ಅಜ್ಜನ ಜಾತ್ರೆಗೆ ಬನ್ನಿ -ಭಕ್ತಾಧಿಗಳಿಗೆ ಉಚಿತವಸತಿ ವ್ಯವಸ್ಥ

ಕೊಪ್ಪಳ : ಶ್ರೀಗವಿಸಿದ್ಧೇಶ್ವರ ಮಹಾರಥೋತ್ಸವವು ಜನೆವರಿ ೦೩ ರಂದು ಜರುಗುವ ಪ್ರಯುಕ್ತ ಗವಿಮಠದಲ್ಲಿ ಸಿದ್ಧತೆಗಳು ಭರದಿಂದ ಸಾಗುತ್ತಲಿವೆ. ಗವಿಮಠದ ಜಾತ್ರೆ ಪ್ರತಿ ವರ್ಷದಿಂದ ವರ್ಷಕ್ಕೆ ವಿಭಿನ್ನತೆಯನ್ನು ಪಡೆದುಕೊಳ್ಳುತ್ತಾ ನಾಡಿನಾಧ್ಯಂತ ಪ್ರಸಿದ್ಧಿ ಪಡೆದುಕೊಳ್ಳುತ್ತಿದೆ. ಸುಮಾರು ವರ್ಷಗಳಿಂದ ಶ್ರೀ ಗವಿಸಿದ್ದೇಶ್ವರ ಜಾತ್ರಾಮಹೋತ್ಸವಕ್ಕೆ ಆಗಮಿಸುವ ಭಕ್ತರಿಗೆ ಉಚಿತವಾಗಿ ವಸತಿ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತಿದೆ.

ಕಳೆದ ವರ್ಷ ೨೦೧೭ ರ ಜಾತ್ರೆಯಲ್ಲಿ ದಾಖಲೆಯ ೮೦೦೦ ಸಾವಿರಕ್ಕೂ ಹೆಚ್ಚು ಭಕ್ತಾದಿಗಳಿಗೆ ಸಮರ್ಪಕ ವಸತಿ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು. ಈ ವರ್ಷದ ಜಾತ್ರೆಗೆ ಆಗಮಿಸುವ ಭಕ್ತರ ಸಂಖ್ಯೆ ಹೆಚ್ಚಾಗುವ ನಿರೀಕ್ಷೆ ಇರುವುದರಿಂದ ಸುಮಾರು ಶ್ರೀ ಗವಿಮಠದ ಸಂಸ್ಥೆಗಳ ಮತ್ತು ಸ್ಥಳೀಯ ಸಂಸ್ಥೆಗಳ ಸುಮಾರು ೨೩ ಸ್ಥಳಗಳಲ್ಲಿ ವಸತಿಯನ್ನು ಕಲ್ಪಿಸಲಾಗಿದೆ.

