fbpx

ಅವಳಿ ಮಕ್ಕಳಿಗೆ ಅಂಬುಲೆನ್ಸ್ ನಲ್ಲಿಯೇ ಜನ್ಮನೀಡಿದ ತಾಯಿ

ಯಲಬುರ್ಗಾ : ಅವಳಿ ಮಕ್ಕಳಿಗೆ ಅಂಬುಲೆನ್ಸ್ ನಲ್ಲಿಯೇ  ತಾಯಿ ಜನ್ಮನೀಡಿದ ಘಟನೆ ಯಲಬುರ್ಗಾ ತಾಲೂಕಿನಲ್ಲಿ ನಡೆದಿದೆ.  ಗರ್ಭಿಣಿಗೆ ೧೦೮ ನಲ್ಲಿಯೇ ಸಿಬ್ಬಂದಿ ಹೆರಿಗೆ  ಮಾಡಿಸಿದ್ದಾರೆ.  ಯಲಬುರ್ಗಾ ತಾಲೂಕಿನ ಮದ್ಲೂರಿನ  ಶರಣವ್ವ ಡಂಬಳ ಅವಳಿ ಮಕ್ಕಳಿಗೆ ಜನ್ಮನೀಡಿದ ತಾಯಿ ಹೆರಿಗೆ ಸಮಯದಲ್ಲಿ ಪರಿಸ್ಥಿತಿ ಬಿಗಡಾಯಿಸಿದ್ದರಿಂದ ಯಲಬುರ್ಗಾದಿಂದ ಕೊಪ್ಪಳ ಜಿಲ್ಲಾಸ್ಪತ್ರೆಗೆ ಸಾಗಿಸುವಾಗ ಹೆರಿಗೆಯಾಗಿದೆ.108ನ ಸ್ಟಾಪ್ ಮೇಲ್ ನರ್ಸ ಬಸವರಾಜ್ ಹೊಸಮನಿ, ಡ್ರೈವರ್  ಸುರೇಶ್  ಮುರಡಿ ಹತ್ತಿರ ಅಂಬುಲೆನ್ಸ್ ನಲ್ಲಿ ಸುರಕ್ಷಿತ ಹೆರಿಗೆ ಮಾಡಿಸಿದ್ದಾರೆ. ಈಗ ಮಕ್ಕಳು ಮತ್ತು  ತಾಯಿ ಆರೋಗ್ಯದಿಂದ ಇದ್ದು  ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ೧೦೮ ಸಿಬ್ಬಂದಿಗಳಿಗೆ ಸಾರ್ವಜನಿಕರು, ಮೇಲಾಧಿಕಾರಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ

Please follow and like us:
error
error: Content is protected !!