ಅಕಾಲಿಕ ಬಾರೀ ಮಳೆಗೆ ಲಕ್ಷಾಂತರ ರೂಪಾಯಿ ಹಾನಿ

ಕೊಪ್ಪಳ : ಕೊಪ್ಪಳ ಜಿಲ್ಲೆಯ ಹಲವೆಡೆ ಭಾರೀ ಮಳೆ ಗುಡುಗು- ಸಿಡಿಲು- ಬಿರುಗಾಳಿ ಸಹಿತ ವರುಣನ ಅಬ್ಬರ.ಕಾರಟಗಿಯಲ್ಲಿ ಭಾರೀ ಬಿರುಗಾಳಿ ಮಳೆಬಿಸಿಲಿನಿಂದ ತತ್ತರಿಸಿದ್ದ ಜನರಿಗೆ ತಂಪೆರಗಿದ ಮಳೆರಾಯ

ಭತ್ತದ ಬೆಳೆಗೆ ನೀರಿಲ್ಲದೆ ಬಸವಳಿದಿದ್ದ ಅನ್ನದಾತನಿಗೆ ನೆರವಾದ ಮಳೆ. ರೈತನ ಮೊಗದಲ್ಲಿ ಮಂದಹಾಸ ಮೂಡಿಸಿದ ಮಳೆಯ ಸಿಂಚನವಾಗಿದೆ.

ಅಕಾಲಿಕ ಭಾರೀ ಗಾಳಿ ಮಳೆ ಗೆ ಚುನಾವಣಾ ಪ್ರಚಾರಕ್ಕೆ ಹಾಕಿದ್ದ ಕಬ್ಬಿಣದ ಪೆಂಡಾಲ್ ಕುಸಿದುಬಿದ್ದಿದೆ.

ಕನಕಗಿರಿಯ ಶಾಸಕರ ಮನೆ ಮುಂದೆ ನಿಲ್ಲಿಸಿದ್ದ 5 ಕಾರುಗಳು ಜಖಂಗೊಂಡಿವೆ.ಕೊಪ್ಪಳ ಜಿಲ್ಲೆಯ ಕಾರಟಗಿಯಲ್ಲಿ ಘಟನೆ ನಡೆದಿದೆ.ಶಾಸಕ ಶಿವರಾಜ್ ತಂಗಡಗಿ ಮನೆ ಮುಂದೆ ಹಾಕಿದ್ದ ಪ್ರಚಾರ ಪೆಂಡಾಲ್.

ಶಾಸಕರ ಬೆಂಬಲಿಗರ 5 ಕಾರುಗಳು ಜಖಂಗೊಂಡಿವೆ ಇದೇ ಪಟ್ಟಣದಲ್ಲಿ ಸೋಲಾರ್ ಶೆಡ್ ನಾಶ.ಸುಮಾರು 5 ಕೋಟಿ ವೆಚ್ಚದ ಸೋಲಾರ್ ಶೆಡ್ ಸಂಪೂರ್ಣ ನಾಶ.ದವಸ ಧಾನ್ಯ ನೀರು ಪಾಲಾಗಿದೆ.