ಅಂತರಾಷ್ಟ್ರೀಯ ಮಟ್ಟದ ಕಬಡ್ಡಿ ಮತ್ತು ೫೦೦೦ ಮೀ. ರನ್ನಿಂಗ್ ರೇಸ್‌ನಲ್ಲಿ ಚಿನ್ನ ಗೆದ್ದ  ಯಮನೂರ  ಭಜಂತ್ರಿ ,ರೇಣುಕಾ ಭಜಂತ್ರಿ

ಕೊಪ್ಪಳ:೧೬, ದಿನಾಂಕ:೧೪-೦೪-೨೦೧೯ ರಂದು ನೇಪಾಳದಲ್ಲಿ ನಡೆದ ಅಂತರಾಷ್ಟ್ರೀಯ ಮಟ್ಟದ ೨೫ ವರ್ಷದ ಒಳಗಿನ ಪುರುಷರ ಕಬಡ್ಡಿ ವಿಭಾಗದಲ್ಲಿ ಭಾರತ ತಂಡವು ವಿಜಯಶಾಲಿಯಾಗಿದ್ದು, ಅದರಲ್ಲಿ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಉಡಮಕಲ್ಲ ಗ್ರಾಮದ ಯುವಕ ಯಮನೂರಪ್ಪ ತಂದೆ ದಿಲೀಪ್ ಭಜಂತ್ರಿ ಇವರು ಭಾಗವಹಿಸಿ ಬ್ಯಾಂಪಿಯನ್ನರಾಗಿ ಬಂಗಾರದ ಪದಕವನ್ನು ಪಡೆದಿದ್ದಾರೆ. ಮತ್ತು ಅದೇ ರೀತಿಯಾದ ರಾಯಚೂರ ಜಿಲ್ಲೆಯ ಹಟ್ಟಿ ಗ್ರಾಮದ ಕುಮಾರಿ ರೇಣುಕಾ ಭಜಂತ್ರಿ ಈಕೆಯು ೫೦೦೦ ಮೀ ರನ್ನಿಂಗ್ ರೇಸ್‌ನಲ್ಲಿ ಭಾಗವಹಿಸಿ ಚಾಂಪಿಯನ್ನರಾಗಿ ಬಂಗಾರದ ಪದಕ ಗೆದ್ದಿದ್ದಾಳೆ. ಇವರು ಅತ್ಯಂತ ಕಡುಬಡವನಾಗಿದ್ದು, ಜೀವನದಲ್ಲಿ ಏನಾದರು ಸಾಧಿಸಬೇಕೆಂದು ಛಲದಿಂದ ಗುರಿಹೊಂದಿ, ಕರ್ನಾಟಕ ಕಬಡ್ಡಿ ಪಂದ್ಯಾವಳಿಯಲ್ಲಿ ಸ್ಥಾನಗಿಟ್ಟಿಸಿಕೊಂಡು ನಮ್ಮ ಜಿಲ್ಲೆಗೆ ಹೆಮ್ಮೆ ತಂದಿದ್ದಾನೆ. ಇವರನ್ನು ನಮ್ಮ ಕೊಪ್ಪಳ ಜಿಲ್ಲೆಯ ಕೊರಮ ಯುವಸೇನೆ ಜಿಲ್ಲಾಧ್ಯಕ್ಷರಾದ   ಡಿ.ಕೆ.ಭಜಂತ್ರಿ, ಕಾರ್ಯದರ್ಶಿಯಾದ ಪರಶುರಾಮ ಉಡಮಕಲ್, ಅಂಬಣ್ಣ ಭಜಂತ್ರಿ, ಇಂದ್ರೇಶ್ ಉಡಮಕಲ್, ರಮೇಶ ಭಜಂತ್ರಿ, ಮಂಜುನಾಥ ಮುಸಲಾಪೂರ, ರವಿ ಭಜಂತ್ರಿ, ರಾಘವೇಂದ್ರ ಕುಷ್ಟಗಿ, ಮುತ್ತಣ್ಣ ನವಲಿ, ಹುಲಗಪ್ಪ ವನಬಳ್ಳಾರಿ, ಪರಶುರಾಮ ಇರಕಲ್ಲಗಡಾ ಮತ್ತು ಸಮಾಜದ ಗುರು-ಹಿರಿಯರು, ತಾಯಂದಿರು, ಸಮಾಜದ ಯುವಕರು ಸಮಾಜದ ವತಿಯಿಂದ ಹೃದಯಪೂರ್ವಕ ಅಭಿನಂದನೆ ಸಲ್ಲಿಸಿದ್ದಾರೆ.

Please follow and like us:
error