ಅಂಬೇಡ್ಕರ್ ಸರ್ಕಲ್ ನಲ್ಲಿ ಸಂವಿಧಾನ ದಿನಾಚರಣೆ


ಕೊಪ್ಪಳ ೨೭: ಸಂವಿಧಾನ ದಿನಾಚರಣೆ ಅಂಗವಾಗಿ ನಗರದ ಅಂಬೇಡ್ಕರ್ ವೃತ್ತದಲ್ಲಿ ಛಲವಾದಿ ಸಮಾಜದ ಮುಖಂಡರು ಹಾಗೂ ಭಾರತೀಯ ದಲಿತ ಪ್ಯಾಂಥರ್, ಕರ್ನಾಟಕ ದಲಿತ ವಿದ್ಯಾರ್ಥಿ ಒಕ್ಕೂಟ(ಭೀಮವಾದ) ಸಂಘಟನೆಯ ಮುಖಂಡರಿಂದ ಭಾನುವಾರ ಸಂವಿಧಾನ ದಿನಾಚರಣೆ ಆಚರಿಸಲಾಯಿತು.

ಸಂವಿಧಾನ ದಿನಾಚರಣೆ ಅಂಗವಾಗಿ ಡಾ.ಬಿಆರ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಟಾರ್ಪಣೆ ಸಲ್ಲಿಸಲಾಯಿತು. ನಂತರ ಶಿಕ್ಷಕ ರಾಮಣ್ಣ ಚಲವಾದಿ ಸಂವಿಧಾನದ ಪ್ರಸ್ತಾವನೆ ಬೋಧಿಸಿದರು. ಈ ಸಂದರ್ಭದಲ್ಲಿ ಛಲವಾದಿ ಸಮುದಾಯದ ಮುಖಂಡರಾದ ಗವಿಸಿದ್ದಪ್ಪ ಚಲವಾದಿ, ದೇವಪ್ಪ ಬೆಲ್ಲದ, ಕಳಕಪ್ಪ ಬೆಲ್ಲದ್, ಸಿದ್ರಾಮ ಹೊಸಮನಿ, ಗವಿಸಿದ್ದಪ್ಪ ಅಳ್ಳಳ್ಳಿ, ಮಹಾವೀರ ಅಳ್ಳಳ್ಳಿ, ವಸಂತ ಬೆಲ್ಲದ್, ಡಿಸ್‌ಎಸ್ ಮುಖಂಡರಾದ ರಮೇಶ ಬೆಲ್ಲದ್, ಯಲ್ಲಪ್ಪ ಬಳಗಾನೂರ, ನಗರಸಭೆ ಸದಸ್ಯ ಮುತ್ತುರಾಜ ಕುಷ್ಟಗಿ, ಭಾರತೀಯ ದಲಿತ ಪ್ಯಾಂಥರ್ ಜಿಲ್ಲಾಧ್ಯಕ್ಷ ನಾಗರಾಜ ಬೆಲ್ಲದ್, ಯುವ ಮುಖಂಡರಾದ ರಾಘವೇಂದ್ರ ಕಳ್ಳಿಮನಿ, ಅಜಯ್ ದೊಡ್ಡಮನಿ, ಸತೀಶ ಬನ್ನಿಕೊಪ್ಪ, ಮಹಾಂತೇಶ್ ಚಾಕ್ರಿ, ರಾಘು ಬೆಲ್ಲದ್, ಗೌತಮ್ ಬಳಗಾನೂರ, ಮಾರ್ಕಂಡಿ ಬೆಲ್ಲದ್, ನಾಗರಾಜ ಚಾಕ್ರಿ, ಮಂಜುನಾಥ ದೊಡ್ಡಮನಿ, ಮನು ಬಿಳಿಎಲೆ ಸೇರಿದಂತೆ ಇತರರು ಪಾಲ್ಗೊಂಡಿದ್ದರು.

Related posts