ಅಶೋಕಸ್ವಾಮಿ ಮನೆ ಮುಂದ ಮಾಟಮಂತ್ರ

ಗಂಗಾವತಿ :

ಔಷಧಿ ಉದ್ಯಮಿ ಮನೆ ಮುಂದೆ ಮಾಟಮಂತ್ರ. ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ಘಟನೆ. ಉದ್ಯಮಿ ಅಶೋಕ ಸ್ವಾಮಿ ಹೇರೂರು ಮನೆ ಮುಂದೆ ಮಾಟಮಂತ್ರ ಮಾಡಲಾಗಿದೆ.

ನಿಂಬೆಹಣ್ಣ, ಕುಂಕುಮ, ಗೇರುಬೀಜ ಹಾಕಿರುವ ಕಿಡಿಗೇಡಿಗಳು.ಅಶೋಕಸ್ವಾಮಿ ಹೆರೂರು ಮೇಲೆ ಎರಡು ದಿನಗಳ ಹಿಂದೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಕಲ್ಮಠದ ಸ್ವಾಮಿಯ ಪ್ರಕರಣಕ್ಕೆ ಸಂಬಂದಿಸಿದಂತೆ ಓರ್ವ ಮಹಿಳೆ ಮತ್ತು ಅವರ ಮಗಳು ಅಶೋಕಸ್ವಾಮಿ ವಿರುದ್ದ ಪ್ರಕರಣ ದಾಖಲಿಸಿದ್ರು.

ಇದರ ಬೆನ್ನಲ್ಲೇ ಕಿಡಗೇಡಿಗಳು ಮಾಟಮಂತ್ರ ಮಾಡಿದ್ದಾರೆ ಎನ್ನಲಾಗಿದೆ. ಸ್ಥಳಕ್ಕೆ ನಗರಠಾಣೆ ಪೊಲೀಸ್ ರ ಭೇಟಿ ಪರಿಶೀಲನೆ.