ಅಕ್ಬರ್ ಕಾಲಿಮಿರ್ಚಿಯವರ ಕಥಾ ಸಂಕಲನಕ್ಕೆ ಅಕ್ಷರ ಲೋಕದ ನಕ್ಷತ್ರ ಪ್ರಶಸ್ತಿ

ಕೊಪ್ಪಳ, ೧೮- ಸೇಡಂ ತಾಲೂಕಿನ ಮೇದಕ ಚನ್ನಕೇಶ್ವರ ಶಿಕ್ಷಣ ಮತ್ತು ಗ್ರಾಮೀಣ ಅಭಿವೃದ್ಧಿ ಟ್ರಸ್ಟ್ (ರಿ) ನೀಡುವ ರಾಜ್ಯ ಮಟ್ಟದ ಅಕ್ಷರ ಲೋಕದ ನಕ್ಷತ್ರ ಪ್ರಶಸ್ತಿಗೆ ಕೊಪ್ಪಳದ ಹಿರಿಯ ಸಾಹಿತಿ ಅಕ್ಬರ್ ಕಾಲಿಮಿರ್ಚಿ ಅವರ ದೇವ್ರ ಮಗಳು ಮತ್ತು ಇತರೆ ಕಥೆಗಳ ಕಥಾ ಸಂಕಲನ ಆಯ್ಕೆಯಾಗಿದೆ.ಕೆ.ಮೊಗಲಪ್ಪ ಯಾನಾಗುಂದಿಯವರ ನೇತೃತ್ವದಲ್ಲಿ ಈ ಕೃತಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ಆಯ್ಕೆ ಸಮಿತಿ ಸಂಚಾಲಕ ಲಕ್ಷ್ಮೀ ಮೊಗಲಪ್ಪ ತಿಳಿಸಿದ್ದಾರೆ.ರಾಜ್ಯ ಮಟ್ಟದ ೧೫ನೇ ವರ್ಷದ ಅಕ್ಷರ ಲೋಕದ ನಕ್ಷತ್ರ ಪ್ರಶಸ್ತಿಗೆ ಇವರ ಕೃತಿ ಆಯ್ಕೆಯಾಗಿದ್ದು ಬಹುಮಾನ ಹಾಗೂ ೫೦೦೦ರೂ ನಗದು ಮತ್ತು ಪ್ರಶಸ್ತಿ ಫಲಕ, ಸನ್ಮಾನ ಫೆ.೧ರಂದು ಜರುಗುವ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ನೀಡಲಾಗುತ್ತಿದೆ.

Please follow and like us:
error