ಆಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡು ಸಹಕಾರ ಸಂಸ್ಥೆಗಳನ್ನು ಬಲಪಡಿಸಿ- ವೆಂಕನಗೌಡ ಹಿರೇಗೌಡರ್


ಕೊಪ್ಪಳ:೧೬, ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ., ಬೆಂಗಳೂರು, ಕೊಪ್ಪಳ ಜಿಲ್ಲಾ ಸಹಕಾರ ಯೂನಿಯನ್ ನಿ., ಕೊಪ್ಪಳ, ಸಹಕಾರ ಇಲಾಖೆ, ಕೊಪ್ಪಳ, ಹಾಲು ಉತ್ಪಾದಕರ ಸಹಕಾರ ಸಂಘ ನಿ., ಹಿರೇಸಿಂದೋಗಿ ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ., ಹಿರೇಸಿಂದೋಗಿ ಇವರುಗಳ ಸಂಯುಕ್ತ ಆಶ್ರಯದಲ್ಲಿ ದಿನಾಂಕ: ೧೬-೧೧-೨೦೧೮ ರಂದು ಶುಕ್ರವಾರ ಬೆಳಿಗ್ಗೆ: ೧೧-೦೦ ಗಂಟೆಗೆ ೬೫ ನೇ ಅಖಿಲ ಭಾರತ ಸಹಕಾರ ಸಪ್ತಾಹದ ಅಂಗವಾಗಿ “ಸಹಕಾರ ಸಂಸ್ಥೆಗಳ ಮೂಲಕ ಮೌಲ್ಯವರ್ಧನೆ ಮತ್ತು ಬ್ರಾಂಡ್ ನಿರ್ಮಾಣ” ದಿನವನ್ನು ಹಿರೇಸಿಂದೋಗಿ ಗ್ರಾಮದಲ್ಲಿ ಏರ್ಪಡಿಸಲಾಗಿತ್ತು.
ಕಾರ್ಯಕ್ರಮದ ಉದ್ಘಾಟನೆಯನ್ನು   ವೆಂಕನಗೌಡ ಹಿರೇಗೌಡ್ರು. ನಿರ್ದೇಶಕರು, ರಾಯಚೂರು, ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲೆಗಳ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ ನಿ., ಬಳ್ಳಾರಿ. ಇವರು ಜ್ಯೋತಿ ಬೆಳಗಿಸುವುದರೊಂದಿಗೆ ಉದ್ಘಾಟಿಸಿ ಮಾತನಾಡುತ್ತಾ ಸಹಕಾರ ಸಂಸ್ಥೆಗಳನ್ನು ಆರ್ಥಿಕ ವ್ಯವಸ್ಥೆಯ ಮುಖ್ಯಸ್ಥಾನಕ್ಕೆ ತಂದು ಕೂರಿಸುವ ಉದ್ದೇಶದಿಂದ ಸಹಕಾರ ಸಂಸ್ಥೆಗಳನ್ನು ಗುರುತಿಸುವುದು ಮೌಲ್ಯವರ್ಧನೆ ಬ್ರಾಂಡ್ ಪ್ರಚಾರ ಹಾಗೂ ಸಹಕಾರ ಶಿಕ್ಷಣ ಮತ್ತು ತರಬೇತಿ ಮೂಲಕ ಸಹಕಾರ ಸಂಸ್ಥೆಗಳನ್ನು ಪ್ರಮುಖ ಪಾತ್ರವಾಗಿದೆ. ಈ ದಿಸೆಯಲ್ಲಿ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಸಹಕಾರ ಸಂಸ್ಥೆಗಳನ್ನು ಬಲಪಡಿಸಲು ಕರೆ ನೀಡಿದರು.
