ ಕಾರ್ಯಕ್ರಮಗಳನುಸಾರ ಆನೆಗೊಂದಿಗೆ ಆಗಮಿಸುವ ಮಾರ್ಗಗಳಾದ ಕೊಪ್ಪಳ, ಗಂಗಾವತಿ ಮತ್ತು ಬುಕ್ಕಸಾಗರ ಕಡೆಗಳಿಂದ ವಾಹನಗಳಿಗೆ ಕಡೆಬಾಗಿಲು, ಕೋಟೆ ಹಾಗೂ ಪ್ರೌಢ ಶಾಲೆ ಆವರಣ ಹಾಗೂ ವೇದಿಕೆಯ ಬಲಭಾಗದಲ್ಲಿ   ಪ್ರತ್ಯೇಕ ವಾಹನ ನಿಲುಗಡೆ ವ್ಯವಸ್ಥೆ ಮಾಡಲಾಗಿದೆ. ಸಾರ್ವಜನಿಕರಿಗೆ ಅನುಕೂಲವಾಗಲು, ಉತ್ಸವದ ವಿವಿಧ ಸಾಂಸ್ಕೃತಿ ಕಾರ್ಯಕ್ರಮಗಳು, ಕ್ರೀಡಾ ಸ್ಪರ್ಧೆಗಳು ಜರುಗುವ ದಿನಾಂಕ, ಸ್ಥಳಗಳ ಕುರಿತು ಸಂಚಾರ ನಕ್ಷೆ (ರೂಟ್ ಮ್ಯಾಪ್) ಸಾರ್ವಜನಿಕ ಸ್ಥಳಗಳಲ್ಲಿ ಅಳವಡಿಸಲಾಗಿರುತ್ತದೆ. ಆನೆಗೊಂದಿಯ ಐತಿಹಾಸಿಕ ಮಹತ್ವ, ಹಿನ್ನಲೆ ಹಾಗೂ ಉತ್ಸವದ ಕುರಿತು ಮಾಹಿತಿಯನ್ನು hಣಣಠಿs://ಞoಠಿಠಿಚಿಟ.ಟಿiಛಿ.iಟಿ/Uಣsಚಿvಚಿ ವೆಬ್ ಸೈಟ್‌ನಿಂದ ಪಡೆಯಬಹುದಾಗಿದೆ ಎಂದು ತಿಳಿಸಿದರು.
ಉತ್ಸವಕ್ಕೆ ಆಗಮಿಸುವ ಸಾರ್ವಜನಿಕರಿಗೆ ಅನುಕೂಲವಾಗಲೆಂದು ನಿರಂತರವಾಗಿ ಗಂಗಾವತಿಯಿAದ ಆನೆಗೊಂದಿಗೆ, ಆನೆಗೊಂದಿಯಿAದ ಗಂಗಾವತಿಗೆ ಹಾಗೂ ಕೊಪ್ಪಳದಿಂದ ಆನೆಗೊಂದಿಗೆ, ಆನೆಗೊಂದಿಯಿAದ ಕೊಪ್ಪಳಕ್ಕೆ ಉಚಿತವಾಗಿ 14 ಬಸ್‌ಗಳ ವ್ಯವಸ್ಥೆ ಮಾಡಲಾಗಿದ್ದು ಹಾಗೂ ಕುಷ್ಟಗಿಯಿಂದ, ಯಲಬುರ್ಗಾದಿಂದ ಮತ್ತು ಹೊಸಪೇಟೆಯಿಂದ ಆನೆಗೊಂದಿಗೆ ಆಗಮಿಸುವ ಸಾರ್ವಜನಿಕರಿಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಬಸ್‌ಗಳು ಸಂಚರಿಸಲಿವೆ. ಎರಡು ದಿನಗಳ ಕಾರ್ಯಕ್ರಮಗಳ ನಂತರ ಸಾರ್ವಜನಿಕರಿಗಾಗಿ ಆನೆಗೊಂದಿಯಿAದ ಕೊಪ್ಪಳ, ಕುಷ್ಟಗಿ, ಕನಕಗಿರಿ, ಕಾರಟಗಿ, ಯಲಬುರ್ಗಾ, ಹೊಸಪೇಟೆ, ಕುಕನೂರ ಕಡೆಗೆ ಅವಶ್ಯಕತೆ ಅನುಗುಣವಾಗಿ ಹೆಚ್ಚುವರಿ ಬಸ್ ಸೌಲಭ್ಯವನ್ನು ಟಿಕೆಟ್ ಪಡೆದು ಪ್ರಯಾಣಿಸಲು ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.  
