ಅಗಲಿದ ಸಂಗಾತಿ ಚೇತಕ್ ಗೆ ಪೋಲಿಸರ ನಮನ

ಕೊಪ್ಪಳ : ಕಳೆದ ೮ ವರ್ಷಗಳಿಂದ ಡಾಗ್ ಸ್ಕ್ವಾಡ್ ನಲ್ಲಿ  ಸೇವೆಯಲ್ಲಿದ್ದು ಕ್ಯಾನ್ಸರನಿಂದ ಸಾವನ್ನಪ್ಪಿದ ಚೇತಕ್ ಎಂಬ ಡಾಬರಮನ್ ನಾಯಿಗೆ ಪೋಲಿಸರ ಗೌರವಾರ್ಪಣೆ ಮಾಡಿದರು. ಅಪರಾಧ ಪತ್ತೆ ಮಾಡುವಲ್ಲಿ ಚಾಣಾಕ್ಷವಾಗಿದ್ದ ಚೇತಕ್ ನಿಧನಕ್ಕೆ ಪೋಲಿಸರ ಕಂಬನಿ ಮಿಡಿದರು. 2010ರಲ್ಲಿ ಹುಟ್ಟಿದ್ದ ಈ ಚೇತಕ್ 2011ರಿಂದ ಟ್ರೇನಿಂಗ ಮುಗಿಸಿ 2012ರಲ್ಲಿ ಡಾಗ್ ಸ್ಕ್ವಾಡ್ ಸೇರಿತ್ತು. ತಮ್ಮ ಜೊತೆ ನಿರಂತರವಾಗಿ ಅಪರಾಧ ಪತ್ತೆ ಹಚ್ಚುವಲ್ಲಿ ಕೆಲಸ ಮಾಡಿದ್ದ ಚೇತಕ್ ಗೆ ಡಿಆರ್ ಬೆಟಾಲಿಯನ್ ನ ಗೌರವ ಸಮರ್ಪಣೆ ಮಾಡಿದರು.ಕೊಪ್ಪಳ ಡಿಆರ್ ಘಟಕದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಚೇತಕ್.ಇಂದು ಸಕಲ ಗೌರವಗಳೊಂದಿಗೆ ಅಂತಿಮ ಸಂಸ್ಕಾರ ನಡೆಸಲಾಯಿತು.

Please follow and like us:
error