ಅಗಸರು ಮತ್ತು ಕ್ಷೌರಿಕರಿಗೆ ರೂ. 5 ಸಾವಿರ ಪರಿಹಾರ ನೆರವು : ಸಮಿತಿ ಸದಸ್ಯರ ಸಭೆ

ಅರ್ಹ ಫಲಾನುಭವಿಗಳಿಗೆ ಸೌಲಭ್ಯ ದೊರಕಿಸಲು ಅಗತ್ಯ ಕ್ರಮವಹಿಸಿ : ಪಿಸುನೀಲ್ ಕುಮಾರ್

ಕೊಪ್ಪಳ,  : ಲಾಕ್‌ಡೌನ್ ಹಿನ್ನೆಲೆಯಲ್ಲಿ ಸಂಕಷ್ಟಕ್ಕೊಳಗಾದ ಅಗಸರು ಮತ್ತು ಕ್ಷೌರಿಕರ ವೃತ್ತಿಯಲ್ಲಿ ತೊಡಗಿರುವವರಿಗೆ ರೂ. 5 ಸಾವಿರ ನೆರವನ್ನು ಸರ್ಕಾರ ಘೋಷಿಸಿದ್ದು, ಅರ್ಹ ಫಲಾನುಭವಿಗಳಿಗೆ ಸೌಲಭ್ಯ ದೊರಕಿಸಿಕೊಡುವಲ್ಲಿ ಸಂಬAದಪಟ್ಟ ಅಧಿಕಾರಿಗಳು ಅಗತ್ಯ ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿ ಪಿಸುನೀಲ್ ಕುಮಾರ್ ತಿಳಿಸಿದರು.
ಕೋವಿಡ್-19ರ ಕಾರಣ ಲಾಕ್‌ಡೌನ್ ಜಾರಿಗೊಳಿಸಿದ ಹಿನ್ನೆಲೆಯಲ್ಲಿ ಸಂಕಷ್ಟಕ್ಕೊಳಗಾದ ನಗರ, ಪಟ್ಟಣ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಅಗಸರು ಮತ್ತು ಕ್ಷೌರಿಕರ ವೃತ್ತಿಯಲ್ಲಿ ತೊಡಗಿರುವವರಿಗೆ ಒಂದು ಬಾರಿ ಪರಿಹಾರವಾಗಿ 5 ಸಾವಿರ ನೆರವು ನೀಡುವ ಕುರಿತು ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಸೋಮವಾರದಂದು (ಜೂನ್.22) ನಡೆದ ಜಿಲ್ಲಾ ಮಟ್ಟದ ಸಮಿತಿ ಸದಸ್ಯರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸರ್ಕಾರದ ಆದೇಶದಂತೆ ಕ್ಷೌರಿಕ ಮತ್ತು ಅಗಸ ವೃತ್ತಿ ನಿರ್ವಹಿಸುತ್ತಿರುವ ಅಸಂಘಟಿತ ವಲಯದ ಫಲಾನುಭವಿಗಳನ್ನು ಗುರುತಿಸಿ, ಘೋಷಿಸಲ್ಪಟ್ಟ ನೆರವಿನ ಮೊತ್ತವನ್ನು ಪಾವತಿಸಲು ಸರ್ಕಾರವು ಮೇ. 28 ರಂದು ಆದೇಶಿಸಿದ್ದು, ಆದೇಶದ ಅನುಬಂಧ-1ರಲ್ಲಿ ಅರ್ಹತಾ ಷರತ್ತುಗಳು ಅನುಬಂಧ-2ರಲ್ಲಿ ಪ್ರಾಮಾಣಿತ ಕಾರ್ಯಾಚರಣೆ ವಿಧಾನ ವಿವರಿಸಲಾಗಿದೆ.  ಹಾಗೂ ಜೂನ್. 02 ರಂದು ಮಾರ್ಪಡಿತ ಕರಡು ಸೇವಾ ಸಿಂಧು ಪೋರ್ಟಲ್‌ನ್ನು ಅಭಿವೃದ್ಧಿ ಪಡಿಸಲಾಗಿದ್ದು, ಅದರಂತೆ ಸಂಬAಧಪಟ್ಟ ಇಲಾಖೆಗಳು ಕ್ರಮ ವಹಿಸಬೇಕು.  