ಅಜ್ಜನ ಜಾತ್ರೆಯ ಅನ್ನಪೂರ್ಣಶ್ವರಿ ದೇವಿಗೆ ಉಡಿ ತುಂಬುವ ಕಾರ್ಯಕ್ರಮ


ಕೊಪ್ಪಳ : ಗವಿಮಠದ ಜಾತ್ರೆಯ ಅಂಗವಾಗಿ ದಿನಾಂಕ ೧೦-೧-೨೦೧೭ ರಂದು ಮಂಗಳವಾರ ಸಂಜೆ ೫ ಗಂಟೆಗೆ ಗವಿಮಠದ ಬೆಟ್ಟದ ಮೇಲಿರುವ ಅನ್ನಪೂಣೇಶ್ವರಿ ದೇವಿಗೆ ಉಡಿತುಂಬುವ ಕಾರ್ಯಕ್ರಮವು ಸಾಯಂಕಾಲ ಜರುಗಿತು. ಈ ಕಾರ್ಯಕ್ರಮದಲ್ಲಿ ಇರಕಲ್‌ಗಡಾ ಗ್ರ್ರಾಮದ ಜೈ ಸಂತೋಷಿಮಾತಾ ಮಂದಿರದ ಪೂಜ್ಯ ಶ್ರೀಮತಿ ರತ್ನಮ್ಮ ತಾಯಿಯವರು ಸುಮಾರು ೨೦-೨೫ ವರ್ಷಗಳಿಂದಲೂ ತಮ್ಮ ಅಸಂಖ್ಯಾತ ಭಕ್ತರು ಹಾಗೂ ಅನುಯಾಯಿಗಳೊಂದಿಗೆ ಮಠಕ್ಕೆ ಆಗಮಿಸಿ ಗವಿಮಠದ ಬೆಟ್ಟದ ಮೇಲಿರುವ ಶ್ರೀ ಅನ್ನಪೂರ್ಣೆಶ್ವರಿ ದೇವಿಗೆ ಉಡಿತುಂಬುವ ಕಾರ್ಯದಲ್ಲಿ ಸಕ್ರೀಯವಾಗಿ ಭಾಗವಹಿಸಿದರು.ಶ್ರೀ ಅನ್ನಪೂರ್ಣೆಶ್ವರಿ ದೇವಿಗೆ ಬಾಳೆಕಂಬ, ತೆಂಗಿನ ಗರಿ, ಕಬ್ಬಿನ ಹಂದರ ಹಾಕಿರುತ್ತಾರೆ. ಹೋಳಿಗೆ ಸಜ್ಜಕದ ನೈವೇದ್ಯವಾದ ನಂತರ ಆಗಮಿಸಿದ ಎಲ್ಲ ತಾಯಂದಿರಿಗೂ ಮಂಗಳಕರವಾದ ಬಾಗೀನ ಕೊಡುವ ಮೂಲಕ ಉಡಿತುಂಬುವ ಕಾಯಕವನ್ನು ಪೂಜ್ಯ ಶ್ರೀಮತಿ ರತ್ನಮ್ಮ ತಾಯಿಯವರುನಡೆಸಿಕೊಟ್ಟರು. ಜೈಸಂತೋಷಿಮಾತೆಯ ಪರಮ ಭಕರಾಗಿರುವ ಶ್ರೀಮತಿ ರತ್ನಮ್ಮನವರು ಪ್ರತಿವರ್ಷ ಕೊಪ್ಪಳದಿಂದ ೧೨ ಕೀ.ಮೀ ಅಂತರವಿರುವ ಇರಕಲ್‌ಗಡ ದಿಂದ ಬೆಳಗಿನ ಜಾವ ೬ ಗಂಟೆಯಿಂದ ಮಡಿ- ಯಿಂದ ಜಯಘೋಷಗಳೊಂದಿಗೆ ಶ್ರೀಮಠಕ್ಕೆ ಆಗಮಿಸಿ ಈ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿರುವದು ಭಕ್ತಿಯ ಪ್ರತೀಕವಾಗಿದೆ.ಶ್ರೀ ಅನ್ನಪೂರ್ಣೇಶ್ವರಿಗೆ ಹಾಗೂ ಎಲ್ಲ ತಾಯಂದಿರಿಗೂ ಉಡಿತುಂಬುವ ಮೂಲಕ ಜಾತ್ರೆಯ ಎಲ್ಲ ಕಾರ್ಯಕ್ರಮಗಳು ಸುಸೂತ್ರವಾಗಿ, ಮಂಗಳಕರವಾಗಿ ಸಾಗಬೇಕೆಂಬುದು ಈ ಕಾರ್ಯಕ್ರಮದ ಉದ್ದೇಶ. ಇದರ ಜೊತೆಗೆ ತಮ್ಮ ತಮ್ಮ ಇಷ್ಟಾರ್ಥಗಳ ಶೀಘ್ರ ಈಡೇರಿಕೆಯಾಗಿ, ಕುಟುಂಬದಲ್ಲಿ ಸುಖ, ಶಾಂತಿ, ಸಮೃದ್ಧಿ ನೆಲೆಸಲಿ ಎಂಬ ಸಂಕಲ್ಪವನ್ನು ತಂದುಕೊಂಡು ಅಂದು ಎಲ್ಲ ತಾಯಂದಿರು ಅನ್ನಪೂರ್ಣೇಶ್ವರಿ ದೇವಿಗೆ ಉಡಿತುಂಬುವ ಈ ಮೂಲಕ ಹರಕೆ ಮಾಡಿಕೊಳ್ಳುತ್ತಾರೆ. ಈ ಕಾರ್ಯಕ್ರಮದಲ್ಲಿ ಮಹೇಶ್ವರ ದೇವಸ್ಥಾನದ ಅಕ್ಕನ ಬಳಗದವರು, ಪ್ಯಾಟಿ ಈಶ್ವರ ದೇವಸ್ಥಾನದ ಅಕ್ಕನ ಬಳಗದವರು, ಮೊದಲಾದ ಮಹಿಳಾ ಬಳಗದವರು ಭಾಗವಹಿಸಿದರು.

Leave a Reply