ಅಳವಂಡಿ ಈದ್ ಮಿಲಾದ್ ಹಬ್ಬದ ಪ್ರಯುಕ್ತ ಕಾರ್ಯಕ್ರಮ ಹಾಗೂ ಮೆರವಣಿಗೆ

Koppal  ಪೈಗಂಬರರ ಸಂದೇಶ ಜೀವನದಲ್ಲಿ ಅಳವಡಿಸಿಕೊಳ್ಳಿ
ಭಗವದ್ಗೀತೆ, ಖುರಾನ್, ಬೈಬಲ್ ಸೇರಿ ಎಲ್ಲ ಗ್ರಂಥಗಳು ಶಾಂತಿ ಸಾರುವ ಗ್ರಂಥಗಳಾಗಿವೆ ಎಂದು ಅಳವಂಡಿಯ ಶ್ರೀ ಸಿದ್ದೇಶ್ವರ ಮಠದ ನಿಯೋಜಿತ ಮರಿದೇವರು ಶ್ರೀ ಸಿದ್ಧವೀರ ಸ್ವಾಮಿಗಳು ಸಿದ್ದೇಶ್ವರ ಮಠ ಅಳವಂಡಿ ಅವರು ಚಾಲನೆ ನೀಡಿ ಎಲ್ಲಾ ಮತ ಧರ್ಮದ ಕುಲಬಾಂಧವರು ಒಂದೆ ಮಾನವ ಕುಲವೊಂದೆ ಎಂದು ಸಾರಿದರು. ಗ್ರಾಮದ ಜುಮ್ಮಾ ಮಸೀದಿಯಲ್ಲಿ ಸೋಮವಾರ ಈದ್ ಮಿಲಾದ್ ಹಬ್ಬದ ಪ್ರಯುಕ್ತ ಹಮ್ಮಿಕೊಂಡ ಕಾರ್ಯಕ್ರಮ ಹಾಗೂ ಮೆರವಣಿಗೆ ಚಾಲನೆ ನೀಡಿ ಮಾತನಾಡಿದರು.
ಸರ್ವ ಜನಾಂಗದವರು ಒಂದೇ ಎಂಬ ತತ್ವದಡಿಯಲ್ಲಿ ಜೀವನ ನಡೆಸಿದಾಗ ಅಭಿವೃದ್ಧಿ ಸಾಧಿಸಲು ಸಾಧ್ಯ. ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಸಾವಿರಾರು ಜನ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದರು.
ಕೊಪ್ಪಳ ನಗರಸಭೆ ಸದಸ್ಯ ಅಹಮ್ಮದ್ ಪಟೇಲ್ ಮಾತನಾಡಿ ನಮ್ಮ ದೇಶ ಬಹು ಭಾಷೆ ಬಹು ಜನಾಂಗ ಹೊಂದಿದ ರಾಷ್ಟ್ರವಾಗಿದೆ. ಇಲ್ಲಿ ಎಲ್ಲ ಜನಾಂಗದವರು ಒಗ್ಗಟ್ಟಿನಿಂದ ಜೀವನ ನಡೆಸಬೇಕಿದೆ. ಇದರಿಂದ ದೇಶದ ಅಭಿವೃದ್ಧಿ ಸಾಧ್ಯ. ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಲು ಚಿಂತಿಸಬೇಕು ಎಂದರು.
ಡಾ. ಸಿದ್ದಲಿಂಗಸ್ವಾಮಿ ಇನಾಮದಾರ, ಭರಮಪ್ಪ ನಗರದ, ಬಸವರೆಡ್ಡಿ ಹಳ್ಳಿಕೇರಿ, ಶಂಕ್ರಪ್ಪ ಕಲಾದಗಿ, ಗುರುಬಸವರಾಜ ಹಳ್ಳಿಕೇರಿ, ಹನುಮಂತಪ್ಪ ಕರಡಿ, ರೇಣುಕಪ್ಪ, ನಜರುದ್ದಿನ ಬಿಸ್ರಳ್ಳಿ, ಮಹಮ್ಮದಸಾಬ ಮಠದ, ಮಾಬುಸಾಬ ಚಿಜ್ಜೇರಿ, ಮಹಮ್ಮದಸಾಬ ಮುಲ್ಲಾ, ನನ್ನುಸಾಬ ಬಿಸ್ರಳ್ಳಿ, ಇಮಾಮಸಾಬ ಬೇಟಗೇರಿ, ಮಾಬುಸಾಬ ಎಣ್ಣಿ, ಯೂನಸ್ ಗಂಗಾವತಿ, ಮುಸ್ತುಫ್ ಗಡಾದ, ಅಹಮ್ಮದಸಾಬ್, ಮೈಬುಸಾಬ ಮುಲ್ಲಾ, ದಾದು ಚಿಜ್ಜೇರಿ, ಖಾಸೀಂಸಾಬ, ಸಿದ್ದಣ್ಣ ಕುರಿಶೆಟ್ಟರ, ಸಲೀಂ ಅಳವಂಡಿ, ಮಾನ್ವಿ ಭಾಷಾ, ರಜಾಕ್‌ಸಾಬ, ಹುಸೇನ, ಪರಪ್ಪ, ಇಮಾಮಸಾಬ ಮಠದ, ಈಶಪ್ಪ ಜೋಳದ, ಜಿಲಾನಿಸಾಬ, ಇಸ್ಮಾಯಿಲ್, ಅಶೋಕ ಬಂಡಿ, ಎ ಕೆ ಮುಲ್ಲಾ, ನಬೀಸಾಬ ಕೆಲೂರು, ಶಮಿ ಮುಂಡರಗಿ ಹಾಗೂ ಅಂಜುಮನ್ ಕಮೀಟಿಯ ಅಧ್ಯಕ್ಷರು ಅನ್ವರಹುಸೇನ ಗಡಾದ ಮತ್ತು ಸರ್ವಸದಸ್ಯರು ಹಾಗೂ ನೌ ಜವಾನ್ ಸಾಥಿಗಳು ಹಾಜರಿದ್ದರು.

Please follow and like us:
error