ಅನಿಲಭಾಗ್ಯ ಯೋಜನೆ : ಫಲಾನುಭವಿಗಳು ಗ್ಯಾಸ್ ಸ್ಟೌವ್ ಹಾಗೂ ಸಿಲೆಂಡರ್ ಸಂಪರ್ಕ ಪಡೆಯಿರಿ

ಕೊಪ್ಪಳ ಅ.  : ಮುಖ್ಯಮಂತ್ರಿಗಳ ಅನಿಲಭಾಗ್ಯ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಿ ಆಯ್ಕೆಯಾದಂಹ ಫಲಾನುಭವಿಗಳು ಅಗತ್ಯ ದಾಖಲೆಯೊಂದಿಗೆ ಗ್ಯಾಸ್ ಏಜೆನ್ಸಿಯವರಿಗೆ ಹಾಜರುಪಡಿಸಿ ಗ್ಯಾಸ್ ಸ್ಟೌವ್ ಹಾಗೂ ಸಿಲೆಂಡರ್ ಸಂಪರ್ಕವನ್ನು ಪಡೆದುಕೊಳ್ಳಿ ಎಂದು ಕೊಪ್ಪಳ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಉಪನಿರ್ದೇಶಕರು ತಿಳಿಸಿದ್ದಾರೆ.
ಮುಖ್ಯಮಂತ್ರಿಗಳ ಅನಿಲಭಾಗ್ಯ ಯೋಜನೆ ಅಡಿಯಲ್ಲಿ ಯೋಜನೆಯ ಸದುಪಯೋಗ ಪಡೆದುಕೊಳ್ಳಲು ಅರ್ಹ ಫಲಾನುಭವಿಗಳು ಈಗಾಗಲೇ ತಮ್ಮ ವ್ಯಾಪ್ತಿಯಲ್ಲಿ ಬರುವ ಗ್ರಾಮ ಪಂಚಾಯಿತಿಗಳಲ್ಲಿ ಅರ್ಜಿ ಸಲ್ಲಿಸಿ ಆಯ್ಕೆಯಾದಂಹ ಫಲಾನುಭವಿಗಳು ಪಡೆದಿರುವ ಅಕ್ನಾಲೆಡ್ಜ್‌ಮೆಂಟ್, ರಸೀದಿ, ಪಡಿತರಚೀಟಿ, ಇ-ಕೆವೈಸಿ, ಗ್ಯಾಸ್ ಸ್ಟೌವ್ ರಸೀದಿ, ಗ್ಯಾಸ್ ಇನ್ಸಟಾಲೇಷನ್ ರಸೀದಿ, ಈ ದಾಖಲೆಗಳೊಂದಿಗೆ ಸಂಬಧಿಸಿದ ಗ್ಯಾಸ್ ಏಜೆನ್ಸಿಯವರಿಗೆ ಹಾಜರುಪಡಿಸಿ ನಿಯಮಾನುಸಾರ ಗ್ಯಾಸ್ ಸ್ಟೌವ್ ಹಾಗೂ ಸಿಲೆಂಡರ್ ಸಂಪರ್ಕವನ್ನು ಪಡೆದುಕೊಳ್ಳುವಂತೆ  ತಿಳಿಸಿದೆ.

Please follow and like us:
error