ಅಂತರಾಷ್ಟ್ರೀಯ ಫೋಟೋಗ್ರಫಿ ಸ್ಪರ್ಧೆಯಲ್ಲಿ ಚಿನ್ನದ ಪದಕ

ಕಲ್ಕತ್ತಾದ ಶಟ್ಟರ್ ಬರ್ಗ್ ಆರ್ಟ್ ಸೊಸ್ಶೆಟಿಯವರು ನಡೆಸುವ ಇತ್ತೀಚೆಗೆ ಏರ್ಪಡಿಸಿದ್ದ ‘ಸನ್ಸ್ ಶಾಡೊ’ Sun’s Sadow 2nd International ) ) ೨ನೇ ಅಂತರಾಷ್ಟ್ರೀಯ ಫೋಟೋಗ್ರಫಿ ಸ್ಪರ್ಧೆಯಲ್ಲಿ ಕೊಪ್ಪಳದ ಛಾಯಾಗ್ರಾಹಕ ಸತೀಶ ಬಿ.ಮುರಾಳ ‘ಕ್ಲಬ್ ಗೊಲ್ಡ್’ ಚಿನ್ನದ ಪದಕ ಬಂದಿದೆ,
ಒಟ್ಟು ೪ ವಿಭಾಗಗಳು ಅದರಲ್ಲಿ ಪೋಟೋ ಜರ್ನಲಿಸಂ ವಿಭಾಗದ“View of Break Down” ಚಿತ್ರಕ್ಕೆ ಸತೀಶ ಬಿ. ಮುರಾಳ್‌ಗೆ ಬಂಗಾರದ ಪದಕ ಲಭಿಸಿದ್ದು, ಇದರ ಜೊತೆಗೆ ವಿವಿಧ ವಿಭಾಗಗಳಲ್ಲಿ ಒಟ್ಟು ೩ ಛಾಯಾಚಿತ್ರಗಳು ಸ್ಪರ್ಧೆಗೆ ಆಯ್ಕೆಗೊಂಡಿವೆ. ೨೦೧೮ರ ಅಕ್ಟೋಬರ್ ಕೊನೆಯ ವಾರದಲ್ಲಿ ನಡೆದ ಸ್ಪರ್ಧೆಯಲ್ಲಿ ಒಟ್ಟು ೨೦ ದೇಶಗಳ ೧೦೬ ಸ್ಪರ್ಧೆಗಳು ಭಾಗವಹಿಸಿದ್ದರು, ಖ್ಯಾತ ಅಂತರಾಷ್ಟ್ರೀಯ ಛಾಯಾಗ್ರಾಹಕರಾದ ಅವಿಶೇಖ ದಾಸ  ಸಂಜೋಯ ಭಟ್ಟಾಛಾರ್ಯ , ಅಚಿನಾತ ಕುಮರ ಸಹಾ , ಸ್ಪರ್ಧೆಯ ತೀರ್ಪುಗಾರರಾಗಿದ್ದರು. ಅಂಚೆ ಮುಖಾಂತರ ಪದಕವನ್ನು ಕೊಪ್ಪಳದ ಮನೆಯ ವಿಳಾಸಕ್ಕೆ ಕಳುಹಿಸಿಕೊಟ್ಟಿದ್ದಾರೆ, ಇದು ಕೊಪ್ಪಳದ ಛಾಯಾಗ್ರಾಹಕ ಸತೀಶ ಬಿ.ಮುರಾಳ ರ ೬ನೇ ಚಿನ್ನದ ಪದಕ.

Please follow and like us:
error