ಅನಿಲಭಾಗ್ಯ ಯೋಜನೆ : ಥಂಬ್ ಇಂಪ್ಟೆಷನ್ ನೀಡಿ, ಸಂಪರ್ಕ ಪಡೆಯಿರಿ

ಕೊಪ್ಪಳ ಅ. : : ಮುಖ್ಯಮಂತ್ರಿಗಳ ಅನಿಲಭಾಗ್ಯ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಿ ಆಯ್ಕೆಯಾದಂಹ ಫಲಾನುಭವಿಗಳು ಥಂಬ್ ಇಂಪ್ಟೆಷನ್ ನೀಡಿ ಗ್ಯಾಸ್ ಸ್ಟೌವ್ ಹಾಗೂ ಸಿಲೆಂಡರ್ ಸಂಪರ್ಕವನ್ನು ಪಡೆದುಕೊಳ್ಳಿ ಎಂದು ಕೊಪ್ಪಳ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಉಪನಿರ್ದೇಶಕರು ತಿಳಿಸಿದ್ದಾರೆ.
ಮುಖ್ಯಮಂತ್ರಿಗಳ ಅನಿಲಭಾಗ್ಯ ಯೋಜನೆ ಅಡಿಯಲ್ಲಿ ಯೋಜನೆಯ ಸದುಪಯೋಗ ಪಡೆದುಕೊಳ್ಳಲು ಅರ್ಹ ಫಲಾನುಭವಿಗಳು ಈಗಾಗಲೇ ತಮ್ಮ ವ್ಯಾಪ್ತಿಯಲ್ಲಿ ಬರುವ ಗ್ರಾಮ ಪಂಚಾಯಿತಿಗಳಲ್ಲಿ ಅರ್ಜಿ ಸಲ್ಲಿಸಿ ಆಯ್ಕೆಯಾದಂಹ ಫಲಾನುಭವಿಗಳು ಆಯ್ಕೆ ಮಾಡಿಕೊಂಡ ಗ್ಯಾಸ್ ಏಜೆನ್ಸಿಯವರಲ್ಲಿ ಅಗತ್ಯ ರಸೀದಿ ದಾಖಲೆಗಳನ್ನು ಪೂರೈಸಿ ಗ್ಯಾಸ್ ಸಿಲೆಂಡರ್ ಪಡೆದು ನಂತರ ಗ್ಯಾಸ್ ಸ್ಟೌವ್ ರಸೀದಿಯೊಂದಿಗೆ ಸಂಬಂಧಿಸಿದ ಆಯಾ ತಾಲೂಕಿನ ಗೋದಾಮು ವ್ಯವಸ್ಥಾಪಕರನ್ನು ಭೇಟಿಯಾಗಿ ಬಯೋಮೆಟ್ರಿಕ್ ಮೂಲಕ ಥಂಬ್ ಇಂಪ್ಟೆಷನ್ ನೀಡಿ ನಿಯಮಾನುಸಾರ ಗ್ಯಾಸ್ ಸ್ಟೌವ್‌ಗಳನ್ನು ಪಡೆದುಕೊಳ್ಳಿ. ಗಂಗಾವತಿ ಮತ್ತು ಯಲಬುರ್ಗಾ ತಾಲೂಕಿನ ಗೋದಾಯು ವ್ಯವಸ್ಥಾಪಕರು ಬಸವರಾಜ ಮುರಬಗಿ ಮೊ.ಸಂ. ೯೪೪೮೪೪೦೨೭೪, ಕೊಪ್ಪಳ ಮತ್ತು ಕುಷ್ಟಗಿ ತಾಲೂಕಿನ ಗೋದಾಯು ವ್ಯವಸ್ಥಾಪಕರು ಕಾಂತೇಶ ಮೊ.ಸಂ. ೯೪೪೮೫೪೧೧೯೫, ಇವರನ್ನು ಸಂಪರ್ಕಿಸಬಹುದು.
ಹೆಚ್ಚಿನ ಮಾಹಿತಿಗಾಗಿ ಜಿಲ್ಲೆಯ ಆಯಾ ತಾಲೂಕಿನ ಆಹಾರ ಶಿರಸ್ತೇದಾರರು ಹಾಗೂ ಆಹಾರ ನಿರೀಕ್ಷಕರನ್ನು ಸಂಪರ್ಕಿಸಬಹುದು .

Please follow and like us:
error