ಅನ್ಯಾಯದ ವಿರುದ್ಧದ ಹೋರಾಟ ಮಾತ್ರವೇ ವ್ಯಕ್ತಿತ್ವ ರೂಪಿಸಬಲ್ಲದು- ರಾಮಾಂಜನಪ್ಪ ಆಲ್ದಳ್ಳಿ

AIDYO AIDSO ಸಂಘಟನೆಗಳು AIMSS ಜಂಟಿಯಾಗಿ  ಕೊಪ್ಪಳದ ಶ್ರೀ ಮಳೆಮಲ್ಲೇಶ್ವರ ಬೆಟ್ಟದ ಯಾತ್ರಿ ನಿವಾಸದಲ್ಲಿ ವ್ಯಕ್ತಿತ್ವ ವಿಕಸನ ಶಿಬಿರವನ್ನು ಹಮ್ಮಿಕೊಂಡಿದ್ದವು.
ಈ ಶಿಬಿರವನ್ನು ಸಂಘಟನೆಯ ಅಖಿಲ ಭಾರತ ಸಮಿತಿಯ ಅಧ್ಯಕ್ಷರಾದ ರಾಮಾಂಜನಪ್ಪ ಆಲ್ದಳ್ಳಿ ಉದ್ಘಾಟಿಸಿ ಮಾತನಾಡುತ್ತಾ, ಇಂದು ವಿದ್ಯಾಥಿ ಯುವಜನರಲ್ಲಿ ರ್‍ಯಾಂಕ್ ಪಡೆಯುವುದೆ ಜೀವನದ ದೊಡ್ಡ ಆದರ್ಶ ಎಂಬುವಂತೆ ಮಾಡಲಾಗಿದೆ.ಆದರೆ ಮತ್ತೊದೆಡೆ ಮಾನವೀಯ ಮೌಲ್ಯಗಳು ಆದರ್ಶಗಳು ದಿನೇ ದಿನೇ ಕುಸಿಯುತ್ತಿವೆ. ಮಾಧ್ಯಮಗಳು ಎಲೆಕ್ಟ್ರಾನಿಕ್ ವಸ್ತುಗಳು ಯುವಜನರನ್ನು ಆವರಿಸಿಕಂಡಿವೆ. ಅಂತರ್ಜಾಲದಿಂದಾಗಲಿ ಅಥವಾ ಮಾಧ್ಯಮದಿಂದಾಗಲಿ ವಿಷಯಗಳನ್ನು ತಿಳಿದುಕೊಳ್ಳಬಹುದೆ ಹೊರತು ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲಾಗುವುದಿಲ್ಲ….
ಸಮಾಜದ ಬಗ್ಗೆ ಕಾಳಜಿ, ಅನ್ಯಾಯವನ್ನು ಪ್ರತಿಭಟಿಸುವ ಗುಣ, ಶೋಷಿತರನ್ನು ಪ್ರೀತಿಸುವ ಮನಸ್ಸು ಬೆಳೆಸಿಕೋಳ್ಳಬೇಕಾಗಿದೆ. ನಮ್ಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹಲವಾರು ಜನ ಯುವಕರು ಇಂತಹ ಗುಣಗಳ ಪ್ರತೀಕವಾಗಿದ್ದರು. ಆದ್ದರಿಂದಲೇ ಅವರ ಆದರ್ಶಗಳು ಇಂದು ಕೂಡ ಜೀವಂತವಾಗಿವೆ. ದುರಂತವೆಂದರೆ ಓದಿನಲ್ಲಿ ಉತ್ತಮ ರ್‍ಯಾಂಕ್ ಪಡೆದಿದ್ದರು ಕೂಡ ಜೀವನದಲ್ಲಿ ಎದುರಾಗುವ ಸಣ್ಣ ಸಮಸ್ಯೆಗಳನ್ನು ಎದುರಿಸುವಲ್ಲಿ ವಿಫಲರಾಗುತ್ತಿದ್ದಾರೆ. ಆತ್ನಹತ್ಯೆಯ ಸಂಖ್ಯೆ ಹೆಚ್ಚುತ್ತಿದೆ.