ಈ ನಿಟ್ಟಿನಲ್ಲಿ ನಗರಾಭಿವೃದ್ಧಿ ಇಲಾಖೆಯು ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರಗಳು, ನಗರಸಭೆ, ಪುರಸಭೆ, ಪಟ್ಟಣ ಪಂಚಾಯತ ಕಂದಾಯ ಅಧಿಕಾರಿಗಳು, ಕಂದಾಯ ನಿರೀಕ್ಷಕರು ಉದ್ಯೋಗ ದೃಢೀಕರಣ ನೀಡುವ ಅಧಿಕಾರ ಹೊಂದಿದ್ದು, ಕ್ಷೌರಿಕ ಮತ್ತು ಅಗಸ ವೃತ್ತಿ ನಿರ್ವಹಿಸುತ್ತಿರುವ ಅಸಂಘಟಿತ ವಲಯದ ಫಲಾನುಭವಿಗಳಿಗೆ ಅಗತ್ಯ ದೃಢೀಕರಣ ಪತ್ರ ನೀಡಬೇಕು.  ಇದ್ದಕ್ಕೆ ಸಂಬAಧಿಸಿದAತೆ ಯಾವುದೇ ವಿಳಂಭಕ್ಕೆ ಅವಕಾಶ ನೀಡದೇ ಉದ್ಯೋಗ ಪ್ರಮಾಣ ಪತ್ರವನ್ನು ನೀಡಬೇಕು.  ಹಾಗೂ ದೃಢೀಕರಣ ನೀಡುವಾಗ ಫಲಾನುಭವಿಗಳ ನೈಜತೆ ಪರಿಶೀಲಿಸಬೇಕೆಂದು ಸೂಚನೆ ನೀಡಿದರು.
ಗ್ರಾಮೀಣಾಭಿವೃದ್ಧಿ ಇಲಾಖೆಯು ಗ್ರಾಮೀಣ ಭಾಗದಲ್ಲಿ ಆಯಾ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ಫಲಾನುಭವಿಗಳಿಗೆ ಆಯಾ ಗ್ರಾ.ಪಂ.ನ ಅಭಿವೃದ್ಧಿ ಅಧಿಕಾರಿಗಳು ಉದ್ಯೋಗ ದೃಢೀಕರಣ ನೀಡಬೇಕು.  ನೈಜತೆ ಪರಿಶೀಲನೆ ಹಾಗೂ ಸರ್ಕಾರದ ನಿರ್ದೇಶನಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಕ್ರಮ ಕೈಗೊಳ್ಳಬೇಕು.  ಕಂದಾಯ ಇಲಾಖೆ ಉಪ ತಹಶೀಲ್ದಾರರು, ಕಂದಾಯ ನಿರೀಕ್ಷಕರು ಕೂಡ ಈ ಕುರಿತು ಉದ್ಯೋಗ ದೃಢೀಕರಣವನ್ನು ನೀಡಬಹುದಾಗಿದ್ದು, ಕಚೇರಿಗೆ ಬರುವ ಕಾರ್ಮಿಕರುಗಳಿಗೆ ದೃಢೀಕರಣ ನೀಡುವಂತೆ ಅಗತ್ಯ ಕ್ರಮ ವಹಿಸಲು ಸೂಚಿಸಿದರು.
ಈ ಸೌಲಭ್ಯಕ್ಕೆ ಸಂಬAಧಿಸಿದAತೆ ಕಾರ್ಮಿಕ ಇಲಾಖೆಗೆ ಕಾರ್ಮಿಕರು ಬಂದರು ಸಹ ಅಧಿಕಾರಿಗಳು ಅಗತ್ಯ ದೃಢೀಕರಣ ನೀಡಬೇಕು.  ದೃಢೀಕರಣ ನೀಡುವಲ್ಲಿ ಅಧಿಕಾರಿಗಳಿಗೆ ಯಾವುದೇ ರೀತಿಯ ತೊಂದರೆಗಳಾದರೆ ಕಾರ್ಮಿಕಾಧಿಕಾರಿಗಳು ಸಹಯೋಗ ವಹಿಸಬೇಕು.  ಯಾವುದೇ ಇಲಾಖೆಯ ಅಧಿಕಾರಿಗಳು ಕಾರ್ಮಿಕರನ್ನು ಅಲೇದಾಡಿಸುವುದು ಹಾಗೂ ತೊಂದರೆ ಕೊಡುವ ಕೆಲಸ ಮಾಡಬಾರದು.  ದಿನನಿತ್ಯ ಅರ್ಜಿಗಳ ಸ್ವೀಕೃತಿ ಮತ್ತು ವಿಲೇ ಕುರಿತು ಮಾಹಿತಿ ನೀಡಬೇಕು.  ನೈಜವಾಗಿರುವ ಫಲಾನುಭವಿಗಳಿಗೆ ಯಾವ ಅಧಿಕಾರಿಗಳಾದರು ದೃಢೀಕರಣ ನೀಡಲು ನಿರಾಕರಿಸಿದ್ದಲ್ಲಿ ಅಥವಾ ವಿನಾಃ ಕಾರಣ ಅಲೇದಾಡಿಸುವ ಕೆಲಸ ಮಾಡಿದ್ದಲ್ಲಿ, ಅಂತಹ ಅಧಿಕಾರಿಗಳ ಮೇಲೆ ಕ್ರಮ ವಹಿಸಲಾಗುವುದು ಎಂದು ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ಎಂದು ಸೂಚನೆ ನೀಡಿದರು.
