ಅ. 01 ರಿಂದ ಕೊಪ್ಪಳ ಜಿಲ್ಲೆಯಲ್ಲಿ 20ನೇ ರಾಷ್ಟ್ರೀಯ ಜಾನುವಾರು ಗಣತಿ ಕಾರ್ಯಕ್ರಮ

ಕೊಪ್ಪಳ ಸೆ. 28 : ಕೊಪ್ಪಳ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ವತಿಯಿಂದ 20ನೇ ಜಾನುವಾರು ಗಣತಿ ಕಾರ್ಯಕ್ರಮವು ಅಕ್ಟೋಬರ್. 01 ರಿಂದ ಜಿಲ್ಲೆಯಾದ್ಯಂತ ಹಮ್ಮಿಕೊಳ್ಳಲಾಗಿದೆ ಎಂದು ಕೊಪ್ಪಳ ಪಶುಪಾಲನಾ ಇಲಾಖೆ ಉಪ ನಿರ್ದೇಶಕರಾದ ಡಾ. ಬಸಯ್ಯ ಸಾಲಿ ಅವರು ತಿಳಿಸಿದ್ದಾರೆ.
20 ನೇ ಜಾನುವಾರು ಗಣತಿ ಕಾರ್ಯಕ್ರಮವು ರಾಷ್ಟ್ರೀಯ ಪ್ರಮುಖ (ನ್ಯಾಷನಲ್ ಪ್ರೋಗ್ರಾಂ) ಕಾರ್ಯಕ್ರಮವಾಗಿದ್ದು, ಅಕ್ಟೋಬರ್. 01 ರಿಂದ ಮೂರು ತಿಂಗಳುಗಳ ಕಾಲಾವಧಿಯಲ್ಲಿ ಜಿಲ್ಲೆಯಾದ್ಯಂತ ನಡೆಯಲಿದೆ. ಗಣತಿಯಲ್ಲಿ ಪ್ರಮುಖವಾಗಿ ವಿವಿಧ ತಳಿಗಳ ಸಾಕು ಪ್ರಾಣಿಗಳಾದ ದನ, ಎಮ್ಮೆ, ಕುರಿ, ಮೇಕೆ, ಹಂದಿ, ಕುದುರೆ, ಸಣ್ಣ ಕುದುರೆ, ಹೇಸರಗತ್ತೆ, ಕತ್ತೆ, ಒಂಟೆ, ನಾಯಿ, ಮೊಲ ಮತ್ತು ಆನೆಗಳ ಬಗ್ಗೆ ಮಾಹಿತಿಯನ್ನು ಹಾಗೂ ಕುಕ್ಕಟಗಳಾದ ಕೋಳಿ, ಎಮು ಕೋಳಿ, ಟರ್ಕಿ ಕೋಳಿ, ಇತರೇ ಕೋಳಿಗಳ ಜೊತೆಗೆ ಪಶುಪಾಲನಾ ವಲಯಗಳಲ್ಲಿ ಉಪಯೋಗಿಸುವ ಯಂತ್ರ/ ಉಪಕರಣಬಗ್ಗೆ ಮತ್ತು ಮೀನುಗಾರಿಕೆ ಸಂಬಂಧಿಸಿದ ಚಟುವಟಿಕೆಗಳ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಲಾಗುವುದು.
