ಅನ್ಯ ರಾಜ್ಯ-ಜಿಲ್ಲೆಗಳಿಗೆ ಕಳುಹಿಸುವ ಕುರಿತು ಸಭೆ

ಕೊವೀಡ್-19 ಹಿನ್ನಲೆ ವಲಸೆ ಕಾರ್ಮಿಕರಿಗೆ ಅನ್ಯ ರಾಜ್ಯ-ಜಿಲ್ಲೆಗಳಿಗೆ ಕಳುಹಿಸುವ ಕುರಿತು ಸಭೆ
ಆನ್‌ಲೈನ್ ಅರ್ಜಿ ಸಲ್ಲಿಸುವುದರಿಂದ ಸಂಚಾರಿಸಲು ಅವಕಾಶ : ಡಿಸಿ
ಹೊರ ರಾಜ್ಯಗಳಿಗೆ ಕಳುಹಿಸಲು ಸರ್ಕಾರ ಆದೇಶನ್ವಯ ಅವಕಾಶ : ಪಿ.ಸುನೀಲ್ ಕುಮಾರ್


ಕೊಪ್ಪಳ, ಮೇ.02(ಕರ್ನಾಟಕ ವಾರ್ತೆ): ಕರ್ನಾಟಕ ಸರ್ಕಾರದ ಆದೇಶದಂತೆ ಕರ್ನಾಟಕ ರಾಜ್ಯದಿಂದ ಹೊರ ರಾಜ್ಯಗಳಿಗೆ ಮತ್ತು ಬೇರೆ ರಾಜ್ಯದಿಂದ ಕರ್ನಾಟಕ ರಾಜ್ಯಕ್ಕೆ ಸಂಚರಿಸಲು ವಲಸೆ ಕಾರ್ಮಿಕರು, ಯಾತ್ರಾರ್ಥಿಗಳು, ಪ್ರವಾಸಿಗರು, ವಿದ್ಯಾರ್ಥಿಗಳು ಹಾಗೂ ಇತರೆ ಜನರಿಗೆ ಸಂಚರಿಸಲು ಅವಕಾಶ ನೀಡಲಾಗಿದ್ದು, ಕೆಲವೊಂದು ನಿಬಂಧನೆಗಳನ್ನು ಹೇರಲಾಗಿದೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ಅವರು ತಿಳಿಸಿದ್ದಾರೆ. ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಇಂದು (ಮೇ.02ರಂದು) ಶನಿವಾರದಂದು ಕೊವೀಡ್-19ರ ವಲಸೆ ಕಾರ್ಮಿಕರನ್ನು ಅನ್ಯ ರಾಜ್ಯಗಳಿಗೆ ಅಥವಾ ಅನ್ಯ ಜಿಲ್ಲೆಗಳಿಗೆ ಕಳುಹಿಸುವ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

  • ಹೊರ ರಾಜ್ಯದಿಂದ ಕೊಪ್ಪಳ ಜಿಲ್ಲೆಗೆ ಬರುವವರಿಗೆ ಮಾರ್ಗಸೂಚಿಗಳು:
    ಅರ್ಜಿದಾರರು ತಮ್ಮ ಅರ್ಜಿಯನ್ನು ಅಂತರ್ಜಾಲ ಪುಟ https://sevasindhu.karnataka.gov.in ನಲ್ಲಿ ಸಲ್ಲಿಸಬೇಕಾಗಿರುತ್ತದೆ. ಸಂಚರಿಸಲು ಅನುಮತಿಯನ್ನು ರಾಜ್ಯ ಸರ್ಕಾರಗಳು ಆಯಾ ಜಿಲ್ಲಾಡಳಿತದ ಸಹಯೋಗದೊಂದಿಗೆ ನೀಡಲಾಗುವುದು. ಬೇರೆ ರಾಜ್ಯದಲ್ಲಿ ಸಿಲುಕಿಕೊಂಡಿರುವವರು, ಸದರಿ ಅಂತರ್ಜಾದಲ್ಲಿ ನೋಂದಾಯಿಸಲು ಮತ್ತು ಸ್ವಂತ ವಾಹನದಲ್ಲಿ ಪ್ರಯಾಣಿಸುವ ಪರವಾನಿಗೆ ಬಗ್ಗೆ ಆಯಾ ಜಿಲ್ಲಾಡಳಿತವನ್ನು ಸಂಪರ್ಕಿಸುವುದು. ಸೋಂಕುರಹಿತರು ಮಾತ್ರ ಪ್ರಯಾಣಿಸಲು ಅವಕಾಶವಿರುತ್ತದೆ. ಸಂಚಾರಕ್ಕಾಗಿ ಬಸ್ / ರೈಲು ವ್ಯವಸ್ಥೆಯನ್ನು ಕಲ್ಪಿಸಲಾಗುತ್ತದೆ. ಜಿಲ್ಲೆಗೆ ಹಿಂತಿರುಗುವ ಪ್ರಯಾಣಿಕರು ಪ್ರಯಾಣದ ವೆಚ್ಚವನ್ನು ಅವರೇ ಭರಿಸಬೇಕಾಗಿರುತ್ತದೆ ಮತ್ತು ಸ್ವಂತ ವಾಹನಗಳ ವ್ಯವಸ್ಥೆಯೊಂದಿಗೂ ಸಹ ಆಯಾ ಜಿಲ್ಲಾಡಳಿತಗಳ ಅನುಮತಿಯೊಂದಿಗೆ ಪ್ರಯಾಣಿಸಬಹುದು. ಜಿಲ್ಲೆಗೆ ಹಿಂತಿರುಗುವವರು ಗುರುತಿನ ಚೀಟಿಗಳಾದ ಚಾಲನಾ ಪರವಾನಿಗೆ, ಪಾಸ್ ಪೋರ್ಟ್, ಮತದಾರರ ಗುರುತಿನ ಚೀಟಿ, ಆಧಾರ ಮತ್ತು ಪಾನ್‌ಕಾರ್ಡ್ ಇವುಗಳ ಪೈಕಿ ಯಾವುದಾದರೊಂದನ್ನು ಜೊತೆಯಲ್ಲಿರಿಸಿಕೊಳ್ಳತಕ್ಕದ್ದು. ಕೊಪ್ಪಳ ಜಿಲ್ಲೆಗೆ ಸ್ವಂತ ವಾಹನಗಳಲ್ಲಿ ಮತ್ತು ಸರ್ಕಾರಿ ಬಸ್ ಮತ್ತು ರೈಲ್ವೇಗಳಲ್ಲಿ ಹಿಂತಿರುಗುವವರಿಗಾಗಿ ಕೊಪ್ಪಳ ಜಿಲ್ಲೆಯ ಎಲ್ಲಾ ಚೆಕ್‌ಪೋಸ್ಟ್ಗಳ ಮುಖಾಂತರ ಆಗಮಿಸುವ ಮಾರ್ಗಗಳಲ್ಲಿ ತಪಾಸಣೆ ನಡೆಸಿ, ನಂತರ ನೇರವಾಗಿ ಕೊಪ್ಪಳ ನಗರ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣವನ್ನು ಕೊಪ್ಪಳ ಜಿಲ್ಲಾ ಆಗಮನ ಕೇಂದ್ರ ( Entry Point ) ನಿಗದಿಪಡಿಸಲಾಗಿದ್ದು, ಈ ಮಾರ್ಗಗಳನ್ನು ಹೊರತುಪಡಿಸಿ ಬೇರೆ ಯಾವುದೇ ಬದಲಿ ಮಾರ್ಗಗಳಲ್ಲಿ ಬರುವುದನ್ನು ನಿರ್ಬಂಧಿಸಲಾಗಿದೆ. ಒಂದು ವೇಳೆ ಸದರಿ ಮಾರ್ಗಗಳನ್ನು