ಜಿಲ್ಲಾ ಕಾರ್ಮಿಕಾಧಿಕಾರಿ ವೀಣಾ ಮಾಸ್ತಿ ಅವರು ಮಾತನಾಡಿ, ಮೇ. 06 ರಂದು ನಡೆದ ಪತ್ರಿಕಾಗೋಷ್ಟಿಯಲ್ಲಿ ಕರ್ನಾಟಕ ಸರ್ಕಾರದ ಮುಖ್ಯಮಂತ್ರಿಗಳು, ಕೋವಿಡ್-19ರ ಕಾರಣ ಲಾಕ್‌ಡೌನ್ ಹಿನ್ನೆಲೆ ಸಂಕಷ್ಟಕ್ಕೊಳಗಾದ 60 ಸಾವಿರ ಅಗಸರು, 2 ಲಕ್ಷ 30 ಸಾವಿರ ಕ್ಷೌರಿಕ ವೃತ್ತಿಯಲ್ಲಿ ತೊಡಗಿರುವ ಅಸಂಘಟಿತ ವಲಯದ ಕಾರ್ಮಿಕರಿಗೆ ಒಂದು ಬಾರಿ ಪರಿಹಾರವಾಗಿ ರೂ. 5 ಸಾವಿರಗಳ ನೆರವನ್ನು ನೀಡುವುದಾಗಿ ಘೋಷಿಸಿರುತ್ತಾರೆ.  ಈ ನಿಟ್ಟಿನಲ್ಲಿ ಅರ್ಹ ಫಲಾನುಭವಿಗಳಿಗೆ ಎಲ್ಲರಿಗೂ ಈ ಸೌಲಭ್ಯ ದೊರಕಿಸಿಕೊಡುವಲ್ಲಿ ಅಧಿಕಾರಿಗಳು ಅಗತ್ಯ ಸಹಕಾರ ನೀಡಬೇಕು.  ಅಲ್ಲದೇ ಇಂತಹ ಸಂದರ್ಭಗಳಲ್ಲಿ ಸಂಘ ಸಂಸ್ಥೆಗಳ ಕಾರ್ಯ ಅನಿವಾರ್ಯವಾಗಿದ್ದು, ಈ ಯೋಜನೆಯನ್ನು ಸಫಲಗೊಳಿಸಲು ಜಿಲ್ಲೆಯ ಎಲ್ಲಾ ಅಗಸರು ಹಾಗೂ ಕ್ಷೌರಿಕ ವೃತ್ತಿಯಲ್ಲಿ ತೊಡಗಿರುವವರಿಗೆ ನಿಗದಿತ ಸಮಯದಲ್ಲಿ ಅರ್ಜಿ ಸಲ್ಲಿಸಿ ಯೋಜನೆಯ ಸದುಪಯೋಗ ಪಡಿಸಲು ಸಂಘ ಸಂಸ್ಥೆಗಳು ಸಹಕರಿಸಬೇಕು ಎಂದರು.
ಸಭೆಯಲ್ಲಿ ಜಿಲ್ಲಾ ನಗರಾಭಿವೃದ್ಧಿ ಯೋಜನಾ ನಿರ್ದೇಶಕ ಸಿದ್ದರಾಮೇಶ್ವರ, ಜಿಲ್ಲಾ ಬಾಲಕಾರ್ಮಿಕ ಯೋಜನಾ ನಿರ್ದೇಶಕ ಬಸವರಾಜ ಹಿರೇಗೌಡ್ರ ಸೇರಿದಂತೆ ವಿವಿಧ ಇಲಾಖೆಗಳ ಹಾಗೂ ನಗರಸಭೆ, ಪುರಸಭೆ, ಪ.ಪಂ. ಅಧಿಕಾರಿಗಳು ಹಾಗೂ ಅಗಸರು ಮತ್ತು ಕ್ಷೌರಿಕ ಸಂಘದವರು ಉಪಸ್ಥಿತರಿದ್ದರು.

Please follow and like us:
error