ಅಭಿನವ ಶ್ರೀಗಳಿಂದ ಕೊಪ್ಪಳ ಕನಸು ಪತ್ರಿಕೆ ಬಿಡುಗಡೆ.

ಕೊಪ್ಪಳ- 04- ಕೊಪ್ಪಳ ಕನಸು ಕನ್ನಡ ಮಾಸ ಪತ್ರಿಕೆಯ ಬಿಡುಗಡೆ ನಗರದ ಗವಿಮಠದಲ್ಲಿ ಶ್ರೀ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಬಿಡುಗಡೆಗೊಳಿಸಿದರು. ಪತ್ರಿಕೆ ಬಿಡುಗಡೆ ಬಳಿಕ ಮಾತನಾಡಿದ ಶ್ರೀಗಳು ಕೊಪ್ಪಳ ಕನಸು ಮಾಸ ಪತ್ರಿಕೆ ಸುಸಂಸ್ಕೃತವಾಗಿ ಹೊರಬರಲಿ, ಓದುಗರ ಮನದಲ್ಲಿ ಭಾವೈಕ್ಯತೆ ಮೂಡಿಸಲಿ ಜ್ಞಾನವನ್ನು ಹೆಚ್ಚಿಸುವ ಹಾಗೂ ವರ್ತಮಾನವನ್ನು ತಿಳಿಸಿಕೊಡುವ ಪತ್ರಿಕೆಗಳನ್ನು ವಿದ್ಯಾರ್ಥಿಗಳು ಓದಿದಾಗ ಜೀವನದ ಮೌಲ್ಯಗಳು ತಿಳಿಯುತ್ತವೆ ಎಂದು ಅಭಿನವ ಗವಿಶ್ರೀಗಳು ಸ್ವಾಮಿಜಿ ಹೇಳಿ ಪತ್ರಿಕೆ ಗೇ ಹಾರೈಸಿದರು. ಬಸವರಾಜ ಮರದೂರ ಅವರ ಸಂಪಾದಕತ್ವದಲ್ಲಿ ಕೊಪ್ಪಳ ಕನಸು ಮಾಸ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿ, ಓದುವ ಹವ್ಯಾಸ ಬೆಳೆಸಿಕೊಂಡಾಗ ಜ್ಞಾನದ ವೃದ್ದಿಗೆ ಸಹಕಾರಿಯಾಗುತ್ತದೆ ಓದುವುದರಿಂದ ಬರವಣಿಗೆಯ ಆಸಕ್ತಿ ಮೂಡುತ್ತದೆ ಆಗ ಓದುಗ ಒಬ್ಬ ಸಾಹಿತಿ, ಬರಹಗಾರನಾಗಲು ಸಾಧ್ಯ. ಇತ್ತೀಚೆಗೆ ಓದುಗರ ಕೊರತೆಯಿಂದಾಗಿ ಪತ್ರಿಕೆಗಳ ಪ್ರಸಾರ ಸಂಖ್ಯೆ ಕಡಿಮೆಯಾಗುತ್ತಿದೆ. ಪತ್ರಿಕೆಗಳು ಸಾಮಾನ್ಯ ಜ್ಞಾನ ನೀಡುವ ಹಾಗೂ ಸಮಾಜದ ಸುದ್ದಿಗಳನ್ನು ತಿಳಿಸುವ ಕೆಲಸವನ್ನು ಮಾಡಿದಾಗ ಓದುಗರಲ್ಲಿ ಅಭಿರುಚಿ ಮೂಡಿಸಿದಂತಾಗುತ್ತದೆ, ನಾನು ವಿದ್ಯಾರ್ಥಿ ಜೀವನದಲ್ಲಿ ಓದುವ ಹಾಗೂ ಬರವಣಿಗೆಯ ಹವ್ಯಾಸ ಬೆಳೆಸಿಕೊಂಡಿದ್ದೆ ಪದವಿ ಪಡೆದ ನಂತರ ಇವತ್ತು ನನ್ನದೆ ಸ್ವಂತ ಪತ್ರಿಕೆ ಪ್ರಕಟಿಸಿದೆ. ಓದುಗರಿಗೆ ಉತ್ತಮ ಸುದ್ದಿಗಳನ್ನು ಕೊಡಬಲ್ಲ ಪತ್ರಿಕೆಗಳು ಹೆಚ್ಚು ಜನಮಾನಸದಲ್ಲಿವೆ. ಆದರೆ ಧಾರ್ಮಿಕ ಸಂಘ ಸಂಸ್ಥೆಗಳು, ಮಠಗಳು ಹೊರಡಿಸುವ ಪತ್ರಿಕೆಯನ್ನು ಆಸಕ್ತಿಯುಳ್ಳವರು ಮಾತ್ರ ಓದುತ್ತಿದ್ದಾರೆ. ಯುವಕರು ಪತ್ರಿಕೆಯನ್ನು ಎಲ್ಲರೂ ಓದುವ ಹವ್ಯಾಸ ಬೆಳೆಸಿಕೊಂಡರೆ ಸಾತ್ವಿಕ ಸಮಾಜ ನಿರ್ಮಾಣವಾಗುತ್ತದೆ ಎಂದರು. ಈ ಸಂಧರ್ಭದಲ್ಲಿ ಪತ್ರಿಕೆ ಯ ಸಂಪಾದಕ ಬಸವರಾಜ ಮರದೂರ, ಸಹ ಸಂಪಾದಕ ವೀರೇಂದ್ರ ಗೌಡರು, ನಿದೇಶಕ ಬಿ. ಎನ್. ಹೊರಪೇಟಿ, ಗಾಯಕ ಮೈಬುಬ ಕಿಲ್ಲೆದಾರ, ಹನುಮಂತಪ್ಪ, ಗಜೇಂದ್ರ ಡಿ, ದಸ್ತಗಿರಿ, ರಾಘವೇಂದ್ರ ಗೋಧಿ ಉಪಸ್ಥಿತರಿದ್ದರು. ———

Please follow and like us:
error