ಬಿಟ್ಟು ಸ್ವಂತ ಊರುಗಳಿಗೆ ತೆರಳಿದ್ದಲ್ಲಿ, ಸಂಬAಧಪಟ್ಟ ಗ್ರಾಮ ಸಮಿತಿಗಳಿಗೆ ಮತ್ತು ವಾರ್ಡ ಸಮಿತಿಗಳಿಗೆ ತಿಳಿಸತಕ್ಕದ್ದು ಮತ್ತು ಸ್ವಯಂಪ್ರೇರಿತವಾಗಿ ತಪಾಸಣೆಗೊಳಪಡಿಸಿಕೊಂಡು 14 ದಿನ ಗೃಹ ಬಂಧನ ( Home Quarantine) ಇರಬೇಕಾಗುತ್ತದೆ. ಈ ಅಂಶಗಳನ್ನು ಉಲ್ಲಂಘಿಸಿದವರಿಗೆ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಕೈಗೊಳ್ಳಲಾಗುವುದು. ಜಿಲ್ಲೆಗೆ ಹಿಂತಿರುಗುವವರನ್ನು ಕೊಪ್ಪಳ ನಗರದ ಬಸ್ ನಿಲ್ದಾಣದಲ್ಲಿ ವೈದ್ಯಕೀಯ ತಪಾಸಣೆಗೊಳಪಡಿಸಲಾಗುವುದು. ಈ ಕಾರ್ಯದ ಮೇಲುಸ್ತುವಾರಿಯನ್ನು ಜಿಲ್ಲಾ ಆರೋಗ್ಯಾಧಿಕಾರಿಗಳು ಕೊಪ್ಪಳ ಇವರಿಗೆ ವಹಿಸಲಾಗಿದೆ. ಸ್ವಂತ ವಾಹನಗಳಲ್ಲಿ ಸಂಚರಿಸುವವರಿಗೆ ಚೆಕ್‌ಪೋಸ್ಟ್ನಲ್ಲಿ ದಾಖಲಾತಿಗಳ ವಿವರವಾದ ಪರಿಶೀಲನೆ, ವೈದ್ಯಕೀಯ ತಪಾಸಣೆ ಮತ್ತು ನೋಂದಣಿ ಕಾರ್ಯವನ್ನು ಕಡ್ಡಾಯವಾಗಿ ನಡೆಸಿ ಸಂಪರ್ಕ ತಡೆ ಮೊಹರನ್ನು ಹಾಕಲಾಗುವುದು. ಜಿಲ್ಲೆಗೆ ಆಗಮಿಸಿದವರನ್ನು ಕಡ್ಡಾಯವಾಗಿ ಸಂಪರ್ಕ ತಡೆಯಲ್ಲಿರಿಸುವ ಜವಾಬ್ದಾರಿ ಸಂಬAಧಪಟ್ಟ ಗ್ರಾಮ ಪಂಚಾಯತಿ/ ನಗರಸಭೆ/ ಪುರಸಭೆ/ ಪಟ್ಟಣ ಪಂಚಾಯತಿಗಳದ್ದಾಗಿರುತ್ತದೆ. ಕಾಲಕಾಲಕ್ಕೆ ಸರಿಯಾಗಿ ಆರೋಗ್ಯ ತಪಾಸಣೆಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ನಡೆಸುವುದು. ಈ ಬಗ್ಗೆ ಜಿಲ್ಲಾ ಆರೋಗ್ಯಾಧಿಕಾರಿಗಳು ಆರೋಗ್ಯ ತಪಾಸಣಾ ತಂಡವನ್ನು ನಿಯೋಜಿಸಲು ತಿಳಿಸಲಾಗಿದೆ. ಇದಕ್ಕಾಗಿ ಜಿಲ್ಲಾ ಕಾರ್ಮಿಕ ಅಧಿಕಾರಿ ಶ್ರೀಮತಿ ವೀಣಾ (ದೂ.ಸಂ. 