ಅಸಹಜ ಆಕಾರದಲ್ಲಿ ಮತ್ಸ್ಯಾಕಾರದ ಮಗು‌ ಜನನ-ಸಾವು

ಕೊಪ್ಪಳ: ಜಿಲ್ಲೆಯ ಗಂಗಾವತಿ ನಗರದ ಸಾರ್ವಜನಿಕ ಉಪವಿಭಾಗ ಸರಕಾರಿ ಆಸ್ಪತ್ರೆಯಲ್ಲಿ ರವಿವಾರ ಮತ್ಸ್ಯಾಕಾರದ ಮಗು ಜನನವಾಗಿದ್ದು, ಹುಟ್ಟುತ್ತಲೇ ಸಾವನ್ನಪ್ಪಿದೆ.

ಗಂಗಾವತಿ ತಾಲೂಕಿನ ಸಿಂಗನಾಳ ಗ್ರಾಮದ ದಂಪತಿಗೆ ಈ ಮಗುವಾಗಿದ್ದು, ಹೆರಿಗೆಗೂ ಮುನ್ನ ತಪಾಸಣೆಗೆ ಬಂದಾಗ ಮಗುವಿನ ಅಸಹಜ ಬೆಳವಣಿಗೆ ಕುರಿತು ವೈದ್ಯರು ದಂಪತಿಗೆ ಮೊದಲೇ ತಿಳಿಸಿದ್ದರು. ಆದಾಗ್ಯೂ ಮಗು ಜನಿಸಿದರೆ ಸಾಕು, ಅಸಹಜವಾಗಿದ್ದರೂ ಮಗುವನ್ನು ಸಾಕಿ, ಬೆಳೆಸಲು ದಂಪತಿ ಉತ್ಸಾಹ ತೋರಿದ್ದರು. ಸಹಜ ಹೆರಿಗೆಯಾದರೂ ಮಗು ಸಾವನ್ನಪ್ಪಿದ್ದು ಮತ್ಸ್ಯಾಕಾರ ಹೊಂದಿದ್ದು ಅಚ್ಚರಿ ತಂದಿದೆ. ಸಾವನ್ನಪ್ಪಿದ ಅಸಹಜ ಮಗುವನ್ನ ಕಂಡ ತಾಯಿ ಕಣ್ಣೀರಿಟ್ಟರು.

Please follow and like us:
error