ನಮ್ಮ ಸಂಘಟನೆಗಳು ಕಳೆದ ಹಲವು ದಶಕಗಳಿಂದ ವಿದ್ಯಾರ್ಥಿ ಯುವಕರಲ್ಲಿ ಮಹಾನ್ ವ್ಯಕ್ತಿಗಳ ಆದರ್ಶಗಳನ್ನು ತುಂಬುತ್ತಾ ಅವರಲ್ಲಿ ಅನ್ಯಾದ ವಿರುದ್ಧ ಸಿಡಿದೇಳುವ ಗುಣವನ್ನು ಬೆಳೆಸುತ್ತಿವೆ.ಈ ರೀತಿ ಮಾಡಿದಾಗ ಮಾತ್ರವೇ ನಮ್ಮ ಜೀವನದಲ್ಲಿ ಎದುರಾಗುವ ಸಮಸ್ಯೆಗಳನ್ನು ಸರಿಯಾಗಿ ಎದುರಿಸಲು ಸಹಕಾರಿಯಾಗುತ್ತದೆ ಎಂದರು..
ಮತ್ತೊಬ್ಬ ಅತಿಥಿಯಾಗಿ ಬಂದಿದ್ದAIDYOಸಂಘಟನೆಯ ರಾಜ್ಯಾಧ್ಯಕ್ಷರಾದ ಎಂ.ಉಮಾದೇವಿಯವರು ಮಾತನಾಡುತ್ತ, ಹೆಣ್ಣುಮಕ್ಕಳನ್ನು ಭೋಗದ ವಸ್ತು, ಎರಡನೇ ದರ್ಜೆಯ ವ್ಯಕ್ತಿಯನ್ನಾಗಿ ಕಾಣಲಾಗುತ್ತಿದೆ. ಈ ಪರಿಸ್ಥಿತಿಯ ವಿರುದ್ಧ ನಾವೆಲ್ಲರೂ ಒಗ್ಗಟ್ಟಾಗಿ ಹೋರಾಡುವ ಅವಶ್ಯಕತೆ ಇದೆ. ಮಹಿಳೆಯನ್ನು ಗೌರವಿಸದಿದ್ದರೆ ಉತ್ತಮ ವ್ಯಕ್ತಿತ್ವ ಹೊಂದಲು ಸಾಧ್ಯವಿಲ್ಲ ಎಂದರು.
ಬ್ರೇಕ್ ಥ್ರೂ ಸೈನ್ಸ್ ಸೊಸೈಟಿ ಸದಸ್ಯರಾದ ಧಾರವಾಡದಿಂದ ಬಂದಂತಹ ದೀಪಾರವರು ಪವಾಡ ರಹಸ್ಯ ಬಯಲು ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಹೊಸಪೇಟೆಯ ಕಲಾವಿದರಾದ ಸಂತೋಷ ಬಡಿಗೇರರವರು ಚಿತ್ರಕಲೆಯ ಮಹತ್ವದ ಕುರಿತು ವಿದ್ಯಾರ್ಥಿಗಳಿಗೆ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎ.ಐ.ಡಿ.ವೈ.ಒ ಕೊಪ್ಪಳ ಜಿಲ್ಲಾ ಕಾರ್ಯದರ್ಶಿ ಶರಣು ಗಡ್ಡಿ ವಹಿಸಿದ್ದರು. ಎ.ಐ.ಡಿ.ಎಸ್.ಒ ಸಂಘಟನೆಯ ರಮೇಶ ವಂಕಲಕುಂಟಿ ಹಾಗೂ ಎ.ಐ.ಎಂ.ಎಸ್.ಎಸ್.ನ ಮಂಜುಳಾ ಮುಂತಾದವರು ಉಪಸ್ಥಿತರಿದ್ದರು.
ಈ ಕಾರ್ಯಕ್ರಮದಲ್ಲಿ ಕೊಪ್ಪಳದ ಎಲ್ಲಾ ಕಾಲೇಜಿನಿಂದ ೧೨೦ಕ್ಕೂ ಹೆಚ್ಚು ವಿದ್ಯಾರ್ಥಿ-ವಿದ್ಯಾರ್ಥಿನಿಯರು, ಯುವಕರು ಸ್ವ-ಇಚ್ಛೆಯಿಂದ ಭಾಗವಹಿಸಿದ್ದರು.
ಈ ಕಾರ್ಯಕ್ರಮಕ್ಕೆ ಹಲವಾರು ನಾಗರೀಕರು ಬೆಂಬಲಿಸಿದ್ದಾರೆ.

Please follow and like us:
error