ಆನೆಗೊಂದಿಯಲ್ಲಿ ಪ್ರತಿಧ್ವನಿಸಿದ ಕವಿಗಳ ಆಕ್ರೋಶ

ಪೌರತ್ವ ತಿದ್ದುಪಡಿ, ಪರಿಸರ ಹಾಗೂ ಕೃಷಿ ತಲ್ಲಣಗಳಿಗೆ ಧ್ವನಿಯಾದ ಕವಿಗೋಷ್ಟಿ

ಕೊಪ್ಪಳ ಜ.): ಬಹುಚರ್ಚಿತ ಪೌರತ್ವ ತಿದ್ದುಪಡಿ ಕಾಯ್ದೆ, ವರ್ತಮಾನದ ಪರಿಸರ, ಕೃಷಿ, ಮಹಿಳೆ  ಎದುರಿಸುತ್ತಿರುವ ತಲ್ಲಣಗಳಿಗೆ ಇಂದು ನಡೆದ ಕವಿಗೋಷ್ಟಿ ಧ್ವನಿಯಾಯಿತು. ಮಹಿಳೆಯರ ಶೋಷಣೆ, ಶಿಕ್ಷಣ, ಸಾಮಾಜಿಕ ನ್ಯಾಯ, ಭ್ರಷ್ಟಾಚಾರ ನಿರ್ಮೂಲನೆ ಮತ್ತಿತರ ಸಮಕಾಲೀನ ಸಾಮಾಜಿಕ ಸಮಸ್ಯೆಗಳು ಆನೆಗೊಂದಿ ಉತ್ಸವದ 

