ಅಂತರ ಗಂಗೆಯನ್ನು ಸ್ವಚ್ಛಗೊಳಿಸಿದ ಶ್ರೀಗಳು

ಭರದಿಂದ ಸಾಗಿದ ಹಿರೇಹಳ್ಳ ಪುನಶ್ಚೇತನಾ ಕಾರ್ಯ
ಕೊಪ್ಪಳ: ನಗರದ ಹಿರೇಹಳ್ಳ ಪುರ್ನಶ್ಚೇತನಾ ಕಾರ್ಯವು ಈಗಾಗಲೇಅಂತಿಮ ಹಂತ ತಲುಪಿದೆ. ಸುಮಾರು 21 ಕಿಲೋ ಮೀಟರ್ ವಿಸ್ತಾರವನ್ನು ಹೊಂದಿರುವ ಈ ಪ್ರದೇಶವು ಈಗಾಗಲೇ 19 ಕಿಲೋಮಿಟರ್ ಸಂಪೂರ್ಣವಾಗಿ ಸ್ವಚ್ಛವಾಗಿದೆ. ಇದರಿಂದಾಗಿ ಹಿರೇಹಳ್ಳ ಪ್ರದೇಶವು ಆಕರ್ಷಕವಾಗಿ, ವಿಸ್ತಾರವಾಗಿ
ಕಂಗೊಳಿಸುತ್ತಲಿದ್ದೂ ಮುಂದಿನ ದಿನಗಳಲ್ಲಿ ಹೊಸದಾದ ಕಾಯಕಲ್ಪಕ್ಕೆ ಸಿದ್ದಗೊಳ್ಳುತ್ತಲಿದೆ. ಇಂದು ಸಹ ದದೇಗಲ್ ಬ್ರಿಡ್ಜ ಎಡಭಾಗದಲ್ಲಿ ಪುನಶ್ಚೇತನಾ ಕಾರ್ಯವು ಚುರುಕಾಗಿ ಜರುಗಿತು. ಅಂತರ ಗಂಗೆಯನ್ನು ಸ್ವಚ್ಛಗೊಳಿಸಿದ ಶ್ರೀಗಳು

ಕೋಳೂರ ಹತ್ತಿರ ಇರುವ ಬ್ರಿಡ್ಜ್ ಕಂ ಬ್ಯಾರೇಜಿನ ಹಿನ್ನೀರಿನ ಬಳಿ ಇರುವಂತಹ
ಬೃಹತ್ ಪ್ರಮಾಣದ ಅಂತರ್ ಗಂಗೆ ಯನ್ನು ತೆಗೆದು ನೀರನ್ನು ಸ್ವಚ್ಛóಗೊಳಿಸುವ ಕಾರ್ಯವು ಪೂಜ್ಯ ಶ್ರೀಗವಿಸಿದ್ಧೇಶ್ವರ ಮಹಾಸ್ವಾಮಿಗಳ ನೇತೃತ್ವದಲ್ಲಿ ಜರುಗಿತು. ಇಂದು ಬೆಳಿಗ್ಗೆ 6 ಗಂಟೆಯಿಂದ ಜರುಗಿದ ಈ
ಕಾರ್ಯದಲ್ಲಿ ಕೋಳೂರ, ಮಂಗಳಾಪುರ ಹಾಗೂ ಹೊರತಟ್ನಾಳ್ ಗ್ರಾಮಗಳ ರೈತರು, ಯುವಕರು ಸೇರಿಕೊಂಡು ಪೂಜ್ಯರೊಂದಿಗೆಕಾರ್ಯನಿರ್ವಹಿಸಿದರು.

Related posts