ಅ. ೨೭ ರಂದು ಕೊಪ್ಪಳದಲ್ಲಿ ಮಿನಿ ಉದ್ಯೋಗ ಮೇಳ

ಕೊಪ್ಪಳ ಅ. ೨ ): ಕೊಪ್ಪಳ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ವತಿಯಿಂದ ಮಿನಿ ಉದ್ಯೋಗ ಮೇಳವನ್ನು ಅ. ೨೭ ರಂದು ಬೆಳಿಗ್ಗೆ ೧೦-೩೦ ರಿಂದ ೨.೩೦ ರವರೆಗೆ ಕೊಪ್ಪಳ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದಲ್ಲಿ ಆಯೋಜಿಸಲಾಗಿದೆ.
ಮಿನಿ ಉದ್ಯೋಗ ಮೇಳದಲ್ಲಿ ಐ.ಎಸ್.ಇ.ಇ ಸ್ಟಾಫಿಂಗ್ ಸಲ್ಯೂಷನ್ಸ ಬೆಂಗಳೂರು, ಹ್ಯಾಪಿ ಮೈಂಡ್ಸ್ ಸಲ್ಯೂಷನ್ಸ್ ಪ್ರೈ.ಲಿ. ಮಂಗಳೂರ, ಮುತ್ತೂಟ್ ಫಿನ್‌ಕಾರ್ಪ ಪ್ರೈ.ಲಿ. ಹುಬ್ಬಳ್ಳಿ, ಎಜುಬ್ರೀಡ್ಜ ಪ್ರೈ.ಲಿ. ಶಿವಮೊಗ್ಗ, ಸಿದ್ದಾರ್ಥ ಕಾರ್ಪೊರೇಶನ್ ಲಿ. ಮುಂಬೈ, ಎಂ.ಎಸ್. ಗ್ರೂಪ್ ಪ್ರೈ.ಲಿ. ಮುಧೋಳ ಹಾಗೂ ಇನ್ನೂ ಹೆಚ್ಚಿನ ಕಂಪನಿಗಳು ಭಾಗವಹಿಸಿ ತಮ್ಮಲ್ಲಿನ ಖಾಲಿ ಹುದ್ದೆಗಳನ್ನು ನೇರ ಸಂದರ್ಶನದ ಮೂಲಕ ನೇಮಕಾತಿ ಮಾಡಿಕೊಳ್ಳಲಿದ್ದು, ಭಾಗವಹಿಸಲು ಉಚಿತ ಪ್ರವೇಶವಿರುತ್ತದೆ.
ಎಸ್.ಎಸ್.ಎಲ್.ಸಿ., ಪಿ.ಯು.ಸಿ., ಬಿ.ಎಸ್.ಡಬ್ಲ್ಯೂ. ಯಾವುದೇ ಪದವಿ (ಬಿ.ಇ ಅನ್ವಯಿಸುವುದಿಲ್ಲ) ಐ.ಟಿ.ಐ ಮತ್ತು ಡಿಪ್ಲೋಮಾ ಎಲ್ಲಾ ಟ್ರೇಡ್‌ಗಳು ಅನ್ವಯಿಸುತ್ತದೆ. ಯಾವುದೇ ಪದವಿ ಹಾಗೂ ಬಿ.ಎಸ್.ಡಬ್ಲ್ಯೂ. ಅಭ್ಯರ್ಥಿಗಳಿಗೆ ನೇರ ಸಂದರ್ಶನ ಮೂಲಕ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಈ ಮೇಳದಲ್ಲಿ ಭಾಗವಹಿಸುವ ಅಭ್ಯರ್ಥಿಗಳು ೧೮ ರಿಂದ ೪೦ ವರ್ಷ ವಯೋಮಿತಿಯಲ್ಲಿರಬೇಕು. ಅರ್ಹ ವಿದ್ಯಾರ್ಹತೆ ಹೊಂದಿದ ನಿರುದ್ಯೋಗಿ ಅಭ್ಯರ್ಥಿಗಳು ತಮ್ಮ ವಿದ್ಯಾರ್ಹತೆಯ ಎಲ್ಲ ಪ್ರಮಾಣ ಪತ್ರಗಳು, ಆಧಾರ ಕಾರ್ಡಿನ ಪ್ರತಿ, ಬಯೋಡಾಟಾ, ಹಾಗೂ ಪಾಸ್ ಪೋಟ ಅಳತೆಯ ಭಾವಚಿತ್ರಗಳೊಂದಿಗೆ ಮಿನಿ ಉದ್ಯೋಗ ಮೇಳದಲ್ಲಿ ಭಾಗವಹಿಸಿ, ಉದ್ಯೋಗದ ನೆರವನ್ನು ಪಡೆಯಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ಜಿಲ್ಲಾ ಆಡಳಿತ ಭವನ ಕೊಪ್ಪಳ ದೂರವಾಣಿ ಸಂಖ್ಯೆ ೦೮೫೩೯-೨೨೦೮೫೯, ಮೊ.ಸಂ ೮೧೦೫೮೪೮೯೯೧ ಕ್ಕೆ ಸಂಪರ್ಕಿಸಬಹುದು ಎಂದು ಕೊಪ್ಪಳ ಜಿಲ್ಲಾ ಉದ್ಯೋಗಾಧಿಕಾರಿ  ತಿಳಿಸಿದ್ದಾರೆ.

Please follow and like us:
error