ಗಣತಿಯ ಉದ್ದೇಶ : 20ನೇ ಜಾನುವಾರು ಗಣತಿಯ ಮುಖ್ಯ ಉದ್ದೇಶ ಇಂತಿದೆ. ಭಾರತ ದೇಶವು ಕೃಷಿ ಪ್ರಧಾನ ದೇಶವಾಗಿದ್ದು, ಗ್ರಾಮಾಂತರ ಪ್ರದೇಶದಲ್ಲಿ ಕೃಷಿ ರೈತಾಪಿ ಸಮುದಾಯಕ್ಕೆ ಪಶುಸಂಗೋಪನೆ ಒಂದು ಪ್ರಮುಖ ಚಟುವಟಿಕೆಯಾಗಿರುತ್ತದೆ. ಆರ್ಥಿಕ ವ್ಯವಸ್ಥೆಯಲ್ಲಿ ಪಶುಸಂಪತ್ತು ಪ್ರಮುಖ ಪಾತ್ರ ವಹಿಸುತ್ತದೆ. ಪ್ರಮುಖ ಜಾನುವಾರು ಉತ್ಪನ್ನಗಳಾದ ಹಾಲು, ಮೊಟ್ಟೆ, ಮಾಂಸ, ಉಣ್ಣೆ, ಇತ್ಯಾದಿಗಳಿಗೆ ಜಾನುವಾರುಗಳು ಮೂಲಾಧಾರವಾಗಿವೆ. ಈ ಹಿನ್ನಲೆಗಳಲ್ಲಿ ಜಾನುವಾರು ಗಣತಿಯಿಂದ ಹೊರಬರುವ ಅಂಕಿ-ಅಂಶಗಳು ರಾಷ್ಟ್ರ ಮತ್ತು ರಾಜ್ಯ ಮಟ್ಟದಲ್ಲಿ ಸರ್ಕಾರದ ಪ್ರಗತಿಪರ ಕಾರ್ಯಕ್ರಮಗಳು ಮತ್ತು ಯೋಜನೆಗಳನ್ನು ರೂಪಿಸಲು ಪ್ರಮುಖ ಪಾತ್ರ ವಹಿಸುತ್ತದೆ.
20ನೇ ಜಾನುವಾರು ಗಣತಿಯಲ್ಲಿ ತಂತ್ರಜ್ಞಾನ-ಮೋಬೈಲ್ ಯ್ಯಾಪ್ ಅಳವಡಿತ ಟ್ಯಾಬ್ಲೇಟ್ ಗಳನ್ನು ಬಳಸಿ ಮಾಹಿತಿಯನ್ನು ಕಲೆಹಾಕಲಾಗುತ್ತದೆ. ಕೊಪ್ಪಳ ಜಿಲ್ಲೆಯಲ್ಲಿನ ಗ್ರಾಮೀಣ ಪ್ರದೇಶದ ಒಟ್ಟು 590 ಗ್ರಾಮಗಳಲ್ಲಿ ಹಾಗೂ ನಗರ ಪ್ರದೇಶಗಳ ಒಟ್ಟು 193 ವಾರ್ಡಗಳಲ್ಲಿ ಗಣತಿ ಕಾರ್ಯವನ್ನು ಕೈಗೊಳ್ಳಲಾಗುತ್ತಿದೆ. ಜಿಲ್ಲೆಯಲ್ಲಿ ಜಾನುವಾರು ಗಣತಿ ಕಾರ್ಯಕ್ರಮಕ್ಕಾಗಿ ಒಟ್ಟು 57 ಜನ ಪಶುಪಾಲನಾ ಇಲಾಖೆಯ ಸಿಬ್ಬಂದಿಯವರನ್ನು ಗಣತಿದಾರರನ್ನಾಗಿ ಮತ್ತು 11 ಜನ ಪಶು ವೈದ್ಯಾಧಿಕಾರಿಗಳನ್ನು ಮೇಲ್ವಿಚಾರಕರಾಗಿ ನೇಮಕ ಮಾಡಲಾಗಿದೆ.
ಅಕ್ಟೋಬರ್. 01 ರಿಂದ ಗಣತಿಯ ಕ್ಷೇತ್ರ ಕಾರ್ಯವು ಪ್ರಾರಂಭಗೊಳ್ಳಲಿದ್ದು, ಡಿಸೆಂಬರ್. 31 ರವರೆಗೆ ಅಂದರೆ ಮೂರು ತಿಂಗಳುಗಳ ಕಾಲ ಜಾನುವಾರು ಗಣತಿ ಕಾರ್ಯಕ್ರಮವು ನಡೆಯಲಿದೆ. ಈ ಅವಧಿಗಳಲ್ಲಿ ನೇಮಕಗೊಂಡ ಗಣತಿದಾರರು, ಪ್ರತಿ ಗ್ರಾಮ/ ವಾರ್ಡಗಳ ಪ್ರತಿ ಕುಟುಂಬಗಳ ಮನೆ ಬಾಗಿಲಿಗೆ ಬಂದು ಮಾಹಿತಿಯನ್ನು ಕಲೆ ಹಾಕುತ್ತಾರೆ. ಈ ಪ್ರಯುಕ್ತ, ಗಣತಿದಾರರಿಗೆ ಅಗತ್ಯವಾದ ಮತ್ತು ನಿಖರವಾದ ಮಾಹಿತಿಯನ್ನು ನೀಡಿ ಸಹಕರಿಸುವಂತೆ ಜಿಲ್ಲೆಯ ಎಲ್ಲಾ ಸಾರ್ವಜನಿಕರಲ್ಲಿ ಕೊಪ್ಪಳ ಪಶುಪಾಲನಾ ಇಲಾಖೆ ಉಪ ನಿರ್ದೇಶಕರಾದ ಡಾ. ಬಸಯ್ಯ ಸಾಲಿ ಅವರು ಪ್ರಕಟಣೆ ಮೂಲಕ ಮನವಿ ಮಾಡಿದ್ದಾರೆ.
