ಅಜ್ಜನ ಜಾತ್ರೆಯಲ್ಲಿ ಉದ್ಯೋಗ ಮೇಳ

ಉದ್ಯೋಗ ಮೇಳದ ನೊಂದಣಿ ಪ್ರಾರಂಭ

   ಕೊಪ್ಪಳ: ನಗರದ ಶ್ರೀಗವಿಸಿದ್ಧೇಶ್ವರ ಮಹಾರಥೋತ್ಸವದ ನಿಮಿತ್ಯ ಈ ವರ್ಷವು ಸಹ ಬೃಹತ್ ಉದ್ಯೋಗಮೇಳವನ್ನು ದಿನಾಂಕ 24-01-2017 ಹಾಗೂ ದಿನಾಂಕ 25-01-2017 ರಂದು ಎರಡು ದಿವಸಗಳ ಕಾಲ ಹಮ್ಮಿಕೊಳ್ಳಲಾಗಿದೆ. ಈ ಉದ್ಯೋಗಮೇಳದಲ್ಲಿ ಶಾಲೆ ತೊರೆದವರು ಅಲ್ಲದೇ ಎಸ್.ಎಸ್.ಎಲ್.ಸಿ, ಪಿಯುಸಿ, ಐ.ಟಿ.ಐ, ಜೆ.ಓ.ಸಿ, ಡಿಪ್ಲೋಮಾ, ಪದವೀಧರರು ಹಾಗೂ ಸ್ನಾತಕೋತ್ತರ ಪದವೀಧರರು ಭಾಗವಹಿಸಿ ಉದ್ಯೋಗವನ್ನು ಪಡೆದುಕೊಂಡು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬಹುದಾಗಿದೆ.  ಉದ್ಯೋಗದ ಆಕಾಂಕ್ಷಿಗಳು ಮೊದಲು ತಮ್ಮ ಹೆಸರನ್ನು ಜಾತ್ರೆ ಆವರಣದಲ್ಲಿನ ಪೋಲಿಸ್ ಚೌಕಿಯ ಪಕ್ಕದಲ್ಲಿ ತೆರೆದಿರುವ ಕೇಂದ್ರದಲ್ಲಿ ದಿನಾಂಕ 09-01-2017 ರಿಂದ ದಿನಾಂಕ 20-01-2017 ರವರೆಗೆ ತಮ್ಮ ಹೆಸರನ್ನು ನೊಂದಾಯಿಸಬೇಕು. ನೊಂದಣಿ ಸಮಯದಲ್ಲಿ ಉದ್ಯೋಗದ ಆಕಾಂಕ್ಷಿಗಳು  ತಮ್ಮ ವಿದ್ಯಾರ್ಹತೆಯ ಅಂಕಪಟ್ಟಿ ಹಾಗೂ ಇತರೇ ಪ್ರಮಾಣಪತ್ರಗಳ ಝರಾಕ್ಸ ಪ್ರತಿಗಳನ್ನು ಕಡ್ಡಾಯವಾಗಿ ಸಲ್ಲಿಸಬೇಕಾಗುತ್ತದೆ.

ನೊಂದಣಿ ಮಾಡಿಸಿದಂತಹ  ಅಭ್ಯರ್ಥಿಗಳಿಗೆ ದಿನಾಂಕ 22-01-2017 ಭಾನುವಾರರಂದು ಬೆಳಿಗ್ಗೆ 10 ರಿಂದ 1-00 ಗಂಟೆಯವರೆಗೆ  ಕ್ರಮ ಸಂಖ್ಯೆ 01-2500 ವರೆಗೆ ಹಾಗೂ  ಮಧ್ಯಾಹ್ನ 02 ಗಂಟೆಯಿಂದ  05 ಗಂಟೆಯವರೆಗೆ ಕ್ರಮ ಸಂಖ್ಯೆ 2501-5000 ರವರೆಗೆ ಉದ್ಯೋಗದ ಆಕಾಂಕ್ಷಿಗಳಿಗೆ ಶ್ರೀಗವಿಸಿದ್ಧೇಶ್ವರ ಪ್ರೌಢಶಾಲೆಯ ಮುಂಭಾಗದ ಆವರಣದಲ್ಲಿ ಕೌಶಲ್ಯ ತರಬೇತಿಯನ್ನು ನೀಡಲಾಗುವದು. ಎಲ್ಲಾ ಉದ್ಯೋಗದ ಆಕಾಂಕ್ಷಿಗಳು ತರಬೇತಿಯಲ್ಲಿ ಕಡ್ಡಾಯವಾಗಿ ಭಾಗವಹಿಸಬೇಕು.ಈ ಉದ್ಯೋಗ ಮೇಳದಲ್ಲಿ 40ಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸಲಿವೆ. ಅಂತಿಮ ವರ್ಷದಲ್ಲಿ ಅಭ್ಯಸಿಸುತ್ತಿರುವ ವಿದ್ಯಾರ್ಥಿಗಳು ಉದ್ಯೋಗ ಮೇಳದಲ್ಲಿ ಭಾಗವಹಿಸಲು ಅವಕಾಶವಿರುತ್ತದೆ. ಮೊದಲು ಹೆಸರು ನೊಂದಾಯಿಸಿದ 5000 ಉದ್ಯೋಗಾಕಾಂಕ್ಷಿಗಳಿಗೆ ಮಾತ್ರ ಪ್ರವೇಶ ಸೀಮಿತವಿದೆ.ಕಳೆದ ವರ್ಷ 5000 ಉದ್ಯೋಗಾಕಾಂಕ್ಷಿಗಳು ಹೆಸರನ್ನು ನೊಂದಾಹಿಸಿದ್ದರು. 40 ಕಂಪನಿಗಳು ಭಾಗವಹಿಸಿದ್ದವು. ಮೇಳದಲ್ಲಿ ಒಟ್ಟು 958 ಪ್ರಸ್ತಾವನೆಪತ್ರಗಳನ್ನು ಹಾಗೂ 1613 ಅಭ್ಯರ್ಥಿಗಳು ಮುಂದಿನ ಸುತ್ತಿಗೆ ಆಯ್ಕೆಯಾಗಿದ್ದರು.ಈ ಸಾರಿ ಜರುಗುವ ಉದ್ಯೋಗ ಮೇಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗಾಂಕ್ಷಿಗಳು  ತಮ್ಮ ಹೆಸರನ್ನು ನಿಗದಿತ ಸಮಯ ಒಳಗಾಗಿ ನೊಂದಾಯಿಸಿ ಈ ಮೇಳದ ಪ್ರಯೋಜನೆ ಪಡೆಯಬೆಕೆಂದು ಶ್ರೀಗವಿಮಠದ ಪ್ರಕಟಣೆ ತಿಳಿಸಿದೆ. 
ಮಾಹಿತಿಗಾಗಿ ಮೊಬೈಲ್ ಸಂಖ್ಯೆಗಳಾದ 9845002259, 8904618790 ಸಂಪರ್ಕಿಸಬಹುದು.  ಉದ್ಯೋಗ ಮೇಳದಲ್ಲಿ ನಿವೃತ್ತ ಪ್ರಾದ್ಯಾಪಕರಾದ ಎಸ್.ಬಿ.ಹಿರೇಮಠ, ಬಿ.ಇಡಿ ಕಾಲೇಜಿನ ಪ್ರಾಚಾರ್ಯ ಪ್ರಕಾಶ ಬಡಿಗೇರ ಈ ಮೇಳದ ಉಸ್ತುವಾರಿ ವಹಿಸಿಕೊಂಡಿದ್ದಾರೆ.

Leave a Reply