ಅ. ೨೧ ರಂದು ಕೊಪ್ಪಳದಲ್ಲಿಅ. ೨೧ ರಂದು ಕೊಪ್ಪಳದಲ್ಲಿ ಪೊಲೀಸ್ ಹುತಾತ್ಮರ ದಿನಾಚರಣೆ

ಕೊಪ್ಪಳ ಅ.:  ಕೊಪ್ಪಳ ಜಿಲ್ಲಾ ಪೊಲೀಸ್ ವತಿಯಿಂದ “ಪೊಲೀಸ್ ಹುತಾತ್ಮರ ದಿನಾಚರಣೆ” ಕಾರ್ಯಕ್ರಮವನ್ನು ಅ. ೨೧ ರಂದು ಬೆಳಿಗ್ಗೆ ೮ ಗಂಟೆಗೆ ನಗರದ ಜಿಲ್ಲಾ ಪೊಲೀಸ್ ಕಾರ್ಯಾಲಯದ ಆವರಣದಲ್ಲಿ ಆಯೋಜಿಸಲಾಗಿದೆ.
ಪೊಲೀಸ್ ಹುತಾತ್ಮರ ದಿನಾಚರಣೆ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಕೊಪ್ಪಳ ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್ ಅವರು ಆಗಮಿಸುವರು.
ಕಾರ್ಯಕ್ರಮದ ವಿವರ : ಅ. ೨೧ ರಂದು ಬೆಳಿಗ್ಗೆ ೭-೫೮ ಗಂಟೆಗೆ ಮುಖ್ಯ ಅತಿಥಿಗಳ ಆಗಮನ, ೮ ಕ್ಕೆ ಮುಖ್ಯ ಅತಿಥಿಗಳಿಗೆ ಗೌರವ ವಂದನೆಗಳು, ೮-೧೦ ಕ್ಕೆ ಮುಖ್ಯ ಅತಿಥಿಗಳಿಂದ ಹಾಗೂ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳಿಂದ ಸ್ಮಾರಕಕ್ಕೆ ಪುಷ್ಪಗುಚ್ಛ ಸಮರ್ಪಣೆ, ೮-೧೫ ಕ್ಕೆ ಜಿಲ್ಲಾ ಪೊಲೀಸ್ ಅಧೀಕ್ಷಕರಿಂದ ಹುತಾತ್ಮರಾದ ವೀರಯೋಧರ ಸ್ಮರಣೆ, ೮-೪೫ ಕ್ಕೆ ಮುಖ್ಯ ಅತಿಥಿಗಳ ಅನಿಸಿಕೆ, ೯ ಗಂಟೆಗೆ ಹುತಾತ್ಮರಿಗೆ ಗೌರಮ ಸರ್ಮಪಣೆಗಾಗಿ ಗಾಳಿಯಲ್ಲಿ ಮೂರುಸುತ್ತು ಗುಂಡು ಹಾರಿಸಲಾಗುವುದು. ೯-೦೫ ಕ್ಕೆ ಎರಡು ನಿಮಿಷ ಮೌನ ಆಚರಣೆ, ೯-೧೦ಕ್ಕೆ ವಂದನಾರ್ಪಣೆ ಮತ್ತು ೯-೨೦ ಗಂಟೆಗೆ ಕವಾಯತು ಮುಕ್ತಾಯ ಕಾರ್ಯಕ್ರಮ ನಡೆಯಲಿದೆ. ಕವಾಯತ್‌ನಲ್ಲಿ ಭಾಗವಹಿಸುವ ಎಲ್ಲಾ ಅಧಿಕಾರಿ/ ಸಿಬ್ಬಂದಿಗಳು ಮುಂಜಾನೆ ೭-೪೫ಕ್ಕೆ ಕವಾಯತು ಮೈದಾನದಲ್ಲಿ ಹಾಜರಿರಬೇಕು ಎಂದು ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೇಣುಕಾ ಕೆ. ಸುಕುಮಾರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Please follow and like us:
error