ಅಜ್ಜನ ಜಾತ್ರೆಗೆ ಆಹ್ವಾನ-

ಕೊಪ್ಪಳ: ನಗರದ ಶ್ರೀಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವಕ್ಕೆ ಈಗಾಗಲೆ ಭರದಿಂದ ಕಾರ್ಯಗಳು ಜರುಗಿದ್ದು ಭಕ್ತಾಧಿಗಳನ್ನು ಆಮಂತ್ರಿಸಲು ಆಮಂತ್ರಿಸಲು ಆಮಂತ್ರಣ ಪತ್ರಿಕಾ ಸಿದ್ದಗೊಂಡಿದೆ.ಶ್ರೀ ಮಠದ ಕನಕರಾಜ ಎಚ್ ಎಸ್ ಎಂಬ ವಸತಿನಿಲಯದ ವಿದ್ಯಾರ್ಥಿಯೊಬ್ಬ ಜಾತ್ರೆಗೆ ಬನ್ನಿ ಎಂಬ ಚಿತ್ರವನ್ನು ಶ್ರೀಗವಿಸಿದ್ಧೇಶ್ವರ ಮೂರ್ತಿಯ ಭಾವಚಿತ್ರದೊಂದಿಗೆ ಬಿಡಿಸಿರುವ ಆಮಂತ್ರಣ ಪತ್ರಕೆ ಬಹಳಷ್ಟು ಸುಂದರವಾಗಿ ಕಾಣುತ್ತಿದೆ. ಬಾಲಕನ ಕಲೆಯನ್ನು ಶ್ರೀಗಳು ಪ್ರಶಂಶಿಸಿ ಆಶಿರ್ವದಿಸಿದ್ದಾರೆ.

ಯಂತ್ರದ ಮೂಲಕ ರಸ್ತೆಯ ಸ್ಚಚ್ಚತೆ

ಕೊಪ್ಪಳ ನಗರದ ಗವಿಸಿದ್ಧೇಶ್ವರ ಜಾತ್ರಾ ನಿಮಿತ್ಯ ಗವಿಮಠದ ಆವರಣ,ನಗರದ ಸಾರ್ವಜನಿಕ ರಸ್ತೆಗಳನ್ನು ಧೂಳು ನಿಯಂತ್ರಿಸುವ ನಿಟ್ಟಿನಲ್ಲಿ ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್ ಇವರು ಧೂಳು ಹೊಡೆಯುವ ವಾಹನದ ಸೇವೆಯನ್ನು ಒದಗಿಸಿರುತ್ತಾರೆ.ಇದರ ಮೂಲಕ ರಸ್ತೆಗಳಲ್ಲಿ ಇರುವ ಮಣ್ಣನ್ನು ತೆಗೆಯಲು ಸಹಾಯಕವಾಗುತ್ತದೆ.ಈ ವಾಹನದ ಸೇವೆಯು ನಿರಂತರವಾಗಿ ಜಾತ್ರಾ ಪ್ರಾರಂಭವಾಗುವ ವರೆಗೂ ಸಾಗುತ್ತದೆ.ಯಂತ್ರದ ಸ್ವಚ್ಛತಾ ಕಾರ್ಯವು ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ.

Please follow and like us:
error