ಆನೆಗೊಂದಿ ಬೈ ಸ್ಕೆöÊ ಈ ವರ್ಷದ ಆಕರ್ಷಣೆ;
  ಆನೆಗೊಂದಿ ಬೈ ಸ್ಕೆöÊ ಯನ್ನು ಜಿಲ್ಲಾಡಳಿತ ಹಾಗೂ ಚಾಫರ್ ಕಂಪನಿ ಸಹಯೋಗದಲ್ಲಿ ಅಂತಿಮಗೊಳಿಸಲಾಗಿದ್ದು ಇದು ಈ ವರ್ಷದ ಉತ್ಸವದ ವಿಶೇಷ ಆಕರ್ಷಣೆ ಆಗಿದೆ.  ಪ್ರತಿಯೊಬ್ಬರಿಗೂ 7 ರಿಂದ 8 ನಿಮಿಷಗಳ ಟ್ರಿಪ್ ಇದ್ದು ಇದರ ಅಂದಾಜು ದರ 2700 ಆಗಬಹುದು ಜನರ ಬೇಡಿಕೆ ಹೆಚ್ಚಾದರೆ ಇನ್ನೂ 1 ಅಥವಾ 2 ದಿನಗಳ ವಿಸ್ತರಿಸಲಾಗುತ್ತದೆ.  ಇದರ ಅನುಭವವನ್ನು ಎಲ್ಲರೂ ಆನಂದಿಸಬೇಕು.    ಪ್ರಪ್ರಥಮ ಬಾರಿಗೆ ಉತ್ಸವದ ಪ್ರಮುಖ ಆಕರ್ಷಣೆಯಾಗಿ ಆನೆಗೊಂದಿ ಬೈ ಸ್ಕೆöÊ ಗಾಗಿ ಹೆಲಿಕ್ಯಾಪ್ಟರ್ ಮೂಲಕ ಆನೆಗೊಂದಿಯ ಐತಿಹಾಸಿಕ ಸ್ಮಾರಕಗಳನ್ನು, ದೇವಸ್ಥಾನಗಳನ್ನು, ಪ್ರೇಕ್ಷಣೀಯ ಸ್ಥಳಗಳನ್ನು ಹಾಗೂ ರಮಣೀಯ ಸ್ಥಳಗಳನ್ನು ವೀಕ್ಷಿಸಲು ಸಾರ್ವಜನಿಕರಿಗಾಗಿ ವ್ಯವಸ್ಥೆ ಮಾಡಲಾಗಿದೆ.  ಎರಡು ದಿನಗಳ ಕಾಲ ನಡೆಯುವ ಆನೆಗೊಂದಿ ಉತ್ಸವವನ್ನು ಕರ್ನಾಟಕ ಸರ್ಕಾರದ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪನವರು ಉದ್ಘಾಟನೆ ಮಾಡಲು ಜಿಲ್ಲೆಗೆ ಆಗಮಿಸಲಿದ್ದಾರೆ.  ಅಲ್ಲದೇ ಉಪ ಮುಖ್ಯಮಂತ್ರಿಗಳು, ಸಾರಿಗೆ ಮತ್ತು ಕೃಷಿ ಸಚಿವರಾದ ಲಕ್ಷö್ಮಣ ಸಂಗಪ್ಪ ಸವದಿ ಅವರು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಲಿದ್ದಾರೆ. ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ ಹಾಗೂ ಸಕ್ಕರೆ ಸಚಿವರಾದ ಸಿ.ಟಿ. ರವಿ ಅವರು ಉತ್ಸವದ ನಿಮಿತ್ಯವಾಗಿ  ಆನೆಗೊಂದಿಯ ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಲು ಜಿಲ್ಲೆಗೆ ಆಗಮಿಸಲಿದ್ದಾರೆ ಎಂದರು.
ಅAತಿಮವಾಗಿ ಎರಡು ದಿನಗಳ ಕಾಲ ನಡೆಯುವ ಈ ಉತ್ಸವಕ್ಕೆ ಎಲ್ಲಾ ಸಮಸ್ತ ಜಿಲ್ಲೆಯ ಸಾರ್ವಜನಿಕರನ್ನು, ಸಾಹಿತಿಗಳನ್ನು, ಕವಿಗಳನ್ನು, ಹಿರಿಯ ನಾಗರಿಕರನ್ನು, ಮುದ್ದು ಮಕ್ಕಳನ್ನು, ಪತ್ರಿಕಾ ಮಾದ್ಯಮದವರನ್ನು ಹಾಗೂ ಎಲ್ಲಾ ಅಧಿಕಾರಿಗಳು/ಸಿಬ್ಬಂದಿಗಳನ್ನು ಸ್ವಾಗತಿಸುತ್ತಾ ಆನೆಗೊಂದಿ ಉತ್ಸವವನ್ನು ಯಶಸ್ವಿಗೊಳಿಸುವಂತೆ ಕೋರಿದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಸಂಗೀತಾ, ಅಪರ ಜಿಲ್ಲಾಧಿಕಾರಿ ಎಂ.ಪಿ. ಮಾರುತಿ, ಉಪವಿಭಾಗಾಧಿಕಾರಿ ಸಿ.ಡಿ. ಗೀತಾ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. 

Please follow and like us:
error