ಅಕ್ರಮ ಮರಳು ಅಡ್ಡೆ ಮೇಲೆ ತಹಶಿಲ್ದಾರ ದಾಳಿ

ಕೊಪ್ಪಳ : ಅಕ್ರಮವಾಗಿ ತುಂಗಭದ್ರಾ ನದಿಯಿಂದ ಮರಳು ಸಾಗಾಣಿಕೆ ಮಾಡುತ್ತಿದ್ದ ಅಡ್ಡೆಯ ಮೇಲೆ ಗಂಗಾವತಿ ತಹಶಿಲ್ದಾರ ಎಂ. ರೇಣುಕಾ ದಾಳಿ ಮಾಡಿದ್ದಾರೆ. ಜಿಲ್ಲೆಯ ಗಂಗಾವತಿ ತಾಲೂಕಿನ ಚಿಕ್ಕಜಂತಗಲ್ ಗ್ರಾಮದ ಬಳಿ ತುಂಗಭದ್ರಾ ನದಿಯಿಂದ ಅಕ್ರಮವಾಗಿ ಮರಳು ಸಾಗಾಟ ನಡೆಸಲಾಗಿತ್ತು. ಈ ಬಗ್ಗೆ ಮಾಧ್ಯಮಗಳಲ್ಲಿ ವರದಿ ಹಾಗೂ ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆ ದಾಳಿ ಲಕ್ಷಾಂತರ ಮೌಲ್ಯದ ಮರಳು ವಶಪಡಿಸಿಕೊಳ್ಳಲಾಗಿದೆ. ದಾಳಿಯಲ್ಲಿ ಕಂದಾಯ ನೀರಿಕ್ಷಕರಾದ ಹನುಮಂತಪ್ಪ, ಗ್ರಾಮಲೆಕ್ಕಾಧಿಕಾರಿ ಜ್ಯೋತಿ ದಾಳಿಯಲ್ಲಿ ಪಾಲ್ಗೊಂಡಿದ್ದರು. ಇನ್ನು ಇದೇ ರೀತಿ ಹೆಬ್ಬಾಳ , ಮುಷ್ಟೂರು, ನಂದಿಹಳ್ಳಿ ಗ್ರಾಮ ಸೇರಿದಂತೆ ನದಿ ಭಾಗದಲ್ಲಿ ಸಾಕಷ್ಟು ಅಕ್ರಮ ಮರಳು ಸಾಗಾಣಿಕೆ ಆಗ್ತಾ ಇದೆ. ಇದರ ಬಗ್ಗೆ ಕ್ರಮ ತೆಗೆದುಕೊಳ್ಳಿ ಅನ್ನೋದು ಸಾರ್ವಜನಿಕ ಒತ್ತಾಯವಾಗಿದೆ..

Please follow and like us:
error