ಅರ್ನಬ್ ಗೋಸ್ವಾಮಿಯನ್ನು ಬಂಧಿಸುವಂತೆ ಕಾಂಗ್ರೆಸ್ ಒತ್ತಾಯ

ಕೊಪ್ಪಳ: ಕೊಪ್ಪಳದ ಡಿಸಿಸಿ ಜಿಲ್ಲಾ ಸಮಿತಿಯಿಂದ ರಿಪಬ್ಲಿಕ್‌ ಸುದ್ದಿ ವಾಹಿನಿಯ ಮುಖ್ಯಸ್ಥ ಅರ್ನಬ್ ಗೋ ಸ್ವಾಮಿ ವಿರುದ್ಧ ಪ್ರಕರಣ ದಾಖಲಿಸುವಂತೆ ನಗರ ಠಾಣೆಯಲ್ಲಿ ಮನವಿ ಸಲ್ಲಿಸಲಾಯಿತು

ನಂತರ ಮಾತ್ನಾಡಿದ ಡಿಸಿಸಿ ಜಿಲ್ಲಾಧ್ಯಕ್ಷ ಶಿವರಾಜ ತಂಗಡಗಿ, ಯಾವುದೇ ಮಾಧ್ಯಮ ನಮ್ಮನ್ನ ಎಚ್ಚರಿಸುವಂತ ಕೆಲಸ ಮಾಡಬೇಕು.‌ಎಲ್ಲವೊಂದು ಕಡೆ ರಿಪಬ್ಲಿಕ್ ಮಾಧ್ಯಮ ಒಂದು ಪಕ್ಷವನ್ನು ಟಾರ್ಗೆಟ್ ಮಾಡಿ ಮಾತ್ನಾಡುತ್ತೆ. ಒಂದು‌ ಪಕ್ಷದ ಪರವಾಗಿ ವಹಿಸಿಕೊಂಡು ಮುಖ್ಯಸ್ಥ ಗೋ ಸ್ವಾಮಿ ಮಾತ್ನಾಡುತ್ತಾರೆ. ಇದು ಮಾಧ್ಯಮಕ್ಕೆ ಕಪ್ಪುಚುಕ್ಕೆ. ನಮ್ಮ ಪಕ್ಷದ ಇಂದಿರಾಗಾಂಧಿ ಅವರ ನಂತರ ಸೊನೀಯ ಗಾಂಧಿ ಅವರು ಪ್ರಮುಖವಾಗಿ ನಮ್ಮ ಪಕ್ಷ ನಡೆಸುತ್ತಿದ್ದಾರೆ. ಅವರ ಬಗ್ಗೆ ಕೀಳಾಗಿ ಮಾತ್ನಾಡೋದು ಸರಿಯಲ್ಲ. ಮಾಧ್ಯಮಗಳು ಒಂದು ಪಕ್ಷದ ಪರವಾಗಿ ಮಾತ್ನಾಡ ಬಾರದು. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ರಿಪಬ್ಲಿಕ್ ಮುಖ್ಯಸ್ಥನ ವಿರುದ್ಧ ಪ್ರಕರಣ ದಾಖಲಿಸಲಾಗುತ್ತಿದೆ. ಕೂಡಲೇ ಅರ್ನಬ್ ಗೋಸ್ವಾಮಿಯನ್ನು ಅರೆಸ್ಟ್ ಮಾಡಬೇಕು ಎಂದು ಒತ್ತಾಯಿಸಿದ್ರು

ಈ ಸಂದರ್ಭದಲ್ಲಿ ಶಾಸಕ ರಾಘವೇಂದ್ರ ಹಿಟ್ನಾಳ, ಜಿ.ಪಂ ಮಾಜಿ ಅಧ್ಯಕ್ಷ ರಾಜಶೇಖರ ಹಿಟ್ನಾಳ, ಅಮರೇಶ ಗೋನಾಳ, ಪ್ರಸನ್ನ ಗಡಾದ  ಮುತ್ತುರಾಜ್ ಕುಷ್ಟಗಿ, ಕಾಟನ್ ಪಾಷಾ, ರವಿ ಕುರಗೋಡ,ಸುರೇಶ ಭೂಮರಡ್ಡಿ, ಕೃಷ್ಣ ಇಟ್ಟಂಗಿ ಸೇರಿದಂತೆ ಇತರ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.

Please follow and like us:
error