ಅಳವಂಡಿ ಜಿ. ಪಂ ಕ್ಷೇತ್ರ ಮರುನಾಮಕರಣ ಖಂಡಿಸಿ ಮನವಿ

Koppal

ಅಳವಂಡಿ ಜಿಲ್ಲಾ ಪಂಚಾಯಿತಿ ಕ್ಷೇತ್ರ ಮರುನಾಮಕರಣ ಖಂಡಸಿ ಚುಣಾವಣೆ ಅಧಿಕಾರಿಗಳಿಗೆ ಬುಧವಾರ ಮನವಿ ಸಲ್ಲಿಸಲಾಯಿತು.

ತಾಲೂಕಿನ ಅಳವಂಡಿ ಜಿಪಂ ಇದ್ದ ಹೆಸರನ್ನು ತೆಗೆದು ಇದೀಗಿ ಚುಣಾವಣೆ ಆಯೋಗ ಕವಲೂರು ಜಿಲ್ಲಾ ಪಂಚಾಯಿತಿ ಎಂದು ಮರುನಾಮಕರಣ ಮಾಡಿದೆ ಇದನ್ನು ವೀರೋದಿಸಿ ಅಳವಂಡಿ ಗ್ರಾಮದ ಮುಖಂಡರು ಯುವಕರು ಕೊಪ್ಪಳ ನಗರಕ್ಕೆ ಆಗಮಿಸಿ ಜಿಪಂ ಕ್ಷೇತ್ರವನ್ನು ಅಳವಂಡಿ ಕ್ಷೇತ್ರ ದಲ್ಲಿ ಉಳಿಸಬೇಕು ಎಂದು ಚುಣಾವಣೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಕೊಪ್ಪಳ ತಾಲೂಕಿನಲ್ಲಿ ಅಳವಂಡಿ ಗ್ರಾಮ ದೊಡ್ಡ ಹೊಬಳಿ ಯಾಗಿದ್ದು ಇಲ್ಲಿ ಎಲ್ಲಾತರಹದ ಅನುಕೂಲಗಳು ಇವೆ ಹೋರಾಟದಲ್ಲಿ ಕೂಡ ಹೆಸರುಮಾಡಿದೆ.
ಅಳವಂಡಿ ಜಿಲ್ಲಾ ಪಂಚಾಯತ್ ಕ್ಷೇತ್ರ ತೆಗೆದು ಮರುನಾಮಕರಣ ಮಾಡಿದ್ದು ತುಂಬಾ ನೋವು ಉಂಟು ಮಾಡಿದೆ‌. ದಯವಿಟ್ಟು ಇದನ್ನು ವಾಪಸ್ ಪಡೆದು ಅಳವಂಡಿ ಜಿಪಂ ಕ್ಷೇತ್ರ ಅಂತಾ ನಾಮಕರಣ ಮಾಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು. ಒಂದುವೇಳೆ ಮರುನಾಮಕರಣ ರದ್ದು ಗೋಳಿಸದೆ ಇದ್ದಲ್ಲಿ ಮಂದಿನ ದಿನಮಾನಗಳಲ್ಲಿ ಉಗ್ರ ಹೋರಾಟ ಮಾಡುವುದಾಗಿ ಗ್ರಾಮಸ್ಥರು ಎಚ್ಚರಿಕೆ ನೀಡಿದರು.

Please follow and like us:
error