ಅನಾರೋಗ್ಯದಿಂದ ಶಾಲೆಗೆ ಬಾರದ ವಿದ್ಯಾರ್ಥಿಯ ಕೈ ಮುರಿದ ಶಿಕ್ಷಕ

Gangavati News

ದೈಹಿಕ ಶಿಕ್ಷಕನೊರ್ವ ಅನಾರೋಗ್ಯದಿಂದ ಶಾಲೆ ಬಿಟ್ಟಿದ್ದ ವಿದ್ಯಾರ್ಥಿಯ ಕೈ ಮುರಿದಿದ್ದಾನೆ . ಕೊಪ್ಪಳದ ಗಂಗಾವತಿಯ ಜಂಬಣ್ಣ ವಿದ್ಯಾ ಕೇಂದ್ರದಲ್ಲಿ ಈ ಘಟನೆ ನಡೆದಿದ್ದು೮ ನೇ ತರಗತಿ ಓದುತ್ತಿರುವ ಸಲೀಂ ಕೈ ಮುರಿದುಕೊಂಡ ವಿದ್ಯಾರ್ಥಿ. ದೈಹಿಕ ಶಿಕ್ಷಕ ವೆಂಕಟೇಶ್ ವಿದ್ಯಾರ್ಥಿಯ ಕೈ ಮುರಿಯುವಂತೆ ಥಳಿಸಿದ್ದಾನೆ. ಕೈ ಯ ಮೂಳೆ ಬಿರುಕುಬಿಟ್ಟಿದ್ದು ಆಕ್ರೋಶಘೊಂಡ ಪಾಲಕರು ಶಿಕ್ಷಕನ ವಿರುದ್ದ ಮೊಕದ್ದಮೆ ದಾಖಲಿಸಲು ಪೋಲಿಸ್ ಠಾಣೆ ಮೆಟ್ಟಿಲೆರಿದ್ದಾರೆ.

ಗಂಗಾವತಿಯಲ್ಲಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿದ್ಯಾರ್ಥಿಯ ಮೇಲೆ ಹಲ್ಲೆ:ಶಿಕ್ಷಕನ ವಜಾಗೊಳಿಸುವಂತೆ ಕ್ಯಾಂಪಸ್ ಫ್ರಂಟ್ ಒತ್ತಾಯ

ಗಂಗಾವತಿ: ನಗರದ ಎ.ಜಂಬಣ್ಣ ಕನ್ನಡ ಹಿರಿಯ ಪ್ರಾಥಮಿಕ ಗಂಗಾವತಿ ಶಾಲೆಯ ಶಿಕ್ಷಕ ವೆಂಕಟೇಶ್ ಕ್ಷುಲ್ಲಕ ವಿಚಾರಕ್ಕೆ ಸಂಬಂಧಿಸಿ ವಿದ್ಯಾರ್ಥಿಯನ್ನು ಕೈ ಮೂಳೆ ಮುರಿಯುವ ಹಾಗೆ ಥಳಿಸಿದ ಘಟನೆಯೂ ಕ್ಯಾಂಪಸ್ ಫ್ರಂಟ್ ಗಂಗಾವತಿ ತಾಲೂಕು ಸಮಿತಿಯೂ ತೀವ್ರವಾಗಿ ಖಂಡಿಸುತ್ತದೆ.ಸಲೀಂ ಎಂಬ ಎಂಟನೇ ತರಗತಿಯ ವಿದ್ಯಾರ್ಥಿಯು ಅನಾರೋಗ್ಯದ ಕಾರಣದಿಂದ ಶನಿವಾರ ಶಾಲೆಗೆ ಹಾಜರಾಗದಿರುವುದನ್ನು ಪ್ರಶ್ನಿಸಿ ಸೋಮವಾರ ಶಿಕ್ಷಕರು ವಿದ್ಯಾರ್ಥಿಯ ಮೇಲೆ ದೈಹಿಕ ಹಲ್ಲೆ ಮಾಡಿರುತ್ತಾರೆ.ಈ ವಿಚಾರವನ್ನು ಪ್ರಶ್ನಿಸಲು ಪೋಷಕರು ಮತ್ತು ಕ್ಯಾಂಪಸ್ ಫ್ರಂಟ್ ಪದಾಧಿಕಾರಿಗಳು ಶಾಲೆಗೆ ಹೋದಾಗ ವಿದ್ಯಾರ್ಥಿಯನ್ನು ಥಳಿಸಿದ ಶಿಕ್ಷಕರು ಶಾಲೆಗೆ ಬಾರದೆ ಕಾಣೆಯಾಗಿರುತ್ತಾರೆ.ವಿದ್ಯಾರ್ಥಿಯ ಮೇಲೆ ದೌರ್ಜನ್ಯವನ್ನೆಸಗಿದ ಶಿಕ್ಷಕರನ್ನು ಶೇಘ್ರವಾಗಿ ವಜಾಗೂಳಿಸಬೇಕೆಂದು ಕ್ಯಾಂಪಸ್ ಫ್ರಂಟ್ ಮತ್ತು ಪೋಷಕರು ಪಟ್ಟು ಹಿಡಿದರು ಶಾಲ ಮಂಡಳಿಯೂ ತಕ್ಷಣ ಶಿಕ್ಷಕರನ್ನು ವಜಾಗೂಳಿಸುತ್ತೇವೆಂದು ಭರವಸೆ ನೀಡಿದೆ.

ಈ ಸಂದರ್ಭದಲ್ಲಿ ಕ್ಯಾಂಪಸ್ ಫ್ರಂಟ್ ಕೊಪ್ಪಳ ಜಿಲ್ಲಾಧ್ಯಕ್ಷ ರಾದ ಸೈಯದ್ ಸರ್ಫರಾಜ್,ಜಿಲ್ಲಾ ಸಮಿತಿ ಸದಸ್ಯರಾದ ಹುಸೈನ್ ಭಾಷಾ ಮತ್ತು ಪೋಷಕರು ಹಾಜರಿದ್ದರು