======
ನಾರೀಶಕ್ತಿ ಪುರಸ್ಕಾರ್ ಪ್ರಶಸ್ತಿ : ಪ್ರಸ್ತಾವನೆಗಳಿಗೆ ಆಹ್ವಾನ
ಕೊಪ್ಪಳ ಸೆ. 28 (ಕರ್ನಾಟಕ ವಾರ್ತೆ): ಕೊಪ್ಪಳ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಪ್ರಸಕ್ತ ಸಾಲಿನ “ನಾರೀಶಕ್ತಿ ಪುರಸ್ಕಾರ್” ಪ್ರಶಸ್ತಿಗಾಗಿ ಮಹಿಳಾ ಕ್ಷೇತ್ರದಲ್ಲಿ ಸಾಧನೆಗೈದಿರುವ ಅರ್ಹ ವ್ಯಕ್ತಿ/ ಸಂಸ್ಥೆಗಳಿಂದ ಪ್ರಸ್ತಾವನೆಗಳಿಗೆ ಆಹ್ವಾನಿಸಲಾಗಿದೆ.
2019ರ ಮಾರ್ಚ್. 08 ರಂದು ನಡೆಯಲಿರುವ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ಪ್ರಸಕ್ತ ಸಾಲಿನಲ್ಲಿ ಕೇಂದ್ರ ಸರ್ಕಾರವು ಪ್ರಧಾನ ಮಾಡುವ “ನಾರೀಶಕ್ತಿ ಪುರಸ್ಕಾರ್” ಪ್ರಶಸ್ತಿಗಾಗಿ ಮಹಿಳಾ ಕ್ಷೇತ್ರದಲ್ಲಿ ಸಾಧನೆಗೈದಿರುವ ಕೊಪ್ಪಳ ಜಿಲ್ಲೆಯ ಅರ್ಹ ವ್ಯಕ್ತಿ/ ಸಂಸ್ಥೆಗಳಿಂದ ಪ್ರಸ್ತಾವನೆಗಳನ್ನು ಸಲ್ಲಿಸಬಹುದಾಗಿದೆ. ಕೇಂದ್ರ ಸರ್ಕಾರ ನೀಡುವ ರಾಷ್ಟ್ರಮಟ್ಟದ ಪ್ರಶಸ್ತಿಗಳ ವಿವರ ಇಂತಿದೆ.
ರಾಣಿ ರುದ್ರಮ್ಮದೇವಿ : ಮಹಿಳಾ ಕ್ಷೇತ್ರದಲ್ಲಿ ರಾಣಿ ರುದ್ರಮ್ಮದೇವಿ ಪ್ರಶಸ್ತಿಗಾಗಿ ಉತ್ತಮ ಗ್ರಾಮ ಪಂಚಾಯಿತಿ ಆಯ್ಕೆ ಮಾಡವುದು (ಜಿಲ್ಲಾ ಪಂಚಾಯತ ಮುಖಾಂತರ) ಮಹಿಳೆಯರಿಗಾಗಿ ಸಮುದಾಯದಲ್ಲಿ ಉತ್ತಮ ಕಾರ್ಯ ನಿರ್ವಹಿಸಿದರುವ ಬಗ್ಗೆ ಪ್ರಶಸ್ತಿಯನ್ನು ನೀಡುವುದಾಗಿದೆ.