9886620694) ಮತ್ತು ಜಿಲ್ಲಾ ಮಕ್ಕಳ ರಕ್ಷಣಾ ಯೋಜನಾ ಅಧಿಕಾರಿ ಶ್ರೀ ಬಸವರಾಜರವರನ್ನು (ದೂ.ಸಂ. 8884673492) ನೇಮಿಸಲಾಗಿದೆ. ಕೊಪ್ಪಳ ನಗರದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಆರೋಗ್ಯ ತಪಾಸಣೆಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ನಡೆಸುವುದು. ಈ ಬಗ್ಗೆ ಜಿಲ್ಲಾ ಆರೋಗ್ಯಾಧಿಕಾರಿಗಳು ಆರೋಗ್ಯ ತಪಾಸಣಾ ತಂಡವನ್ನು ನಿಯೋಜಿಸಲು ತಿಳಿಸಲಾಗಿದೆ. ಈ ಬಗ್ಗೆ ಜಿಲ್ಲಾ ಆರೋಗ್ಯಾಧಿಕಾರಿಗಳು ಮತ್ತು ಉಪವಿಭಾಗಾಧಿಕಾರಿಗಳನ್ನು ಘಟನಾ ನಿರ್ವಹಣಾಧಿಕಾರಿಗಳಾಗಿ ನೇಮಿಸಲಾಗಿದೆ. ಯಾವುದೇ ಹೆಚ್ಚಿನ ವಿವರಗಳಿಗಾಗಿ ಕಂಟ್ರೋಲ್ ರೂಮ್ ನಂ.08539-225001 ನ್ನು ಸಂಪರ್ಕಿಸಬಹುದಾಗಿದೆ.

ಕೊಪ್ಪಳ ಜಿಲ್ಲೆಯಿಂದ ಅನ್ಯ ರಾಜ್ಯಗಳಿಗೆ ತೆರಳುವವರಿಗೆ ಮಾರ್ಗಸೂಚಿಗಳು;
ಅರ್ಜಿದಾರರು ತಮ್ಮ ಅರ್ಜಿಯನ್ನು ಅಂತರ್ಜಾಲ ಪುಟ https://sevasindhu.karnataka.gov.in ನಲ್ಲಿ ಸಲ್ಲಿಸಬೇಕಾಗಿರುತ್ತದೆ. ಸಂಚರಿಸಲು ಅನುಮತಿಯನ್ನು ರಾಜ್ಯ ಸರ್ಕಾರಗಳು ಆಯಾ ಜಿಲ್ಲಾಡಳಿತದ ಸಹಯೋಗದೊಂದಿಗೆ ನೀಡಲಾಗುವುದು. ಜಿಲ್ಲೆಯ ವಿವಿಧ ತಾಲೂಕಗಳಲ್ಲಿ ಸಿಲುಕಿಕೊಂಡಿರುವ ಅನ್ಯ ರಾಜ್ಯದ ವಲಸೆ ಕಾರ್ಮಿಕರು, ಯಾತ್ರಾರ್ಥಿಗಳು, ಪ್ರವಾಸಿಗರು, ವಿದ್ಯಾರ್ಥಿಗಳು ಮತ್ತು ಇತರೆ ಜನರು ಸದರಿ ಅಂತರ್ಜಾದಲ್ಲಿ ಸ್ವತಃ ನೋಂದಾಯಿಸಬಹುದು ಅಥವಾ ಸಂಬAಧಿಸಿದ ತಾಲೂಕ ತಹಶಿಲ್ದಾರ ಕಛೇರಿಯಲ್ಲಿ ನೋಂದಾಯಿಸಲು ಮತ್ತು ಸ್ವಂತ ವಾಹನದಲ್ಲಿ ಪ್ರಯಾಣಿಸುವ ಪರವಾನಿಗೆ ಬಗ್ಗೆ ಪರವಾನಿಗೆಯನ್ನು ಪಡೆಯಬಹುದಾಗಿದೆ.

