ಅಲ್ಲಮಪ್ರಭು ಬೆಟ್ಟದೂರು ಅವರಿಗೆ ‘ಸಾಹಿತ್ಯಶ್ರೀ ಪ್ರಶಸ್ತಿ’


ಕೊಪ್ಪಳ ಮಾ.೧೨: ಕಲಬುರಗಿಯ ಕನ್ನಡನಾಡು ಲೇಖಕರ ಮತ್ತು ಓದುಗರ ಸಹಕಾರ ಸಂಘ ನಿಯಮಿತ ಕಲಬುರಗಿ, ಕಲಬುರಗಿ ವಿಭಾಗದ ಸಾಹಿತಿಗಳಿಗೆ ಜೀವಮಾನದ ಸಾಧನೆಗಾಗಿ ನೀಡಲಾಗುವ ಕನ್ನಡನಾಡು ‘ಸಾಹಿತ್ಯಶ್ರೀ ಪ್ರಶಸ್ತಿ’ ಯನ್ನು ಇತ್ತೀಚಿಗೆ ಡಾ.ಸತೀಶ ಹೊಸಮನಿ ನಿರ್ದೇಶಕರು ಸಾರ್ವಜನಿಕ ಗ್ರಂಥಾಲಯ ಇಲಾಖೆ ಬೆಂಗಳೂರು ಹಾಗೂ ಶ್ರೀ ನಂದೀಶ ಹಂಚೆ ಅಧ್ಯಕ್ಷರು ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು ಇವರು ಅಲ್ಲಮಪ್ರಭು ಬೆಟ್ಟದೂರು ಅವರಿಗೆ ಪ್ರದಾನ ಮಾಡಿದರು. ಪ್ರಶಸ್ತಿಯ ಮೊತ್ತ ರೂ.೧೦,೦೦೦=೦೦. ಸಂಘಟನೆಯ ಅಧ್ಯಕ್ಷರಾದ ಅಪ್ಪರಾವ ಅಕ್ಕೋಣೆಯವರು ಅಧ್ಯಕ್ಷತೆವಹಿಸಿದ್ದರು.

Please follow and like us:
error