ಅಕ್ರಮ ಮದ್ಯ ಮಾರಾಟ, ಮಟಕಾ ದಾಳಿ

ಕುಕನೂರ ಪೊಲೀಸ್ ಠಾಣೆ ವ್ಯಾಪ್ತಿಯ ಪಟ್ಟಣದ ಸಮೃದ್ದ ರೆಸಿಡೆನ್ಸಿ ಮುಂದುಗಡೆ ಸಾರ್ವಜನಿಕ ಸ್ಥಳದಲ್ಲಿ ಆರೋಪಿತನಾದ ಇಮಾಮಹುಸೇನ ತಂದೆ ಪೀರಸಾಬ ಲಕ್ಕುಂಡಿ ಸಾ: ಕುಕನೂರ ಈತನು ಮಟಕಾ ಪಟ್ಟಿ ಬರೆಯುತ್ತಿದ್ದಾಗ ಯಲ್ಲಪ್ಪ ಘೋರ್ಪಡೆ ಪಿ.ಐ. ಡಿ.ಸಿ.ಐ.ಬಿ. ಘಟಕ ಡಿ.ಪಿ.ಓ. ಕೊಪ್ಪಳ ರವರು ಸಿಬ್ಬಂದಿ ಸಮೇತ ಹೋಗಿ ದಾಳಿ ಮಾಡಿ, ಆರೋಪಿತನಿಂದ ನಗದು ಹಣ ರೂ. 3,600=00 ಗಳನ್ನು ಜಪ್ತಿ ಪಡಿಸಿಕೊಂಡು ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತಾರೆ.

ದಾಳಿ

ಗಂಗಾವತಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ನಗರದ ಮಾರುತಿ ಗ್ಯಾಸ್ ಕಂಪನಿಯ ಹತ್ತಿರ ಆರೋಪಿತನಾದ ವಾಸಿಂ ಅಕ್ರಂ ತಂದೆ ಮಹಮ್ಮದ ರಫಿ ಸಾ: ಗುಂಡಮ್ಮ ಕ್ಯಾಂಪ ಗಂಗಾವತಿ ಈತನು ಯಾವುದೇ ಲೈಸನ್ಸ್ ಇಲ್ಲದೇ ಆಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದಾಗ ಶ್ರೀ ಮಹಾಕೊಟೇಶ ಎ.ಎಸ್.ಐ ಗಂಗಾವತಿ ನಗರ ಠಾಣೆ ಸಿಬ್ಬಂದಿ ಸಮೇತ ದಾಳಿ ಮಾಡಿ ಆರೋಪಿತನಿಂದ ರೂ 970/- ಮೌಲ್ಯದ ಆಕ್ರಮ ಮದ್ಯ ವಶಪಡಿಸಿಕೊಂಡು ಅರೋಪಿತನ ವಿರುದ್ದ ಪ್ರಕರಣ ದಾಖಲಿಸಿ ಕ್ರಮ ಕೈ ಗೊಂಡಿರುತ್ತಾರೆ.

ಕಾರಟಗಿ ಪೊಲೀಸ್ ಠಾಣೆ ವ್ಯಾಪ್ತಿಯ ಗುಂಡುರ ಗ್ರಾಮದ ಶಿವಣ್ಣ ರವರ ಮನೆಯ ಹತ್ತಿರ ಆರೋಪಿತನಾದ ಯಮನಪ್ಪ ದೇವರಮನಿ ಸಾ: ಗುಂಡುರ ಈತನು ಯಾವುದೇ ಲೈಸನ್ಸ್ ಇಲ್ಲದೇ ಆಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದಾಗ ಶರತ ಕುಮಾರ ಪಿ.ಎಸ್.ಐ ಕಾರಟಗಿ ಠಾಣೆ ಸಿಬ್ಬಂದಿ ಸಮೇತ ದಾಳಿ ಮಾಡಿ ಆರೋಪಿತನಿಂದ ರೂ 491/- ಮೌಲ್ಯದ ಆಕ್ರಮ ಮದ್ಯ ವಶಪಡಿಸಿಕೊಂಡು ಅರೋಪಿತನ ವಿರುದ್ದ ಪ್ರಕರಣ ದಾಖಲಿಸಿ ಕ್ರಮ ಕೈ ಗೊಂಡಿರುತ್ತಾರೆ.

ಕಾರಟಗಿ ಪೊಲೀಸ್ ಠಾಣೆ ವ್ಯಾಪ್ತಿಯ ಪಟ್ಟಣದ ಶಿವನಗರದಲ್ಲಿರುವ ಹೋಟೆಲ್ ಹತ್ತಿರ ಆರೋಪಿತನಾದ ಮಂಜುನಾಥ ತಂದೆ ರವಿ ಪವಾರ್ ಸಾ: ಕಾರಟಗಿ ಯಾವುದೇ ಲೈಸನ್ಸ್ ಇಲ್ಲದೇ ಆಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದಾಗ ಶರತ ಕುಮಾರ ಪಿ.ಎಸ್.ಐ ಕಾರಟಗಿ ಠಾಣೆ ಸಿಬ್ಬಂದಿ ಸಮೇತ ದಾಳಿ ಮಾಡಿ ಆರೋಪಿತನಿಂದ ರೂ 680/- ಮೌಲ್ಯದ ಆಕ್ರಮ ಮದ್ಯ ವಶಪಡಿಸಿಕೊಂಡು ಅರೋಪಿತನ ವಿರುದ್ದ ಪ್ರಕರಣ ದಾಖಲಿಸಿ ಕ್ರಮ ಕೈ ಗೊಂಡಿರುತ್ತಾರೆ.

Please follow and like us:
error