ಮಾತಾ ಜೀಜಾಬಾಯಿ : ನಗರ/ ಪುರಸಭೆಯನ್ನು ಆಯ್ಕೆ ಮಾಡುವುದು. ಮಹಿಳೆಯರಿಗಾಗಿ ಉತ್ತಮ ಸೇವೆ ಮಹಿಳೆಯರಿಗಾಗಿ ವಿಶೇಷ ಕಾಳಜಿವಹಿ ಕಾರ್ಯನಿರ್ವಹಿಸುತ್ತಿರುವ ನಗರ/ ಪುರಸಭೆಯ ಪ್ರಾಧಿಕಾರ.
ಕನ್ನಗಿದೇವಿ ಹಾಗೂ ದೇವಿ ಅಹಲ್ಯ ಬಾಯಿ ಹೋಳ್ಕರ್ : ಉತ್ತಮ ಖಾಸಗಿ ಸಂಸ್ಥೆ/ ಕಂಪನಿ ಮಹಿಳೆಯರಿಗಾಗಿ ಉದ್ಯೋಗ ಅವಕಾಶ ನೀಡಿ ಅವರನ್ನು ಉತ್ತಮ ಸ್ಥಾನಕ್ಕೆ ಕೊಂಡ್ಯೂದಿರುವ ಬಗ್ಗೆ.
ರಾಣಿ ಲಕ್ಷ್ಮಿಬಾಯಿ : ಸಂಶೋಧನಾ ಮತ್ತು ಅಭಿವೃದ್ಧಿ ಕುರಿತು ಮಹಿಳೆಯರರಿಗೆ ಅನುಕೂಲವಾಗುವ ರೀತಿಯಲ್ಲಿ ಸಂಸ್ಥೆ.
ವೈಯಕ್ತಿಕ ಪ್ರಶಸ್ತಿಗೆ ಪ್ರಸ್ತಾವನೆ : ಮಹಿಳೆಯರಿಗೆ ನೀಡುವ ವೈಯಕ್ತಿಕ ಪ್ರಶಸ್ತಿಗೆ ಪ್ರಸ್ತಾವನೆ ಇಂತಿದೆ. ಮಹಿಳೆಯರ ಸಾಮಾಜಿಕ ಆಥಿರ್üಕ ವೃತ್ತಿಪರ ಹಾಗೂ ಮಹಿಳಾ ಕಾನೂನುಗಳನ್ನು ಜಾರಿಗೆ ತರುವಲ್ಲಿ ಶ್ರಮಿಸುವಂತ ಮಹಿಳೆಯರಿಗೆ ಕಲೆ, ವಿಜ್ಞಾನ, ಶಿಕ್ಷಣ, ತಂತ್ರಜ್ಞಾನ, ಸಾಂಸ್ಕೃತಿಕ, ಕ್ರಿಡಾ ಕ್ಷೇತ್ರದಲ್ಲಿ ಶ್ರಮಿಸಿದ ಮಹಿಳೆಯರು ಅರ್ಜಿಯನ್ನು ಪತ್ರಾಕಿಂತ ಅಧಿಕಾರಿಗಳಿಂದ ಧೃಢೀಕರಿಸಿ ದ್ವಿ-ಪ್ರತಿಯಲ್ಲಿ ಸಲ್ಲಿಸಬಹುದು.
“ನಾರೀಶಕ್ತಿ ಪುರಸ್ಕಾರ್” ಪ್ರಶಸ್ತಿಗಾಗಿ ಪ್ರಸ್ತಾವನೆಗಳನ್ನು ಸಲ್ಲಿಸುವ ಅಕ್ಟೋಬರ್. 10 ಕೊನೆ ದಿನವಾಗಿದ್ದು, ಹೆಚ್ಚಿನ ಮಾಹಿತಿಗಾಗಿ ಉಪ ನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕೊಪ್ಪಳ ಇವರನ್ನು ಸಂಪರ್ಕಿಸಲು ಕೋರಿದೆ. ಅಥವಾ ದೂರವಾಣಿ ಸಂಖ್ಯೆ 08539-222703 ಕ್ಕೆ ಸಂಪರ್ಕಿಸಬಹುದು ಎಂದು ಕೊಪ್ಪಳ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರು ತಿಳಿಸಿದ್ದಾರೆ.

Please follow and like us:
error