ಆಥ್ಲೆಟಿಕ್ ಕ್ರೀಡೆಗಳಿಗೆ ಪ್ರತ್ಯಕ ಅನುದಾನ ಘೋಷಣೆ ಮಾಡಿ-ಜಯ ಕರ್ನಾಟಕ

ಕೊಪ್ಪಳ : ಸೆ.೭, ಆಥ್ಲೆಟಿಕ್ ಕ್ರೀಡೆಗಳಿಗೆ ಪ್ರತ್ಯಕ ಅನುದಾನ ಘೋಷಣೆ ಮಾಡಬೇಕೆಂದು ಹಾಗೂ ಯುವ ಸಬಲಿಕರಣ ಕ್ರೀಡಾ ಸಂಸ್ಥೆಯ ಹಿಡಿತದಿಂದ ಮುಕ್ತಿಗೊಳಿಸಿ ಅಥ್ಲೆಟಿಕ್ಸ್ ಅಸೋಸಿಯೇಷನ್ ಸಂಸ್ಥೆಗೆ ವಹಿಸುವಂತೆ ಆಗ್ರಹಿಸಿ ಜಯ ಕರ್ನಾಟಕ ವತಿಯಿಂದ ಜಿಲ್ಲಾ ಯುವ ಸಬಲಿಕರಣ ಹಾಗೂ ಕ್ರೀಡಾ ಇಲಾಖೆಯ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಆಥ್ಲೆಟಿಕ್ಸ್ ಕ್ರೀಡೆಗಳಿಂದ ಗ್ರಾಮೀಣ ಯುವಕರನ್ನು ಪ್ರೋತ್ಸಾಹಿಸಿದಂತಾಗುತ್ತದೆ. ಹೊಸ ಕ್ರೀಡಾಪಟುಗಳನ್ನು ಹುಟ್ಟು ಹಾಕಬಹುದಾಗಿರುತ್ತದೆ. ಒಲಂಪಿಕ್ ಕ್ರೀಡೆಯಲ್ಲಿ ಪದಕ ಬಾಚಿಕೊಳ್ಳುವುದು ಆಥ್ಲೆಟಿಕ್ಸ್ ಕ್ರೀಡಾಪಟುಗಳು. ಅಂತಹ ಕ್ರೀಡಾಪಟುಗಳಿಗೆ ತರಬೇತಿ ನೀಡಬೇಕಾದದ್ದು ಆಥ್ಲೆಟಿಕ ಕ್ರೀಡಾ ಸಂಸ್ಥೆ ಕೆಲಸವಾಗಿರುತ್ತದೆ.
ಆದರೆ ಇಂದು ಆಥ್ಲೆಟಿಕ್ ಕ್ರೀಡಾ ಸಂಸ್ಥೆ ಇದೆ. ಆ ಸಂಸ್ಥೆಗೆ ಅಧ್ಯಕ್ಷರೂ ಇದ್ದಾರೆ. ಆದರೆ ಆಥ್ಲೆಟಿಕ್ ಕ್ರೀಡಾಪಟುಗಳಿಗೆ ಮೈದಾನ ಇಲ್ಲದಂತಾಗಿರುವುದು ಮಾತ್ರ ನಮ್ಮಗಳ ದೌರ್ಭಾಗ್ಯ ಕ್ರೀಡಾ ವಸತಿ ಶಾಲೆಗಳಲ್ಲಿ ಸೇರಿಕೊಳ್ಳುವ ಕ್ರೀಡಾ ವಿದ್ಯಾರ್ಥಿಗಳು ಬಡ ಕುಟುಂಬದಿಂದ ಬಂದಿರುತ್ತಾರೆ. ಹೆಚ್ಚಿನ ಹಣ ನೀಡಿ ಖಾಸಗಿಯಾಗಿ ತರಬೇತಿ ಪಡೆಯುವುದು ಅಸಾಧ್ಯ ಅಂಥರದ್ದಲ್ಲಿ ಕ್ರೀಡಾಪಟುಗಳು ಕ್ರೀಡಾ ಚೆಟುವಟಿಕೆಗಳಲ್ಲಿ ಕ್ರೀಡೆಗಳಲ್ಲಿ ಹೇಗೆ ಭಾಗವಹಿಸಲು ಸಾದ್ಯ? ಇದೆಲ್ಲವನ್ನು ಗಮಿಸಿದರೆ ರಾಜ್ಯದಲ್ಲಿ ಹೊಸ ಕ್ರೀಡಾ ಪ್ರತಿಭೆಗಳು ಹುಟ್ಟಿಕೊಳ್ಳುವುದು ಎಲ್ಲಿಂದ ಬಂತು? ರಾಜ್ಯದಲ್ಲಿ ೧೭೬ ತಾಲೂಕು ಹಾಗೂ ೩೦ ಜಿಲ್ಲೆಗಳ ಕ್ರೀಡಾಂಗಣಗಳನ್ನು ವ್ಯವಸ್ಥಿತವಾಗಿ ಮಾಡುವ ಕೆಲಸ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯಿಂದ ನಡೆದಿರುವುದಿಲ್ಲ. ಎಲ್ಲಾ ಜಿಲ್ಲೆ ತಾಲೂಕು ಕ್ರೀಡಾ ಇಲಾಖೆಗಳಲ್ಲೂ ಅವ್ಯವಹಾರ ಮನೆ ಮಾಡಿದೆ. ಕೋಚ್‌ಗಳು ಇಲ್ಲದೆ ನಿರ್ವಹಣೆ ಇಲ್ಲದೆ ಸೊರಗುತ್ತಿವೆ ಟ್ರ್ಯಾಕ್‌ಗಳು ಹಾಳಾಗಿವೆ ಇನ್ನೂ ಕೆಲ ಕ್ರೀಡಾಂಗಣಗಳಲ್ಲಿ ಟ್ರ್ಯಾಕ್‌ಗಳು ಇಲ್ಲವೇ ಇಲ್ಲ.
