ಅನಿಶ್ಚಿತ ಮಳೆಯೇ ಬಡತನಕ್ಕೆ ಮೂಲ ಕಾರಣ – ಎಂ.ಎಸ್.ಬಾಚಲಾಪೂರ

koppal-rain-effect
ಕೊಪ್ಪಳ: ಭಾರತದಲ್ಲಿ ಮಳೆಯು ಮಾನ್ಸೂನ್‌ನೊಡನೆ ಆಡುವ ಜೂಜಾಟದಂತಿದೆ. ಮಳೆಯು ಅನಿಶ್ಚಿತ, ಅನಿಯಮಿತವಾಗಿರುವುದರಿಂದ ರೈತರು ಆರ್ಥಿಕವಾಗಿ ತೊಂದರೆ ಅನುಭವಿಸುವಂತಾಗಿದೆ. ಕೃಷಿಯು ಭಾರತದ ಆರ್ಥಿಕತೆಯ ಬೆನ್ನಲುಬಾಗಿದೆ. ಬಹುತೇಕ ಜನರು ಕೃಷಿಯನ್ನೆ ತಮ್ಮ ಮೂಲ ವೃತ್ತಿಯಾಗಿಸಿಕೊಂಡಿರುವುದರಿಂದ ಈ ಕೃಷಿಯ ಉತ್ಪಾದನೆಯಲ್ಲಿ ಹಿನ್ನೆಡೆಯಾಗಿರುವುದರಿಂದ ಭಾರತದ ಜನರು ಬಡತನದ ಸುಳಿಯಲ್ಲಿ ಸಿಕ್ಕಿ ಹಾಕಿಕೊಂಡು ಅದರಿಂದ ಹೊರಬರಲಾಗದೇ ಬಡತನದ ವಿಷವೃತ್ತದಲ್ಲಿ ಸಿಲುಕಿ ನರಳಾಡುತ್ತಿದ್ದಾರೆ ಎಂದು ಕೊಪ್ಪಳ ಗವಿಸಿದ್ಧೇಶ್ವರ ಪದವಿ ಮಹಾವಿದ್ಯಾಲಯದ ನಿವೃತ್ತ ಅರ್ಥಶಾಸ್ತ್ರ ಉಪನ್ಯಾಸಕರಾದ ಎಂ.ಎಸ್.ಬಾಚಲಾಪೂರ ಹೇಳಿದರು.
ಅವರು ಶುಕ್ರವಾರ ಬೆಳಿಗ್ಗೆ ಕೊಪ್ಪಳದ ಬಾಲಕಿಯರ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ೨೦೧೭-೧೮ ನೇ ಸಾಲಿನ ಜಿಲ್ಲಾಮಟ್ಟದ ಅರ್ಥಶಾಸ್ತ್ರ ವಿಷಯಾಧಾರಿತ ತರಬೇತಿ ಕಾರ್ಯಕ್ರಮದಲ್ಲಿ ’ಭಾರತದ ಬಡತನ’ ಎಂಬ ವಿಷಯ ಕುರಿತು ಮಾತನಾಡಿದರು.
ಅವರು ಮುಂದುವರೆದು ಮಾತನಾಡುತ್ತಾ, ಭಾರತೀಯರು ದೇಶಾಭಿಮಾನ, ಸಾಹಸ ಪ್ರವೃತ್ತಿಗಳನ್ನು ಬೆಳೆಸಿಕೊಳ್ಳಬೇಕು. ನಮ್ಮನ್ನು ಆಳುವ ಸರ್ಕಾರ ಹೆಚ್ಚೆಚ್ಚು ಉದ್ಯೋಗಗಳನ್ನು ಸೃಷ್ಟಿ ಮಾಡಿ ನಿರುದ್ಯೋಗವನ್ನು ನಿವಾರಿಸುವುದರತ್ತ ಗಮನಹರಿಸಬೇಕು.
ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಟಿ.ಎಂ.ರಾಜಾಸಾಬ ಅಧ್ಯಕ್ಷತೆವಹಿಸಿದ್ದರು.
ಅರ್ಥಶಾಸ್ತ್ರ ಉಪನ್ಯಾಸಕರ ವೇದಿಕೆಯ ಜಿಲ್ಲಾಧ್ಯಕ್ಷರಾದ ವೆಂಕೋಬ ಬಾವಿತಾಳ, ಕಾರ್ಯಾಗಾರದ ಸಂಯೋಜಕರಾದ ಎಸ್.ಎಸ್.ಗೋಡಿ, ಕೊಪ್ಪಳದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಮಹಾವಿದ್ಯಾಲಯದ ಅರ್ಥಶಾಸ್ತ್ರ ಉಪನ್ಯಾಸಕರಾದ ಶರಶ್ಚಂದ್ರ ಕಿಣಗಿ, ಅಳವಂಡಿಯ ಸಿದ್ದೇಶ್ವರ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಲಯದ ಅರ್ಥಶಾಸ್ತ್ರ ಉಪನ್ಯಾಸಕರಾದ ಬಸವನಗೌಡ ತೊಂಡಿಹಾಳ, ಗಂಗಾವತಿ ಬಾಲಕರ ಪದವಿ ಪೂರ್ವ ಮಹಾವಿದ್ಯಾಲಯದ ಅರ್ಥಶಾಸ್ತ್ರ ಉಪನ್ಯಾಸಕರಾದ ಅನೀಲಕುಮಾರ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಚೇರಿಯ ಸಿಬ್ಬಂದಿಗಳಾದ ರಾಘವೇಂದ್ರ ಕಾಲವಾಡ, ರುದ್ರೇಶ ಇಟಗಿ, ಮಾರುತಿ ಬಿಲ್ಲರ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Leave a Reply