ಕಾರ್ಯಕ್ರಮ ಅಧ್ಯಕ್ಷತೆಯನ್ನು ವಹಿಸಿಕೊಂಡಂತಹ ಶ್ರೀಮತಿ ಶಕುಂತಲಾ ಹೆಚ್. ಹುಡೇಜಾಲಿ. ಅಧ್ಯಕ್ಷರು, ಜಿಲ್ಲಾ ಸಹಕಾರ ಯೂನಿಯನ್ ನಿ., ಕೊಪ್ಪಳ ಇವರು ತಮ್ಮ ಅಧ್ಯಕ್ಷಿಯ ಭಾಷಣದಲ್ಲಿ ಸಹಕಾರ ಸಪ್ತಾಹದ ಆಚರಣೆ ಮೂಲ ಉದ್ದೇಶ ಮತ್ತು ಸಹಕಾರ ಚಳುವಳಿಯ ಹಿನ್ನಲೆ ಕುರಿತು ಮಾತನಾಡುತ್ತಾ ಸಹಕಾರ ಸಂಸ್ಥೆಗಳು ಆರ್ಥಿಕವಾಗಿ ಬಲ್ಲಗೊಲ್ಲಬೇಕದರೆ ಆಡಳಿತ ಮಂಡಳಿ ಮತ್ತು ಸಿಬ್ಬಂದಿಗಳ ಪರಿಶ್ರಮದಿಂದ ಮಾತ್ರ ಸಾಧ್ಯವೆಂದರು.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಜಿಲ್ಲಾ ಸಹಕಾರ ಯೂನಿಯನ್ ವ್ಯವಸ್ಥಾಪಕರಾದ ರಾಜಶೇಖರ ಹೊಸಮನಿ ರವರು ಮಾತನಾಡುತ್ತಾ ಸಹಕಾರ ಸಪ್ತಾಹ ದಿನಗಳಂದು ಕಾರ್ಯಗಾರ, ವಿಚಾರ ಸಂಕೀರ್ಣ, ಯಶಸ್ವಿ ಸಂಸ್ಥೆಗಳ ಬಗ್ಗೆ ಪ್ರಚಾರ ಪಡಿಸುವುದು ಹಾಗೂ ಸಹಕಾರ ಸಂಸ್ಥೆಗಳು ಮಾರುಕಟ್ಟೆಯಲ್ಲಿ ಸ್ಪರ್ಧೆಯನ್ನು ಎದುರಿಸಲು ಹೊಸ ಹೊಸ ಆವಿಸ್ಕಾರಗಳ ಬಗ್ಗೆ ಚಿಂತಿಸಿ ಮೌಲ್ಯವರ್ಧನೆ ಮತ್ತು ಬ್ರಾಂಡ್ ನಿರ್ಮಾಣದ ಬಗ್ಗೆ ಪ್ರಚಾರ ಹಾಗೂ ಶಿಕ್ಷಣದ ಮೂಲಕ ಪ್ರಚಾರ ಪಡಿಸಿ ಸಹಕಾರ ಸಂಸ್ಥೆಗಳನ್ನು ಗುರುತಿಸುವಲ್ಲಿ ಕಾರ್ಯಕ್ರಮ ಹಾಕಿಕೊಂಡು ಸಹಕಾರ ಸಂಘಗಳನ್ನು ಬಲಪಡಿಸಿವಂತೆ ಮನವಿ ಮಾಡಿದರು.
ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ನಿಂಗಪ್ಪ ಯತ್ನಟ್ಟಿ. ಸದಸ್ಯರು, ತಾಲೂಕು ಪಂಚಾಯತ್, ಕೊಪ್ಪಳ., ಗವಿಸಿದ್ದೇಶ ಹುಡೇಜಾಲಿ ನಿರ್ದೇಶಕರು, ಜಿಲ್ಲಾ ಸಹಕಾರ ಯೂನಿಯನ್ ನಿ., ಕೊಪ್ಪಳ, ಶಿವರೆಡ್ಡಿ ಎನ್. ಮೈನಳ್ಳಿ. ಅಧ್ಯಕ್ಷರು, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ., ಹಿರೇಸಿಂದೋಗಿ, ಶರಣಬಸವರಡ್ಡಿ ಮಾದಿನೂರು ಅಧ್ಯಕ್ಷರು, ಹಾಲು ಉತ್ಪಾದಕರ ಸಹಕಾರ ಸಂಘ ನಿ., ಹಿರೇಸಿಂದೋಗಿ, ಊರಿನ ಹಿರಿಯರಾದ ರೇವಯ್ಯ ಮಠದ, ಬಸವರಾಜ ರವದಿ, ಪ್ರಭುಗೌಡ ಮೈನಳ್ಳಿ, ಹಾಲು ಒಕ್ಕೂಟದ ಕ್ಷೇತ್ರಾಧಿಕಾರಿಗಳಾದ ಖಾಸಿಂಸಾಬ ಬೆಟಗೇರಿ ಇವರುಗಳು ಉಪಸ್ಥಿತರಿದ್ದರು.
ಪ್ರಾರಂಭದಲ್ಲಿ ಶ್ರೀಮತಿ ರಾಜ್ಮಾ ಪ್ರಾರ್ಥಿಸಿದರು. ರಾಜಶೇಖರ ಹೊಸಮನಿ. ವ್ಯವಸ್ಥಾಪಕರು, ಜಿಲ್ಲಾ ಸಹಕಾರ ಯೂನಿಯನ್ ನಿ., ಕೊಪ್ಪಳ ಇವರು ಕಾರ್ಯಕ್ರಮಕ್ಕೆ ಅತಿಥಿಗಳನ್ನು ಸ್ವಾಗತಿಸಿ, ನಿರೂಪಿಸಿದರು. ಕೊನೆಯಲ್ಲಿ ಜಿ. ಮಲ್ಲಪ್ಪ ಚನ್ನಾಳ ಮು.ಕಾ.ನಿ. ಹಾಲು ಉತ್ಪಾದಕರ ಸಹಕಾರ ಸಂಘ ನಿ., ಹಿರೇಸಿಂದೋಗಿ ಇವರು ವಂದಿಸಿದರು.

Please follow and like us:
error