ವಸ್ತುಸ್ಥಿತಿ ಹೀಗಿರುವಾಗ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಏನು ಮಾಡುತ್ತಿದೆ ಗ್ರಾಮೀಣ ಕ್ರೀಡೆಗೆಂದೇ ಮೀಸಲಾಗಿರುವ ಆಥ್ಲೆಟಿಕ್ ಕ್ರೀಡಾ ಸಂಸ್ಥೆ ಗ್ರಾಮೀಣ ಪ್ರತಿಭೆಗಳನ್ನು ಗುರುತಿಸುವ ಕೆಲಸವನ್ನು ಸಮರ್ಥವಾಗಿ ಮಾಡಬಲ್ಲದು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಗ್ರಾಮೀಣ ಪ್ರತಿಭೆಗಳನ್ನು ಗುರುತಿಸುವ ಕೆಲಸ ಮಾಡುತ್ತಿಲ್ಲ. ಬರೀ ಹಣ ಯಾವ ಮೂಲದಿಂದ ಬರುತ್ತದೆ ಹೇಗೆ ತಿನ್ನಬಹುದು ಎಂಬ ಲೆಕ್ಕಾಚಾರ ಹಾಕುತ್ತಿರುವುದರಿಂದ ಆಥ್ಲೆಟಿಕ್ ಕ್ರೀಡಾ ಸಂಸ್ಥೆಯನ್ನು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಬೇರ್ಪಡಿಸಿದರೆ ಗ್ರಾಮೀಣ ಪ್ರದೇಶದ ಆಥ್ಲೆಟಿಕ್ ಕ್ರೀಡಾ ಪ್ರತಿಭೆಗಳನ್ನು ಗುರುತಿಸುವ ಕಾರ್ಯ ಸುಲಭವಾಗುತ್ತದೆ.
ಒಲಂಪಿಕ್ ಕ್ರೀಡೆಯಲ್ಲಿ ಪದಕ ತರುವ ಚೈತನ್ಯ ಮತ್ತು ಗುರಿ ಇರುವುದು ಆಥ್ಲೆಟಿಕ್ ಕ್ರೀಡಾಳುಗಳಿಗೆ ಮಾತ್ರ ಎಂಬುದನ್ನು ಮನಗಂಡು ಆಥ್ಲೆಟಿಕ್ ಕ್ರೀಡೆಗಳಿಗೆ ಪ್ರತ್ಯಕ ಅನುದಾನ ಘೋಷಣೆ ಮಾಡಬೇಕೆಂದು ಹಾಗೂ ಯುವ ಸಬಲಿಕರಣ ಕ್ರೀಡಾ ಸಂಸ್ಥೆಯ ಹಿಡಿತದಿಂದ ಮುಕ್ತಿಗೊಳಿಸಿ ಅಥ್ಲೆಟಿಕ್ಸ್ ಅಸೋಸಿಯೇಷನ್ ಸಂಸ್ಥೆಗೆ ವಹಿಸುವಂತೆ ಜಯ ಕರ್ನಾಟಕ ಸಂಘವು ಆಗ್ರಹಿಸಿ ಜಿಲ್ಲಾ ಯುವ ಸಬಲಿಕರಣ ಹಾಗೂ ಕ್ರೀಡಾ ಇಲಾಖೆಯ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಬಳ್ಳಾರಿ ರಾಮಣ್ಣ ನಾಯಕ, ಶ್ರೀನಿವಾಸ, ಪ್ರಾಣೇಶ ಹಾದಿಮನಿ, ಬಂಡೆ ಹುಸೇನಪ್ಪ ನಾಯಕ, ಹನುಮಗೌಡ, ಶಂಕರನಾಯಕ, ಹನುಮೇಶ ಬೇವೂರ, ಕುರುಪಣ್ಣ, ಮಲ್ಲಾರಡ್ಡಿ, ರಂಗಪ್ಪ ನಾಯಕ, ಶಂಕರಗೌಡ ಸೇರಿದಂತೆ ಇತರರು ಇದ್ದರು.

Please follow and like us:
error

Related posts