ಅನಾಮಧೇಯ ವ್ಯಕ್ತಿ ಸಾವು : ಪತ್ತೆಗೆ ಸಹಕರಿಸಲು ಮನವಿ

ಕೊಪ್ಪಳ ಅ. : ಕೊಪ್ಪಳ ಜಿಲ್ಲಾ ಆಸ್ಪತ್ರೆಯಲ್ಲಿ ಸುಮಾರು 40 ವರ್ಷದ ಅನಾಮಧೇಯ ಮೃತಪಟ್ಟಿದ್ದು, ಅಪರಿಚಿತ ಮೃತ ವ್ಯಕ್ತಿಯ ಪತ್ತೆಗೆ ಸಹಕರಿಸಲು ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆಯ ಅಧಿಕಾರಿ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಅ. 04 ರಂದು ಬೆಳಿಗ್ಗೆ 10 ಗಂಟೆ ಸುಮಾರಿಗೆ ಕೊಪ್ಪಳ ತಾಲೂಕಿನ ಹಲಗೇರಿ ಗ್ರಾಮದ ವೇ-ಬ್ರೀಡ್ಜ್ ಹತ್ತಿರದಿಂದ ಬರುತ್ತಿರುವಾಗ ಸುಮಾರು 40 ವರ್ಷ ವಯಸ್ಸಿನ ಗಂಡಸು ಈ ಅಪರಿಚಿತ ವ್ಯಕ್ತಿಯು ಬಿಕ್ಷೇ ಬೇಡುವಂತೆ ಕಾಣುತ್ತಿದ್ದು, ಆತನು ಯಾವುದೋ ರೋಗದಿಂದ ಬಳಲಿ ಬಿಸಿಲಿನ ಜಳಕ್ಕೆ ಕೇಳಗೆ ಬಿದ್ದಿದ್ದು, ಇತನನ್ನು ನೋಡಿ ನಾನು ಮತ್ತು ನಮ್ಮೂರ ಹನುಮಂತಪ್ಪ ಅವರಿಗೆ ಕೊಪ್ಪಳಕ್ಕೆ ಬರುತ್ತಿದ್ದ ಒಂದು ಆಟೋದಲ್ಲಿ ಹಾಕಿಕೊಂಡು ಚಿಕಿತ್ಸೆ ಕುರಿತು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲಿಸಿದ್ದು, ನಂತರ ಅ. 22 ರಂದು ಬೆಳಿಗ್ಗೆ 7 ಗಂಟೆಯ ಸುಮಾರಿಗೆ ಈ ಅಪರಿಚಿತ ವ್ಯಕ್ತಿಯು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ ಎಂದು ಹಲಗೇರಿ ಗ್ರಾಮದ ಸುಭಾಷ ಅಬ್ಬಿಗೇರಿ ಅವರು ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಠಾಣೆಗೆ ದೂರು ನೀಡಿದ್ದಾರೆ. ಈ ಮೃತ ವ್ಯಕ್ತಿಯ ಬಗ್ಗೆ ಯಾರಿಗಾದರೂ ಮಾಹಿತಿ ಇದ್ದಲ್ಲಿ ಕೊಪ್ಪಳ ಪೊಲೀಸ್ ಕಂಟ್ರೋಲ್ ರೂಂ: 08539-230100 ಮತ್ತು 230222, ಪಿ.ಎಸ್.ಐ ಗ್ರಾಮೀಣ ಪೊಲೀಸ ಠಾಣೆ ಕೊಪ್ಪಳ ಮೊ.ಸಂ. 9480803746, ದೂ.ಸಂ. 08539-221333 ಇಲ್ಲಿಗೆ ಮಾಹಿತಿ ನೀಡುವಂತೆ ಪ್ರಕಟಣೆ ತಿಳಿಸಿದೆ.

Please follow and like us:
error