ಈ ಸಲದ ಜಾತ್ರೆಗೆ ಐದಾರು ಲಕ್ಷ ಜನ ಭಕ್ತರು ಬರುತ್ತಿರುವದರಿಂದ ಬಹುದೂರದಿಂದ ಬರುವ ವಿವಿಧ ನಗರಗಳ ಹಾಗೂ ಹಳ್ಳಿಗಳ ಭಕ್ತಾಧಿಗಳಿಗೆ ಉಳಿದುಕೊಳ್ಳುವ ಸಲುವಾಗಿ ಎಸ್.ಜಿ.ಟ್ರಸ್ಟ್ ಅಡಿಯಲ್ಲಿ ಬರುವ ೦೧) ಶ್ರೀಮತಿ ಶಾರದಮ್ಮ ಕೊತಬಾಳ ಬಿಬಿಎಮ್ ಕಾಲೇಜು ೦೨) ಶ್ರೀ ಗವಿಸಿದ್ದೇಶ್ವರ ಪದವಿಪೂರ್ವ ಕಾಲೇಜು ೦೩) ಶ್ರೀ ಗವಿಸಿದ್ದೇಶ್ವರ ಡಿ. ಇಡಿ ಕಾಲೇಜು೦೪) ಶ್ರೀ ಗವಿಸಿದ್ದೇಶ್ವರ ಬಿ.ಇಡಿ ಕಾಲೇಜು೦೫)) ಶ್ರೀ ಗವಿಸಿದ್ದೇಶ್ವರ ಪ್ರೌಡಶಾಲೆ ೦೬)) ಶ್ರೀ ಶಿವಶಾಂತವೀರ ಪಬ್ಲಿಕ್ ಸ್ಕೂಲ್ ೦೭) ೨೦೦೦ ವಿದ್ಯಾರ್ಥಿಗಳ ಉಚಿತ ಪ್ರಸಾದ ನಿಲಯ೦೮) ಶ್ರೀ ಶಿವಶಾಂತ ಮಂಗಲ ಭವನ೦೯) ಶ್ರೀ ಮಹಾಂತಯ್ಯನ ಮಠಕಲ್ಯಾಣ ಮಂಟಪ೧೦) ಶ್ರೀ ಗವಿಸಿದ್ಧೇಶ್ವರ ಎ.ಸಿ ಹಾಲ್೧೧) ಯಾತ್ರಿ ನಿವಾಸ೧೨)ಗಾಣಿಗೇರ ಸಮುದಾಯ ಭವನ ೧೩) ಮಳೆಮಲ್ಲೇಶ್ವರ ಕಲ್ಯಾಣ ಮಂಟಪ ೧೪) ಶ್ರೀ ಪಾನಘಂಟಿ ಕಲ್ಯಾಣ ಮಂಟಪ ೧೫) ಮಾಸ್ತಿ ಪಬ್ಲಿಕ್ ಸ್ಕೂಲ್ ೧೬)ತೇರಾಪಂಥಿ ಭವನ ೧೭)ಸ್ಥಾನಿಕ ಭವನ೧೮) ಕುವೆಂಪು ಸ್ಕೂಲ್ ೧೯) ಶ್ರೀ ಪಾಂಡುರಂಗ ಕಲ್ಯಾಣ ಮಂಟಪ ೨೦)ಮೇದಾರ ಕಲ್ಯಾಣ ಮಂಟಪ ೨೧)ನಿವೇದಿತಾ ಸ್ಕೂಲ್ ೨೨) ವೃದ್ಧಾಶ್ರಮ ಹೀಗೆ ಕೊಪ್ಪಳ ನಗರದ ವಿವಿಧ ಕಡೆ ಒಟ್ಟು ಸುಮಾರು ೧೦೦೦೦ ಕ್ಕಿಂತಲೂ ಹೆಚ್ಚಿನ ಭಕ್ರರು ತಂಗಲು ಉಚಿತ ವಸತಿ ಸೌಲಭ್ಯ ಮಾಡಲಾಗಿದೆ.

