ಅ. ೨೩ ರಿಂದ ಪ್ರಾಥಮಿಕ ಶಾಲಾ ಶಿಕ್ಷಕರ ವೃಂದತ ವರ್ಗಾವಣೆ ಕೌನ್ಸಲಿಂಗ್ : ಹಾಜರಾಗಲು ಸೂಚನೆ

ಕೊಪ್ಪಳ ಅ.  : ೨೦೧೭-೧೮ನೇ ಸಾಲಿನ ಪ್ರಾಥಮಿಕ ಶಾಲಾ ಶಿಕ್ಷಕರ ವೃಂದದ ವರ್ಗಾವಣೆಯ ಕೌನ್ಸಲಿಂಗ್ ಅ. ೨೩ ರಿಂದ ಆಯೋಜಿಸಲಾಗಿದ್ದು, ಕೌನ್ಸಲಿಂಗ್‌ಗೆ ಹಾಜರಾಗುವಂತೆ ಕೊಪ್ಪಳ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು (ಆಡಳಿತ) ತಿಳಿಸಿದ್ದಾರೆ.
೨೦೧೭-೧೮ನೇ ಸಾಲಿನ ಪ್ರಾಥಮಿಕ ಶಾಲಾ ಶಿಕ್ಷಕರ ಕೋರಿಕೆ ವರ್ಗಾವಣೆಯ ಕೌನ್ಸಲಿಂಗ್ ಅನ್ನು ಅ. ೨೩ ರಿಂದ ೨೭ ರವರೆಗೆ ನಡೆಸಲಾಗುತ್ತಿದೆ. ಅಂತಿಮ ಆಧ್ಯತಾ ಪಟ್ಟಿಯನ್ನು ಉಪನಿರ್ದೇಶಕರ ಕಛೇರಿ ಹಾಗೂ ಎಲ್ಲಾ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯ ಸೂಚನಾ ಫಲಕದಲ್ಲಿ ಪ್ರಕಟಿಸಲಾಗಿದೆ. ಅಂತಿಮ ಆಧ್ಯತಾ ಪಟ್ಟಿಯಲ್ಲಿರುವ ಶಿಕ್ಷಕರುಗಳಿಗೆ ಕ್ರಮ ಸಂಖ್ಯೆಯನುಸಾರ ಕೌನ್ಸಲಿಂಗ್ ನಡೆಸಲು ವೇಳಾ ಪಟ್ಟಿ ತಯಾರಿಸಲಾಗಿದ್ದು, ಶಿಕ್ಷಕರುಗಳು ತಮ್ಮ ಕ್ರಮ ಸಂಖ್ಯೆಯನುಸಾರ ಉಪನಿರ್ದೇಶಕರ ಕಾರ್ಯಾಲಯ ಸಾರ್ವಜನಿಕ ಶಿಕ್ಷಣ ಇಲಾಖೆ ಕೊಪ್ಪಳ ಇಲ್ಲಿಗೆ ಬೆಳಿಗ್ಗೆ ೯ ಗಂಟೆಗೆ ಕೌನ್ಸಲಿಂಗ್‌ಗೆ ಹಾಜರಾಗಬೇಕು.
ಕೌನ್ಸಲಿಂಗ್ ವಿವಿರ : ೨೦೧೭-೧೮ನೇ ಸಾಲಿನ ಪ್ರಾಥಮಿಕ ಶಾಲಾ ಶಿಕ್ಷಕರ ವೃಂದದ ವರ್ಗಾವಣೆಯ ಕೌನ್ಸಲಿಂಗ್ ವೇಳಾ ಪಟ್ಟಿ ವಿವರ ಇಂತಿದೆ. ಸ.ಪ್ರಾ. ಶಾಲಾ ಸಹ ಶಿಕ್ಷಕರ ಆದ್ಯತಾ ಪಟ್ಟಿಯ ಕ್ರಮ ಸಂಖ್ಯೆ ೦೧ ರಿಂದ ೧೦೦ ರವರೆಗೆ ಅ. ೨೩ ರಂದು ಕೌನ್ಸಲಿಂಗ್. ಸ.ಪ್ರಾ. ಶಾಲಾ ಸಹ ಶಿಕ್ಷಕರ ಆದ್ಯತಾ ಪಟ್ಟಿಯ ಕ್ರಮ ಸಂಖ್ಯೆ ೧೦೧ ರಿಂದ ೪೦೦ ರವರೆಗೆ ಅ. ೨೪ ರಂದು, ಕ್ರಮ ಸಂಖ್ಯೆ ೪೦೧ ರಿಂದ ೭೦೦ ರವರೆಗೆ ಅ. ೨೫ ರಂದು, ಕ್ರ.ಸಂ. ೭೦೧ ರಿಂದ ಪೂರ್ಣಗೊಳ್ಳುವವರೆಗೆ ಅ. ೨೬ ರಂದು ಕೌನ್ಸಲಿಂಗ್ ನಡೆಯಲಿದೆ. ಸ.ಪ್ರಾ. ಶಾಲಾ ವಿಶೇಷ ಶಿಕ್ಷಕರು (ಮ್ಯೂಜಿಕ್/ ಕ್ರಾಫ್ಟ್/ ಡ್ರಾಯಿಂಗ್/ ಪೇಂಟ್) ಆದ್ಯತಾ ಪಟ್ಟಿಯ ಕ್ರಮ ಸಂಖ್ಯೆ ೦೧ ರಿಂದ ಮುಕ್ತಾಯದವರೆಗೆ, ಸ.ಹಿ.ಪ್ರಾ ಶಾಲಾ ಮುಖ್ಯ ಶಿಕ್ಷಕರು (ಹೆಚ್.ಪಿ.ಎಸ್. ಹೆಚ್.ಎಂ.) ಆದ್ಯತಾ ಪಟ್ಟಿಯ ಕ್ರಮ ಸಂಖ್ಯೆ ೦೧ ರಿಂದ ಮುಕ್ತಾಯದವರೆಗೆ ಹಾಗೂ ಸ.ಮಾ.ಹಿ.ಪ್ರಾ. ಶಾಲಾ ಮುಖ್ಯ ಶಿಕ್ಷಕರು (ಎನ್.ಜಿ.ಹೆಚ್.ಎಂ.) ಆದ್ಯತಾ ಪಟ್ಟಿಯ ಕ್ರಮ ಸಂಖ್ಯೆ ೦೧ ರಿಂದ ಮುಕ್ತಾಯದವರೆಗೆ ಅ. ೨೭ ರಂದು ಕೌನ್ಸಲಿಂಗ್ ಅನ್ನು ಏರ್ಪಡಿಸಲಾಗಿದ್ದು, ಅಭ್ಯರ್ಥಿಯ ಅರ್ಜಿಯ ಪ್ರತಿ, ಬಿ.ಇ.ಓ ರವರರ ಅನುಮೋದಿತ ಅರ್ಜಿಯ ಪ್ರತಿ, ಆಧ್ಯತೆಗೆ ಸಮಬಂಧಿಸಿದಂತೆ ಪ್ರಮಾಣ ಪತ್ರದ ಮೂಲ ಪ್ರತಿ ಹಾಗೂ ಸೇವಾ ಪ್ರಮಾಣ ಪತ್ರ, ಈ ದಾಖಲೆಗಳೊಂದಿಗೆ ಶಿಕ್ಷಕರು ಕೌನ್ಸಲಿಂಗ್‌ಗೆ ಹಾಜರಾಗಬೇಕು .

Please follow and like us:
error