ಅಗ್ನಿಶಾಮಕ ಇಲಾಖೆಯಿಂದ ಅಣುಕು ಪ್ರದರ್ಶನ

ಕೊಪ್ಪಳ : ನಗರದ ಬಹದ್ದೂರ ಬಂಡಿ ರಸ್ತೆಯಲ್ಲಿರುವ ಸರಸ್ವತಿ ವಿದ್ಯಾಮಂದಿರ ಪ್ರಾಥಮಿಕ ಮತ್ತು ಪ್ರೌಢ ಶಾಲೆಯಲ್ಲಿ ಶನಿವಾರ ಅಗ್ನಿಶಾಮಕ ಇಲಾಖೆಯ ವತಿಯಿಂದ ಅಗ್ನಿ ನಿವಾರಣೆ ಬಗ್ಗೆ ಉಪನ್ಯಾಸ ಮತ್ತು ಅಣಕು ಪ್ರದರ್ಶನ ನಡೆಯಿತು.
ಕಾರ್ಯಕ್ರಮದಲ್ಲಿ ಉಪನ್ಯಾಸವನ್ನು ನೀಡಿದ ಅಗ್ನಿಶಾಮಕ ಸಹಾಯಕ ಠಾಣಾಧಿಕಾರಿ ಯು.ಕೊಟ್ರೇಶ್ ರವರು ಅಗ್ನಿ ನಂದಿಸುವ ಬಗ್ಗೆ ಸವಿಸ್ತಾರವಾಗಿ ಮಕ್ಕಳಿಗೆ ಮನದಟ್ಟು ಆಗುವಂತೆ ಪ್ರಯೋಗಗಳ ಮುಖಾಂತರ ವಿವರಣೆ ನೀಡಿದರು. ಆಕಸ್ಮಿಕವಾಗಿ ಅನಾಹುತ ಸಂಭವಿಸದಾಗ ಆಗ್ನಿಯನ್ನು ನಂದಿಸಲು ಯಾವ ರೀತಿಯ ಮುಂಜಾಗ್ರತ ಕ್ರಮಗಳನ್ನು ಅನುಸರಿಸಬೇಕು , ಗ್ಯಾಸ್ ಸಿಲಿಂಡರ್ ನಲ್ಲಿ ಬೆಂಕಿ ಕಾಣಿಸಿಕೊಂಡಾಗ ಯಾವ ರೀತಿ ಶಮನ ಮಾಡಬೇಕು ಎನ್ನುವದರ ಕುರಿತು ವಿವರಿಸಿದರು. ನಂತರ ಇಲಾಖೆಯ ಸಿಬ್ಬಂದಿ ವರ್ಗದವರು ಶಾಲೆಯ ಮಕ್ಕಳಿಗೆ ಅಗ್ನಿ ನಂದಿಸುವ ಕುರಿತು ಅಣಕು ಪ್ರದರ್ಶನ ನೀಡಿದರು. ಅಗ್ನಿಶಾಮದ ದಳದ ಸಿಬ್ಬಂದಿ ದೊಡ್ಡ ಲಿಂಗಪ್ಪ, ಪಿ.ದೊಡ್ಡಸುಭಾನಸಾಬ,ಪರಶುರಾಮಮ ಸಾಧಿಕ್ ಅಣುಕು ಪ್ರದರ್ಶನ ದಲ್ಲಿ ಭಾಗವಹಿಸಿದ್ದುರ.
ಈ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯದರ್ಶಿ ಆರ್.ಎಚ್.ಅತ್ತನೂರ, ಮುಖ್ಯೋಪಾಧ್ಯಾಯನಿ ಶ್ರೀಮತಿ ರೇಣುಕಾ ಅತ್ತನೂರ, ಶಾಲೆಯ ಶಿಕ್ಷಕರು, ಶಾಲೆಯ ಮಕ್ಕಳು ಉಪಸ್ತಿತರಿದ್ದರು.

Please follow and like us:
error