ಸೋಂಕುರಹಿತರು ಮಾತ್ರ ಪ್ರಯಾಣಿಸಲು ಅವಕಾಶವಿರುತ್ತದೆ. ಸ್ವಂತ ವಾಹನದಲ್ಲಿ ಪ್ರಯಾಣಿಸುವವರು ಕೊಪ್ಪಳ ತಾಲೂಕು ಕ್ರೀಡಾಂಗಣದಲ್ಲಿ ಇರುವ ನಿರ್ಗಮನ ಕೇಂದ್ರ (ಎಕ್ಸಿಟ್ ಕೇಂದ್ರ)ಲ್ಲಿನ ನಿಯೋಜಿತ ಜಿಲ್ಲಾ ಸರ್ಕಾರಿ ವೈದ್ಯಾಧಿಕಾರಿಗಳ ತಂಡದವರಿAದ ತಪಾಸಣೆ ಮಾಡಿಸಿಕೊಂಡು ಪರವಾನಿಗೆ ಪಡೆದು ನಂತರ ಸಂಚರಿಸುವುದು. ಸಂಚಾರಕ್ಕಾಗಿ ಬಸ್ / ರೈಲು ವ್ಯವಸ್ಥೆಯನ್ನು ಕಲ್ಪಿಸಲಾಗುತ್ತಿದ್ದು, ಪ್ರಯಾಣದ ದರವನ್ನು ಸ್ವತಃ ಭರಿಸಬೇಕಾಗಿರುತ್ತದೆ. ಅನ್ಯ ರಾಜ್ಯಗಳಿಗೆ ಹೋಗುವವರು ತಮ್ಮಲ್ಲಿರುವ ಗುರುತಿನ ಚೀಟಿಗಳಾದ ಚಾಲನಾ ಪರವಾನಿಗೆ, ಪಾಸ್ ಪೋರ್ಟ್, ಮತದಾರರ ಗುರುತಿನ ಚೀಟಿ, ಆಧಾರ ಮತ್ತು ಪಾನ್‌ಕಾರ್ಡ್ ಇವುಗಳ ಪೈಕಿ ಯಾವುದಾದರೊಂದನ್ನು ಜೊತೆಯಲ್ಲಿರಿಸಿಕೊಳ್ಳಬೇಕು ಎಂದರು.

ಕೊಪ್ಪಳ ಜಿಲ್ಲೆಯಿಂದ ಅನ್ಯ ರಾಜ್ಯಗಳಿಗೆ ಸ್ವಂತ ವಾಹನಗಳಲ್ಲಿ ಮತ್ತು ಸರ್ಕಾರಿ ಬಸ್ ಮತ್ತು ರೈಲ್ವೇಗಳಲ್ಲಿ ತೆರಳುವವರಿಗಾಗಿ ಕೊಪ್ಪಳ ತಾಲೂಕ ಕ್ರೀಡಾಂಗಣದಲ್ಲಿ ನಿರ್ಗಮನ ಕೇಂದ್ರದ ( Exit Point ) ಮೂಲಕ ಮಾತ್ರ ತೆರಳಲು ನಿಗದಿಪಡಿಸಲಾಗಿದ್ದು, ಈ ಮಾರ್ಗಗಳನ್ನು ಹೊರತುಪಡಿಸಿ ಬೇರೆ ಯಾವುದೇ ಬದಲಿ ಮಾರ್ಗಗಳಲ್ಲಿ ತೆರಳುವದನ್ನು ನಿರ್ಬಂಧಿಸಲಾಗಿದೆ. ಜಿಲ್ಲೆಯಿಂದ ಅನ್ಯ ರಾಜ್ಯಗಳಿಗೆ ತೆರಳುವವರನ್ನು ಕೊಪ್ಪಳ ನಗರದ ತಾಲೂಕ ಕ್ರೀಡಾಂಗಣದಲ್ಲಿ ವೈದ್ಯಕೀಯ ತಪಾಸಣೆಗೊಳಪಡಿಸಲಾಗುವುದು. ಈ ಕಾರ್ಯದ ಮೇಲುಸ್ತುವಾರಿಯನ್ನು ಜಿಲ್ಲಾ ಆರೋಗ್ಯಾಧಿಕಾರಿಗಳು ಕೊಪ್ಪಳ ಇವರಿಗೆ ವಹಿಸಲಾಗಿದೆ. ಕೊಪ್ಪಳ ಜಿಲ್ಲೆಯಿಂದ ಅನ್ಯ ರಾಜ್ಯಕ್ಕೆ ಹೋಗುವವರು ಆಯಾ ರಾಜ್ಯದ ಆಯಾ ಜಿಲ್ಲಾ ಕೇಂದ್ರದ ನಿಗದಿತ ಪ್ರವೇಶ ಕೇಂದ್ರ Entry Point) ವರದಿ ಮಾಡಿಕೊಳ್ಳಲು ತಿಳಿಸಲಾಗಿದೆ. ಕೊಪ್ಪಳ ತಾಲೂಕ ಕ್ರೀಡಾಂಗಣದಲ್ಲಿ ಆರೋಗ್ಯ ತಪಾಸಣೆಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ನಡೆಸುವುದು. ಈ ಬಗ್ಗೆ ಜಿಲ್ಲಾ ಆರೋಗ್ಯಾಧಿಕಾರಿಗಳು ಆರೋಗ್ಯ ತಪಾಸಣಾ ತಂಡವನ್ನು ನಿಯೋಜಿಸಲು ತಿಳಿಸಲಾಗಿದೆ. ಈ ಬಗ್ಗೆ ಜಿಲ್ಲಾ ಆರೋಗ್ಯಾಧಿಕಾರಿಗಳು ಮತ್ತು ಉಪವಿಭಾಗಾಧಿಕಾರಿಗಳನ್ನು ಘಟನಾ ನಿರ್ವಹಣಾಧಿಕಾರಿಗಳಾಗಿ ನೇಮಿಸಲಾಗಿದೆ. ಯಾರೇ ವ್ಯಕ್ತಿ ರಾಜ್ಯದೊಳಗಿನ ಇತರೆ ಜಿಲ್ಲೆಗಳಿಂದ (ಉದಾ : ಬೆಂಗಳೂರು, ಮೈಸೂರು, ಗದಗ, ಬಳ್ಳಾರಿ, ಬಾಗಲಕೋಟೆ) ಬರುವವರು ವiತ್ತು ಹೋಗುವವರು ಆನ್‌ಲೈನ್ ನೋಂದಣಿ ಮಾಡುವ ಅವಕಾಶವಿರುವುದಿಲ್ಲ. ಯಾವುದೇ ಹೆಚ್ಚಿನ ವಿವರಗಳಿಗಾಗಿ ಕಂಟ್ರೋಲ್ ರೂಮ್ ನಂ.08539-225001 ನ್ನು ಸಂಪರ್ಕಿಸಬಹುದಾಗಿದೆ ಎಂದು ಅವರು ಸಂಪೂರ್ಣ ಮಾಹಿತಿಯನ್ನು ನೀಡಿದರು.

ಹೊರರಾಜ್ಯದಿಂದ ಕೊಪ್ಪಳ ಜಿಲ್ಲೆಗೆ ಬರುವ ಮತ್ತು ಕೊಪ್ಪಳ ಜಿಲ್ಲೆಯಿಂದ ಅನ್ಯ ರಾಜ್ಯಗಳಿಗೆ ತೆರಳುವ ಬಗ್ಗೆ ಮೇಲ್ವಿಚಾರಣೆಗಾಗಿ ಕೊಪ್ಪಳ ಯುನಿಸೆಫ್‌ನ ಜಿಲ್ಲಾ ಸಮಾಲೋಚಕರಾದ ಹರೀಶ್ ಜೋಗಿ ಅವರ ಮೊ.ಸಂ 9035129484 ಗೆ ಸಂಪರ್ಕಿಸಬಹುದು ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಎಂ.ಪಿ. ಮಾರುತಿ, ಉಪ ವಿಭಾಗಾಧಿಕಾರಿ ಸಿ.ಡಿ.ಗೀತಾ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಲಿಂಗರಾಜು ಸೇರೆದಂತೆ ವಿವಿಧ ಇಲಾಖೆಗಳ ಅಧಿಕಾರಿಗಲು ಉಪಸ್ಥಿತರಿದ್ದರು.

Please follow and like us:
error