ಅರುಣಾ ನರೇಂದ್ರ ಇವರಿಗೆ ಮಧುರ ಚೆನ್ನರ ರಾಜ್ಯ ಪ್ರಶಸ್ತಿ


ಕೊಪ್ಪಳ : ನಗರದ ಮಕ್ಕಳ ಕವಯತ್ರಿ ಅರುಣಾ ನರೇಂದ್ರ ಇವರಿಗೆ ಇತ್ತೀಚಿಗೆ ವಿಜಯಪುರ ಜಿಲ್ಲೆಯ ಚಡಚಣದಲ್ಲಿ ಜರುಗಿದ ರಾಜ್ಯ ಯುವ ಬರಹಗಾರರ ಒಕ್ಕುಟದ ಮೂರನೇ ರಾಜ್ಯ ಸಮ್ಮೇಳನದಲ್ಲಿ ಅನುಭಾವ ಕವಿ ಮಧುರ ಚೆನ್ನರ ರಾಜ್ಯ ಪ್ರಶಸ್ತಿ ದೊರೆತಿದೆ. ಅರುಣಾ ಇವರು ಕಾವ್ಯ, ಕಥೆ, ಲೇಖನ, ಗಝಲ್, ರುಬಾಯಿಗಳು, ಹಾಯಿಕುಗಳು, ತತ್ವಪದಗಳು ಹಾಗೂ ಮಕ್ಕಳ ಕವಿತೆಗಳನ್ನು ಬರೆಯುವದರ ಮೂಲಕ ಸಾಹಿತ್ಯ ಸೇವೆಯನ್ನು ಮಾಡುತ್ತಿದ್ದಾರೆ. ಇವರ ಸೇವೆ ಗುರುತಿಸಿ ರಾಜ್ಯ ಯುವ ಬರಹಗಾರರ ಓಕ್ಕೂಟ(ರಿ) ಕೇಂದ್ರ ಸಮಿತಿ ಬೆಂಗಳೂರು ಇವರು ಈ ಪ್ರಶಸ್ತಿ ಪ್ರದಾನ ಮಾಡಿರುತ್ತಾರೆ. ಇವರಿಗೆ ಕೊಪ್ಪಳದ ಸಾಹಿತ್ಯ ಬಳಗ ಅಬಿನಂಧಿಸಿದೆ.