ಮಗಳಿಗೆ ಮಗು ಕರುಣಿಸಿದ ದುಷ್ಟ, ಪಾಪಿ ತಂದೆ : ಪತಿ ವಿರುದ್ದ ಪ್ರಕರಣ ದಾಖಲಿಸಿದ ಪತ್ನಿ

ಅಪ್ಪನ ದಿನಾಚರಣೆಯ ದಿನವೊಂದು ಕೆಟ್ಟ ಸುದ್ದಿ

ಕೊಪ್ಪಳ : ೧೪ ವರ್ಷದ ಮಗಳ ಮೇಲೆಯೇ ಕಣ್ಣಾಕಿದ ಪಾಪಿ ತಂದೆ ಮಗಳನ್ನು ಗರ್ಭಿಣಿಯಾಗಿಸಿದ ಕೆಟ್ಟ ಘಟನೆ ಕೊಪ್ಪಳದಲ್ಲಿ ನಡೆದಿದೆ. ಕೊಪ್ಪಳ ಜಿಲ್ಲೆಯ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು   ಸತತ ಒಂದು ವರ್ಷಗಳಿಂದ ಹೆತ್ತ ಮಗಳ ಮೇಲೆ ಲೈಂಗಿಕ ದೌರ್ಜನ್ಯವೇಸಗಿ  ತಂದೆಯೇ ಮಗು ಕರುಣಿಸಿದ್ದಾನೆ.

ಕೊಪ್ಪಳ ತಾಲೂಕಿನ ಗ್ರಾಮವೊಂದರಲ್ಲಿ ಈ ಘಟನೆ ನಡೆದಿದ್ದು, 14 ವರ್ಷದ ಮಗಳನ್ನು ತನ್ನ ಜೊತೆಯಲ್ಲಿ ದನಗಳನ್ನು ಮೇಯಿಸಲು ಕರೆದುಕೊಂಡು ಹೋಗ್ತಾ ಇದ್ದ. ಇದೇ ವೇಳೆ ಸತತ ಒಂದು ವರ್ಷದಿಂದ ಮಗಳಿಗೆ ಬೆದರಿಕೆ ಹಾಕಿ ಲೈಂಗಿಕತೆಗೆ ಬಳಿಸಿಕೊಳ್ತಾ ಇದ್ದ. ಇದು ಮನೆಯಲ್ಲಇ ಯಾರಿಗೂ ಗೊತ್ತಾಗಿಲ್ಲ. ತಾಯಿ ದಿನ ನಿತ್ಯದ ಕೆಲಸಗಳಲ್ಲಿ ತೊಡಗಿಕೊಂಡರೆ ತಂದೆ ಮಗಳು ದನ ಮೇಯಿಸೋದಿಕ್ಕೆ ಹೋಗ್ತಾ ಇದ್ರು.  ಆದ್ರೆ ಕಳೆದ ಕೆಲವು ದಿನದ ಹಿಂದೆ‌ ಮಗಳು ತುಂಬಾ ಹೊಟ್ಟೆ ನೋವು ಅಂತಾ ತಾಯಿಯ ಬಳಿ ಹೇಳಿಕೊಂಡಿದ್ದಾಳೆ. ಇದ್ರಿಂದ ಕೊಪ್ಪಳ ಜಿಲ್ಲಾಸ್ಪತ್ರೆಗೆ ಬಂದಾಗ ಮಗಳು ಗರ್ಭಿಣಿ ಆದ ವಿಷಯ ಗೊತ್ತಾಗಿದ್ದು, 8 ತಿಂಗಳಲ್ಲಿಯೇ ಮಗಳು ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಇದ್ರಿಂದ ನೊಂದ ತಾಯಿ ನನಗೂ & ಹೆತ್ತ ಮಗಳಿಗೂ ಮೋಸ ಮಾಡಿ ನೀಚ ಕೃತ್ಯವೇಸಗಿದ ಪತಿ ಮೇಲೆ ಕ್ರಮ ತೆಗೆದುಕೊಳ್ಳಿ ಅಂತಾ ಕೊಪ್ಪಳ ಗ್ರಾಮೀಣ ಠಾಣೆಯಲ್ಲಿ ದೂರು ನೀಡಿದ್ದಾಳೆ.‌ಈ ಕುರಿತಂತೆ ಪೊಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ದುಷ್ಟ ತಂದೆಯನ್ನು ಬಂದಿಸಿ ಜೈಲಿಗಟ್ಟಿದ್ದಾರೆ.

Please follow and like us:
error