ಅಭಿವೃದ್ಧಿ ಕಾರ್ಯಗಳೇ ಕಾಂಗ್ರೇಸ್ ಗೆಲುವಿನ ಶ್ರೀ ರಕ್ಷೆ-ಶಾಸಕ ಕೆ.ರಾಘವೇಂದ್ರ ಹಿಟ್ನಾಳ

ಕೊಪ್ಪಳ:24, ನಗರದ ವಿವಿಧ ವಾರ್ಡಗಳಲ್ಲಿ ಕಾಂಗ್ರೇಸ್ ಪಕ್ಷದ ಚುನಾವಣಾ ಪ್ರಚಾರ ಹಾಗೂ ಅಭ್ಯರ್ಥಿಗಳ ಪರ ಮತಯಾಚನೆ ಮಾಡಿ ಬಳಿಕ ಮಾತನಾಡಿದ ಶಾಸಕ ಕೆ.ರಾಘವೇಂದ್ರ ಹಿಟ್ನಾವಳರವರು ಹಿಂದಿನ ಕಾಂಗ್ರೇಸ್ ಸರ್ಕಾರದ ಅವಧಿಯಲ್ಲಿ ನಗರದ ಅಭಿವೃದ್ಧಿಗಾಗಿ ಸುಮಾರು 40 ಕೋಟಿ ಗಿಂತಲು ಹೆಚ್ಚು ಅನುಧಾನ ಬಿಡುಗಡೆಗೊಂಡಿದ್ದು, ಕೊಪ್ಪಳನಗದರಲ್ಲಿ ಎಲ್ಲಾ ರಸ್ತೆಗಳ ಕಾಮಗಾರಿ ಸಂಪೂರ್ಣಗೊಳ್ಳುತ್ತಿದ್ದು, ನಗರಕ್ಕೆ ಸುಸರ್ಜಿತ 4 ಕೋಟಿ ವೆಚ್ಚದ ಜೆ.ಪಿ.ಮಾರ್ಕೆಟ್ ನಿರ್ಮಾಣ ಮಹಿಳಾ ಪದವಿ ಕಾಲೇಜು, ಕೊಪ್ಪಳ ಸ್ನಾತಕೋತ್ತರ ಕೇಂದ್ರ 13 ಏಕರೆ ಭೂಮಿ ಮಂಜೂರು ಮಾಡಿಸಿದ್ದು, ಜಿಲ್ಲಾ ಆಸ್ಪತ್ರೆ ಹೆಚ್ಚಿನ 400 ಹಾಸಿಗೆಯುಳ್ಳ ಆಸ್ಪತ್ರೆ ಮಂಜೂರು ಮಾಡಿಸಿದ್ದು, ಮುಖ್ಯವಾಗಿ ನಗರದ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಿ ಜನರಿಗೆ ಪ್ರತಿ 2 ದಿನಕ್ಕೊಮ್ಮೆ ಕುಡಿಯುವ ನೀರಿನ ಸರಬರಾಜು ಮಾಡುತ್ತಿದ್ದು, ಈಗಾಗಲೇ ನಗರದ ಏತಿಹಾಸಿಕ ಹುಲಿ ಕೆರಿಯನ್ನು ತುಂಗಾಭದ್ರಾ ನದಿಯ ಹಿನ್ನೀರಿನಿಂದ ತುಂಬಿಸುತ್ತಿದ್ದು, ಬರುವ ಬೇಸಿಗೆಯಲ್ಲಿ ನಗರಕ್ಕೆ ನೀರಿನ ಬವಣೆಯಾಗದಂತೆ ಕ್ರಮ ಕೈಗೊಳ್ಳಲಾಗಿದ್ದು, ನಗರದ ಜನತೆ ಈ ಹಿಂದಿನ 20 ವರ್ಷಗಳಲ್ಲಿ ಅಭಿವೃದ್ಧಿ ಕಾರ್ಯಗಳನ್ನು ನೋಡಿ ಕಾಂಗ್ರೇಸ್ ಅಭ್ಯರ್ಥಿಗಳನ್ನು ಜಯಬೇರಿಗೊಳಿಸಿ ಕೊಪ್ಪಳ ನಗರಸಭೆ ಕಾಂಗ್ರೇಸ್ ಮಡಿಲಿಗೆ ನಿಶ್ಚಿತ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿ.ಪಂ.ಅಧ್ಯಕ್ಷ ಕೆ.ರಾಜಶೇಖರ ಹಿಟ್ನಾಳ, ಮಾಜಿ ಪ್ರಾಧಿಕಾರ ಅಧ್ಯಕ್ಷ ಜುಲ್ಲು ಖಾದ್ರಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಾಟನ್ ಪಾಷಾ, ಮುಖಂಡರುಗಳಾದ ದ್ಯಾಮಣ್ಣ ಚಿಲವಾಡಗಿ ನವೋದಯ ವೀರುಪಣ್ಣ, ಪ್ರಸನ್ನ ಗಡಾದ, ಶ್ರೀಮತಿ ಕಿಶೋರಿ ಬೂದನೂರು, ಅಮ್ಜದ್ ಪಟೇಲ್, ಕೃಷ್ಣ ಇಟ್ಟಂಗಿ, ಕೃಷ್ಣಾ ರೆಡ್ಡಿ ಗಲಬಿ, ಇಬ್ರಾಹಿಂ ಅಡ್ಡೇವಾಲೆ, ಅಪ್ಸರ್ ಸಾಬ್ ಅತ್ತಾರ, ಬಸಯ್ಯ ಹಿರೇಮಠ, ಇನ್ನೂ ಅನೇಕ ಕಾಂಗ್ರೇಸ್ ಮುಖಂಡರು ಹಾಗೂ ಕಾರ್ಯಕರ್ತರು ಮತ್ತು ವಕ್ತಾರ ಅಕ್ಬರಪಾಷಾ ಪಲ್ಟನ ಉಪಸ್ಥಿತರಿದ್ದರು