ಅಂತರ್ ಜಿಲ್ಲೆಯಲ್ಲಿ ಪ್ರಯಾಣಿಸಲು ಪಾಸ್ ಆನಲೈನ್ ನಲ್ಲಿ ಲಭ್ಯ

ಕೋವಿಡ್ – 19 ಸೋಂಕು ಹರಡದಂತೆ ನಿಯಂತ್ರಿಸಲು ದಿನಾಂಕ : 04 – 05 – 2020 ರಿಂದ 2 ವಾರಗಳವರೆಗೆ ಲಾಕ್‌ಡೌನ್ ಅವಧಿಯನ್ನು ವಿಸ್ತರಿಸಿ ಆದೇಶವನ್ನು ಹೊರಡಿಸಿರುತ್ತಾರೆ . ಅಂತರ್ ಜಿಲ್ಲೆಯಲ್ಲಿ ಪ್ರಯಾಣಿಸಲು ಇಚ್ಚಿಸುವ ಪ್ರಯಾಣಿಕರು kspclearpass .idp.mygate . com / ವೆಬ್‌ಸೈಟ್‌ನಲ್ಲಿ ನೋಂದಣಿಯಾಗಿ ಒಂದು ಬಾರಿಗೆ ಏಕಮುಖ ಕಂಚಾರಕ್ಕಾಗಿ ( one fine one – way ) ಪಾಸ್‌ಗಳನ್ನು ಆನ್‌ಲೈನ್ ಮುಖಾಂತರ ಪಡೆದು ಮೊಬೈಲ್‌ನಲ್ಲಿ ತೋರಿಸಿ ಆಥವಾ ಪ್ರಿಂಟ್ ಕಾಪಿಯನ್ನು ಪಡೆದು ಸಂಚರಿಸಬಹುದಾಗಿದೆ . ಈ ಪಾಸ್‌ಗಳನ್ನು ಪಡೆಯಲು ಈ ಕೆಳಕಾಣಿಸಿದ ನಿಬಂಧನೆಗಳ ಇರುತ್ತವೆ . * 1 ) ದ್ವಿಚಕ್ರ ವಾಹನಗಳು ಇದ್ದಲ್ಲಿ ಕೇವಲ ವಾಹನ ಸವಾರ ಮಾತ್ರ ಪ್ರಯಾಣಿಸುವುದು . 2 ) ನಾಲ್ಕು ಚಕ್ರ ( ಲಘು ವಾಹನ ) ವಾಹನಗಳು ಇದ್ದಲ್ಲಿ ವಾಹನ ಚಾಲಕ ಸೇರಿ ಒಟ್ಟು 3 ಜನರು ಮಾತ್ರ ಪ್ರಯಾಣಿಸುವುದು ಹಾಗೂ 12 ವರ್ಷದ ಒಳಗಿನ ಇಬ್ಬರು ಮಕ್ಕಳು ಮಾತ್ರ ಪ್ರಯಾಣಿಸುವುದು . 3 ) ಪ್ರಯಾಣಿಸುವ ಪ್ರಯಾಣಿಕರು ತಮ್ಮ ಒಂದು ಗುರುತಿನ ಚೀಟಿಯನ್ನು ಹಾಜರುಪಡಿಸುವುದು ಕಡ್ಡಾಯ . 4 ) ಯಾವ ಪ್ರದೇಶಕ್ಕೆ ಪಾಸ್ ಪಡೆದುಕೊಂಡು ಪ್ರಯಾಣಿಸುತ್ತಾರೋ ಅದೇ ಪ್ರದೇಶಕ್ಕೆ ಮಾತ್ರ ಪ್ರಯಾಣಿಸುವುದು . 5 ) ಆಗಮ ಹಾಗೂ ನಿರ್ಗಮನ ಸ್ಥಳಗಳಲ್ಲಿ ಯಾವುದೇ ಉಲ್ಲಂಘನೆಗಳು ಕಂಡುಬಂದಲ್ಲಿ ವಾಹನವನ್ನು ಪ್ರಯಾಣಿಸಲು ಪರವಾನಿಗೆಯನ್ನು ನೀಡಲಾಗುವುದಿಲ್ಲ , 6 ) ಈ ನಿಬಂಧನೆಗಳನ್ನು ಉಲ್ಲಂಘಿಸಿದ್ದಲ್ಲಿ ಅರ್ಜಿದಾರರನ್ನು ಕಾನೂನು ಪ್ರಕಾರ ಶಿಕ್ಷೆಗೆ ಗುರಿಪಡಿಸಲಾಗುವುದು .

Please follow and like us:
error