ಪ್ರತಿಯೊಂದು ಕೊಠಡಿಗಳಿಗೆಜಮಖಾನ, ಬಕೀಟು, ಮಗ್, ನೀರಿನ ಕ್ಯಾನ್, ದಿನಪತ್ರಿಕೆ , ಸೊಳ್ಳೆಬತ್ತಿ, ಮೇಣದಬತ್ತಿ, ಕಡ್ಡಿಪೆಟ್ಟಿಗೆ , ಊದಿನಕಡ್ಡಿ , ರೂಂ ಪ್ರೆಶನರ್‌ಕಸದ ಬುಟ್ಟಿ ಈ ಸೌಲಭ್ಯಗಳನ್ನು ಕಲ್ಪಿಸಿದೆ. ಅಲ್ಲದೇಪ್ರತಿಯೊಂದು ವಸತಿ ಸ್ಠಳಗಳಲ್ಲಿಒಬ್ಬರು ಮುಖ್ಯಸ್ಥರನ್ನು ಮೇಲ್ವಿಚಾರಕರಾಗಿ ನಿಯೋಜಿಸಲಾಗಿದೆ. ದಿನದ ೨೪ ಘಂಟೆಗಳು ವೇಳಾಪಟ್ಟಿಗನುಗುಣವಾಗಿ ಇಬ್ಬರು ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಾರೆ.ಭಕ್ತರಿಗಾಗಿ ಇಲ್ಲಿ ವೈದ್ಯಕೀಯ ಸೇವೆ ಲಭ್ಯವಿರುತ್ತದೆ. ಇಬ್ಬರು ಸ್ವಚ್ಚತಾ ಸಿಬ್ಬಂದಿ ಕಾರ್ಯನಿರ್ವಹಿಸುತ್ತಾರೆ. ವೇಳಾಪಟ್ಟಿಗನುಗುಣವಾಗಿ ಪುರುಷ ಮತ್ತು ಸ್ತ್ರೀ ಶೌಚಾಲಯ ಸಿಬ್ಬಂದಿ ಕಾರ್ಯನಿರ್ವಹಿಸುತ್ತಾರೆ. ವಿದ್ಯುತ ದುರಸ್ತಿಗಾಗಿ ಸಿಬ್ಬಂದಿ ನೇಮಿಸಲಾಗಿದೆ. ನಳ ಮತ್ತು ಪೈಪುಗಳ ದುರಸ್ತಿಗಾಗಿ ಸಿಬ್ಬಂದಿ ನೇಮಿಸಲಾಗಿದೆ. ಶೌಚಾಲಯ ಮತ್ತು ಸ್ನಾನಗೃಹಗಳ ಸ್ವಚ್ಚತೆಗಾಗಿ ಆಧ್ಯತೆ ಒದಗಿಸಲಾಗುತ್ತದೆ. ಸುರಕ್ಷತೆಗಾಗಿ ಒಬ್ಬ ಸೆಕ್ಯುರಿಟಿ ಗಾರ್ಡ್ ಸಹ ನೇಮಿಸಲಾಗಿದೆ. ಭಕ್ತಾದಿಗಳಿಗೆ ಆಯ್ದ ಸ್ಠಳಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.ಎಲ್ಲಾ ವಸತಿ ಸ್ಥಳಗಳಲ್ಲಿ ಸಮರ್ಪಕವಾದ ವಿದ್ಯುತ್ ನೀರು , ಸ್ವಚ್ಚತಾ , ಸುರಕ್ಷತಾ ವ್ಯವಸ್ಥೆ ಕಲ್ಪಿಸಲಾಗಿದೆ. ಕಳೆದ ವರ್ಷಕ್ಕಿಂತಲೂ ಈ ವರ್ಷ ಅಚ್ಚುಕಟ್ಟಾಗಿ ಭಕ್ತರಿಗಾಗಿ ಅದ್ದೂರಿಯಾದ ಉಚಿತ ವಸತಿ ವ್ಯವಸ್ಥೆ ಮಾಡಲಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಡಾ . ಬಸವರಾಜ ಎಸ್‌ಸವಡಿ ಮೊಬೈಲ್೯೮೪೫೬೪೬೮೮೫, ಪರೀಕ್ಷಿತರಾಜ್ ಮೊಬೈಲ್೯೪೪೯೪೩೨೨೩೯, ಡಾ . ಸಿ ಎಸ್ ಕರಮುಡಿ ಮೊಬೈಲ್೯೪೪೯೬೮೯೦೮೫, ಡಾ . ಎಸ್ ಎಸ್ ಶಿರೂರಮಠ ಮೊಬೈಲ್ ೯೮೪೫೩೯೪೭೩೫ ಸಂಪರ್ಕಿಸಬಹುದೆಂದು ಗವಿಮಠದ ಪ್ರಕಟಣೆ ತಿಳಿಸಿದೆ.

Please follow and like us:
error