ಅಧಿಕಾರಿಗಳೆ ಗಮನಹರಿಸಿ, ಗಂಗಾವತಿ ಯಿಂದ ಕಂಪ್ಲಿ ಮಾರ್ಗವಾಗಿ ಬಳ್ಳಾರಿ ಗೆ ಹೊರಡುವಾಗ ವಿದ್ಯಾರ್ಥಿಗಳು ಬಸ್‌ಗಾಗಿ ನಿತ್ಯ ಪರದಾಟ.

​Kannadanet.com

ವಿದ್ಯಾರ್ಥಿಗಳು ಬಸ್‌ಗೆ ಜೋತು ಬಿದ್ದು ಪ್ರಯಾಣಿಸುತ್ತಿರುವುದು ಸುತ್ತಲಿನ ಹತ್ತಾರು ಗ್ರಾಮಗಳ ವಿದ್ಯಾರ್ಥಿಗಳು ಶಾಲಾ ಕಾಲೇಜಿಗೆ ಓದಲು ಬರುತ್ತಾರೆ. ಆದರೆ, ಹೋಗಿ–ಬರಲು ಬಸ್ ಸೌಲಭ್ಯವಿಲ್ಲದೆ ಖಾಸಗಿ ಜೀಪ್, ಆಟೊ ಬಳಕೆ ಅನಿವಾರ್ಯವಾಗಿದೆ. ಈ ಖಾಸಗಿ ವಾಹನಗಳು ಬೇಕಾಬಿಟ್ಟೆಯಾಗಿ ಪ್ರಯಾಣಿಕರನ್ನು ತುಂಬಿಸಿಕೊಳ್ಳುತ್ತಾರೆ. ಅಂತಹ ನೂಕುನುಗ್ಗಲಿನಲ್ಲಿ ವಿದ್ಯಾರ್ಥಿಗಳು ಟಾಪ್ ಹತ್ತಿ ಪ್ರಯಾಣಿಸಬೇಕಾಗಿದೆ. ಈ ಕುರಿತು ಸಂಬಂಧಿತರಿಗೆ ನಿತ್ಯ ಕಣ್ಣಿಗೆ ಕಾಣುತ್ತಿದ್ದರೂ ಯಾರೂ ಚಕಾರ ಎತ್ತುತ್ತಿಲ್ಲ. ಬಸ್ ಇಲ್ಲದ ಕಾರಣ ಕೆಲ ಪಾಲಕರು ಹೆಣ್ಣು ಮಕ್ಕಳಿಗೆ ಶಾಲೆಗೆ ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ. ದೂರದಿಂದ ವಿದ್ಯಾರ್ಥಿಗಳು ಓದಲು ಬರುತ್ತಾರೆ. ಆದರೆ, ಈ ವಿದ್ಯಾರ್ಥಿಗಳಿಗೆ ಸೂಕ್ತ ಸಾರಿಗೆ ಸೌಲಭ್ಯ ಇಲ್ಲದೆ ಪಾಲಕರು ಆತಂಕದಲ್ಲಿದ್ದಾರೆ. ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಅಗತ್ಯವಿರುವ ಕಡೆಗಳಲ್ಲಿ ಬಸ್ ಸೌಲಭ್ಯ ಕಲ್ಪಿಸುವಂತೆ ಸಾರಿಗೆ ಸಂಸ್ಥೆ ಅಧಿಕಾರಿಗಳಲ್ಲಿ ಸಾಕಷ್ಟು ಸಲ ಮನವಿ ಮಾಡಿಕೊಂಡರೂ ಪ್ರಯೋಜನವಾಗಿಲ್ಲ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Leave a Reply