ಅಂಗವಾಗಿ ಇಂದು ಶ್ರೀ ವಿದ್ಯಾರಣ್ಯ ವೇದಿಕೆಯಲ್ಲಿ ನಡೆದ ಕವಿಗೋಷ್ಟಿಯಲ್ಲಿ ಕಾವ್ಯವಾಗಿ ಅನಾವರಣಗೊಂಡವು.
ಕನ್ನಡ ಮತ್ತು ಸಂಸ್ಕೃತಿ, ಪ್ರವಾಸೋದ್ಯಮ ಹಾಗೂ ಸಕ್ಕರೆ ಸಚಿವ ಸಿ.ಟಿ,ರವಿ  ಕವಿಗೋಷ್ಟಿ ಉದ್ಘಾಟಿಸಿದರು. ಹಿರಿಯ ಪತ್ರಕರ್ತ ವಿಠ್ಠಪ್ಪ ಗೋರಂಟ್ಲಿ ತಮ್ಮ 2020ರ ಆಪತ್ತು ಶೀರ್ಷಿಕೆಯ ಕವಿತೆ ವಾಚನದ ಮೂಲಕ ಕವಿಗೋಷ್ಟಿಗೆ ಚಾಲನೆ ನೀಡಿದರು. ಪ್ರಸ್ತುತ  ಸಂದರ್ಭದಲ್ಲಿ ರಾಷ್ಟç ಹಾಗೂ ಪ್ರಜಾ ಪ್ರಭುತ್ವ ವ್ಯವಸ್ಥೆಯ ಕುರಿತು ತಮ್ಮ ವಿಚಾರಗಳನ್ನು ಕವಿತೆಯ ಮೂಲಕ ಅಭಿವ್ಯಕ್ತಪಡಿಸಿದರು.
ಯಲಬುರ್ಗಾದ ಮುನಿಯಪ್ಪ ಹುಬ್ಬಳ್ಳಿಯವರು ಭಾರತದ ಬಾನಂಗಳದ ಬೆಳ್ಳಿಚುಕ್ಕಿ ಜ್ಯೋತಿಬಾ ಫುಲೆ, ಅಲ್ಲಾವುದ್ದೀನ್ ಎಮ್ಮಿ ಅವರು ದೇಶವೇ ಹೊತ್ತಿ ಉರಿಯುತ್ತಿದೆ ಹೇಳು ನಿನ್ನ ಜಾತಿ ಯಾವುದು, ಅಕ್ಬರ್ ಕಾಲಿಮಿರ್ಚಿ ಅವರು ತುಂಬಿಹರಿಯಲಿ ಮನವು, ಖಡ್ಗವಾಗಲಿ ಕಾವ್ಯ, ವಿವೇಕ ತುಂಬಲಿ ಮೌಲ್ಯ, ಶಿ.ಕಾ. ಬಡಿಗೇರ್ ಅವರು ಗೋಡೆ ಬಿಕ್ಕಳಿಸಿದ ಹೊತ್ತು, ವಿಮಲಾ ಇನಾಮದಾರ್ ಅವರು ಭರವಸೆಯ ಬೆಳಕು, ಡಾ. ಸಿದ್ದಲಿಂಗಪ್ಪ ಕೊಟ್ನೇಕಲ್ ಅವರು ನಿರೀಕ್ಷೆಯಲ್ಲಿ ಎಂಬ ಕವಿತೆಗಳನ್ನು ವಾಚಿಸಿದರು.
ಮೆಹಬೂಬ್‌ಮಠದ ಅವರು ಮರ್ಯಾದಾ ಹತ್ಯೆ, ಈಶ್ವರ ಹತ್ತಿ ಅವರು ಊದುಬತ್ತಿ, ವೈ. ಬಿ. ಜೂಡಿ ಅವರು ಗಣ್ಯರ ಪ್ರಭುತ್ವ, ಅನುಸೂಯಾ ಜಾಗಿರದಾರ ಅವರು ಇಲ್ಲಿ ಮಕ್ಕಳು ಅಳುವುದಿಲ್ಲ, ಪುಷ್ಪಲತಾ ಏಳಭಾವಿ ಅವರು ಪರಿವರ್ತನೆ, ಸಿರಾಜ ಬಿಸರಳ್ಳಿ ಅವರ “ ಪಕೋಡ ಮಾರಿ ಬದುಕಿದವನು, ಚಾ ಮಾರಿ ಬದುಕಿದವನು ನನ್ನೂರಿನಲ್ಲಿ ಮನುಷ್ಯತ್ವ ಮಾರಿಕೊಂಡಿಲ್ಲ ಸ್ವಾಭಿಮಾನ ಮಾರಿಕೊಂಡಿಲ್ಲ. ಸುಳ್ಳಿನ ಕಂತೆಗಳ ಕಟ್ಟಿಲ್ಲ, ಏಕಲವ್ಯನು ಬೆರಳು ಕೊಯ್ದ ನಿಮಗೆ ಸಹಿಸಲಾಗುತ್ತಿಲ್ಲ ಮೀಸಲಾತಿ, ದಾರಿಗಡ್ಡ ಹಾಕಿ ಕಲ್ಲುಗಳ ತಡೆಯಲಾರಿರಿ ನಮ್ಮ ಕ್ರಾಂತಿ” ಎಂಬ ಸಾಲುಗಳು ಸಹೃದಯರ ಚಪ್ಪಾಳೆ ಗಿಟ್ಟಿಸಿದವು.
ರಮೇಶ ಗಬ್ಬೂರ ರವರ ನಾನು ಜಾಲಿ, ಡಾ. ದೇವೇಂದ್ರಪ್ಪ ಜಾಜಿ ಅವರ ಗುರುತು ಕವಿತೆಗಳು ಕವಿಗೋಷ್ಟಿಯ ಮೌಲ್ಯ ಹೆಚ್ಚಿಸಿದವು. ಡಾ. ಶಿವಕುಮಾರ ಮಾಲಿಪಾಟೀಲ ಅವರ ಹುಲಿಯಾ ಹುಲಿಯಾ ಅಂತೀದಿ, ನೀನಾ ಹುಲಿಯಾ ಅನ್ನೋದು ಮರೆತೀದಿ ಎಂಬ ಸಾಲುಗಳು ವಿಚಾರಪೂರ್ಣ ಮತ್ತು ವ್ಯಂಗ್ಯಭಾವದಿAದ ಕೂಡಿದ್ದವು. 
ವೀರಣ್ಣ ನಿಂಗೋಜಿ, ಮೈಲಾರಪ್ಪ ಬೂದಿಹಾಳ, ಅಲ್ಲಾಗಿರಿರಾಜ ಕನಕಗಿರಿ, ಸುರೇಶ ಕಂಬಳಿ, ಮಹೇಶ ಬಳ್ಳಾರಿ, ಡಾ. ಕೆ. ಶರಣಪ್ಪ ನಿಡಶೇಶಿ, ಹನುಮೇಶ ಗುಮಗೇರಾ, ನಟರಾಜ ಸೋನಾರ, ಚಂದಪ್ಪ ಅಕ್ಕಿ, ದೇವರಾಜ ಬಡಿಗೇರ, ಮನೋಹರ ಬೊಂದಾಡೆ, ಶರಣಪ್ಪ ಮೇಟ್ರಿ, ನಿಜಲಿಂಗಪ್ಪ ಮೆಣಸಗಿ, ಶ್ರೀನಿವಾಸ ಅಂಗಡಿ, ನಾಗರಾಜ ಕಂದಗಲ್, ನರ್ಮದಾ ಕುಲಕರ್ಣಿ ಸೇರಿದಂತೆ 33 ಕವಿಗಳು ಕವಿಗೋಷ್ಟಿಯಲ್ಲಿ ಭಾಗವಹಿಸಿದ್ದರು. ಜೀವನಸಾಬ ಬಿನ್ನಾಳ ನಿರೂಪಿಸಿದರು.

Please follow and like us:
error