ಅಸಲಿ ಬಂಗಾರದ ಬದಲು ನಕಲಿ ರೋಲ್ಡ್ ಗೊಲ್ಡ್ : ಆರೋಪಿಗಳ ಬಂಧನ

ಕೊಪ್ಪಳ : ಚಿನ್ನ ಎಂದು ನಂಬಿಸಿ ರೋಡ್ ಗೊಲ್ಡ ಕೊಡುತ್ತಿರುವ ವ್ಯಕ್ತಿಗಳ ಬಂಧನ. ರೆಹಮತುಲ್ಲಾ ಶೇಖ್ (೩೬), ಸಾಹೇರಾಬಾನು (೨೭), ಸದ್ದಾಮಹುಸೇನ್ (೨೪), ಹಾಗೂ ಹಕಾನಿ ( ೩೨), ಬಂಧಿತ ನಾಲ್ವರು ಆರೋಪಿಗಳು.

ಕೊಪ್ಪಳದ ಜವಾಹರ್ ರಸ್ತೆಯಲ್ಲಿ ಚಿನ್ನದ ಅಂಡಿ ಇಟ್ಟುಕೊಂಡಿದ್ದ ಆರೋಪಿ ರೆಹಮತುಲ್ಲಾ.ಚಿನ್ನ ರಿಪೇರಿ ಮಾಡುತ್ತೇನೆ ಎಂದು ಹೇಳಿ ಗ್ರಾಹಕರಿಂದ ಬಂಗಾರ ಇಟ್ಟು ಕೊಳ್ಳುತ್ತಿದ್ದ. ಬಂಗಾರದ ಬದಲು ನಕಲಿ ರೋಡ್ ಗೊಲ್ಡ ಕೊಡುತ್ತಿದ್ದ ಆರೋಪಿ. ಗ್ರಾಹಕರಿಂದ ಅಡವಿ ಇಟ್ಟು ಕೊಂಡ ಬಂಗಾರ ಮಣಪುರಂ ಗೊಲ್ಡ ಹಾಗೂ ಮುತ್ತೋಟ ಪೈನಾನ್ಸ ಕಂಪನಿಯಲ್ಲಿ ಅಡವಿಡುತ್ತಿದ್ದ.ಒಟ್ಟು ೧೯ ಗ್ರಾಹಕರಿಂದ ಪೋಲಿಸರಿಗೆ ದೂರು. ೧೯ ಗ್ರಾಹಕರಿಂದ ೪೨೭ ಗ್ರಾಮ ಬಂಗಾರ ಪಡೆದಿದ್ದ ಆರೋಪಿಗಳು.ಗ್ರಾಹಕರ ದೂರಿನನ್ವಯ ನಾಲ್ವರು ಆರೋಪಿಗಳ ಬಂಧನ.ಬಂಧಿತರಿಂದ ಒಟ್ಟು ೮೫೦ ಗ್ರಾಮ್ ಬಂಗಾರ ಜಪ್ತಿ.

ರೆಹಮತುಲ್ಲಾ ಗೆ ಸಹಕಾರ ನೀಡಿದ ಮೂವರು ಆರೋಪಿ ಗಳನ್ನು ಬಂಧಿಸಿದ ಕೊಪ್ಪಳ ನಗರ ಠಾಣೆಯ ಸಿಪಿಐ ರವಿ ಉಕ್ಕುಂದ ನೇತೃತ್ವದ ಕೊಪ್ಪಳ ಪೋಲಿಸ ತಂಡ.

Please follow and like us:
error